ಜಷ್ನೆ ಈದ್ ಮಿಲಾದ್ ಪ್ರಯುಕ್ತ ಧಾರ್ಮಿಕ ಕವನ ವಾಚನ ಕಾರ್ಯಕ್ರಮ ಯಶಸ್ವಿ
ಕೊಪ್ಪಳ ಸಪ್ಟಂಬರ್ 28, ಪಕ್ಕದ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಅಂಜುಮನ್ ಶಾದಿ ಮಹಲ್ ಸಭಾಭವನದಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ 6ನೇ ಬಾರಿಗೆ (ನಾತಿಯ ಮುಷಾಯಿರ ) ರಾಜ್ಯಮಟ್ಟದ ಧಾರ್ಮಿಕ ಕವಿಗೋಷ್ಠಿ ,ಕವನ ವಾಚನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು,
ಅಖಿಲ ಕರ್ನಾಟಕ ರಾಜ್ಯಮಟ್ಟದ ನಾತಿಯ ಮುಷಾಯಿರ ಧಾರ್ಮಿಕ ಕವಿಗೋಷ್ಠಿ, ಕವನ ವಾಚನ ಸಮಾರಂಭದ ಅಧ್ಯಕ್ಷತೆಯನ್ನು ಕನೇಕಲ್ ದರ್ಗಾದ ಪೀಠಾಧಿಪತಿ ಹಜರತ್ ಅಲಹಾಜ್ ಸೈಯದ್ ಶಾಹ್ ಅಬ್ದುಲ್ ವಹಾಬ್ ಸಾಹೇಬ್ ಖಾದ್ರಿ ಯವರು ವಹಿಸಿ ಅಧ್ಯಕ್ಷೀಯ ಭಾಷಣ ಮತ್ತು ಧಾರ್ಮಿಕ ಕವನ ವಾಚನ ಮಾಡಿ ಪ್ರವಾದಿ ಪೈಗಂಬರ್ ,,(ಸ,) ರವರ ಜೀವನ ಚರಿತ್ರೆ ಸೀರತ್ ಕುರಿತು ಧಾರ್ಮಿಕ ಕವನ ವಾಚನ ಮಾಡಿ ಸಮಾರಂಭದ ಕೊನೆಯಲ್ಲಿ ಆಶೀರ್ವಚನ ನೀಡಿದರು,
, ಧರ್ಮದ ಗುರುಗಳಾದ ಸೈಯದ್ ಮುಯೋದ್ದೀನ್ ಶಾಹ್ ಖೈಸ ಸಾಹೇಬ್ ಶಿಗ್ಗಾವಿ ,ಪೀರ್ ಜಾದ ಜಲಾಲ್ ಮೆಹಮೂದಿ ಸಾಹಬ್ ಸೇರಿದಂತೆ ಇಸ್ಲಾಂ ಧರ್ಮದ ಅನೇಕ ಗುರುಗಳು ಪಾಲ್ಗೊಂಡಿದ್ದರು,ಅಲ್ಲದೆ ಧಾರ್ಮಿಕ ಕವಿ ಗಳಾದ ರಾಯಚೂರಿನ ಸೈಯದ್ ಶಾ ತಯಿಬ ಖಾದ್ರಿ ಅಶ್ ರಫಿ ನಿಜಾಮಿ ಸಾಹೇಬ್, ಬೆಳಗಾವಿಯ ಸೈಯದ್ ಅಹಮದ್ ಭಾಷಾ ಸಾಬ ಸಾಗರ್, ಬಳ್ಳಾರಿ ಜಿಲ್ಲೆಯ ಹಸನ್ ವಾರ್ಸಿ ಅಧೋನಿಯ ಸಲೀಂ ಅಸ್ಲಾಂ ನಿಜಾಮಿ, ರಾಣಿ ಬೆನ್ನೂರಿನ ಸೈಯದ್ ಏಜಾಜ್ ಅಹಮದ್ ಬಳ್ಳಾರಿಯ ನಾಸಿರ್ ಎಂ, ನದೀಮ್ ನಿಜಾಮಿ, ಮೊಹಸನ್ ಮತ್ತು ಮಹೆಬೂಬ್ ರಜವಿ ಖಾದ್ರಿ ಸಾಹೇಬ್ ಮತ್ತು ಫಾರೋಕ ಶಮ್ಸ್ ಸೈಯದ್ ಜಹೀರ್ ಮೊಹಮ್ಮದ್ ಫನಾ ಪಾಲ್ಗೊಂಡು ತಮ್ಮ ಧಾರ್ಮಿಕ ಕವನ ವಾಚನ ಮಾಡಿ ಜನಮನ ರಂಜಿಸಿದರು ಹಾಗೂ ಗಂಗಾವತಿಯ ಧರ್ಮಗುರು ಮೌಲಾನಾ ಮೊಹಮ್ಮದ್ ಮುಸ್ತಫಾ ಕಮಾಲ್ ಪಾಷಾ ಖಾದ್ರಿ ತಸ್ಕೀನಿ ಸಾಹೇಬ್ ರವರು ಸಹ ವಿಶೇಷ ಧಾರ್ಮಿಕ ಕವನ ವಾಚನ ಮಾಡಿ ಜನರ ಮನಸ್ಸನ್ನು ರಂಜಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಕವಿ ಮತ್ತು ಸಾಹಿತಿ ಸೈಯದ್ ಜಹೀರ್ ಮೊಹಮ್ಮದ್ ಫನಾ ನೆರವೇರಿಸಿದರು,
ಧಾರ್ಮಿಕ ಕವಿಗೋಷ್ಠಿ ಸಮಾರಂಭದ ನೇತೃತ್ವ ವಹಿಸಿದ ಹೊಸಪೇಟೆ ನಗರದ ಅಲ್ಪಸಂಖ್ಯಾತ ಸಮಾಜದ ಹಿರಿಯ ಮುಖಂಡ ಸಮಾಜ ಸೇವಕರಾದ ಅಲ್ಹಜ್ ಆಸಿಫ್ ಅಲಿ ನಿಯಾಜಿ ರವರು ವಹಿಸಿಕೊಂಡು ಪ್ರತಿ ವರ್ಷದಂತೆ ಈ ವರ್ಷವೂ ಸಹ ಆರನೇ ಬಾರಿಗೆ ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ಧಾರ್ಮಿಕ ಕವಿಗೋಷ್ಠಿ ಸಮಾರಂಭ ಆಚರಣೆ ಮಾಡಿರುವುದಕ್ಕೆ ಧರ್ಮ ಗುರುಗಳು ರವರ ನೇತೃತ್ವದಲ್ಲಿ ಅವರ ಸ್ನೇಹಿತರ ಬಳಗ ಮತ್ತು ಅಭಿಮಾನಿ ಬಳಗದವರು ಅವರನ್ನು ಸನ್ಮಾನಿಸಿ ಅಭಿನಂದಿಸಿ ಶುಭ ಕೋರಿದ ಬಳಿಕ ಗುರುಗಳು ಅವರನ್ನು ಆಶೀರ್ವದಿಸಿದರು,