*ಶ್ರೀ ಶಿರಡಿ ಬಾಬಾ ರವರ 107 ನೇ ಮಹಾಸಾಮಾದಿ ಯೋಗ ಮೊಹೋತ್ಸವ ನಿಮಿತ್ತ*
*ಶ್ರೀ ಸಾಯಿ ಮಂದಿರ ಕ್ಯಾಲೆಂಡರ್ ಮತ್ತು ಪುಸ್ತಕ ಬಿಡುಗಡೆ.*
ಬೆಂಗಳೂರು -ಪ್ರತಿದಿನ 8500 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ಉಚಿತವಾಗಿ ವಿತರಿಸುತ್ತಿರುವ -ಶ್ರೀ ಸಾಯಿ ಅಧ್ಯತೀಕ ಕೇಂದ್ರ ಶ್ರೀ ಶಿರಡಿ ಬಾಬಾ ರವರ 107 ನೇ ಮಹಾಸಾಮಾದಿ ಯೋಗ ಮೊಹೋತ್ಸವ ಕಾರ್ಯಕ್ರಮ ವನ್ನ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2 ರವರೆಗೆ ನಡೆಸುತ್ತಿದೆ ನಿಮಿತ್ತವಾಗಿ ಆಧ್ಯಾತ್ಮಿಕ ಕೇಂದ್ರದ 2026 ನೇ ಸಾಲಿನ ಕ್ಯಾಲೆಂಡರ್ ಮತ್ತು ಆರ್ ಪಿ ರಾಮ್ ಮೋಹನ್ ಬರೆದು ಸ್ಟೇರ್ಲಿಂಗ್ ಪಬ್ಲಿಷರ್ಸ್ ಪ್ರಕಟಿಸಿರುವ ಶ್ರೀ ಶಿರಡಿ ಸಾಯಿಬಾಬಾರವರಿಗೆ ಅತ್ಯಂತ ಆಪ್ತ ಶಿಸ್ಯರಾಗಿದ್ದ ರಾಧಾಕೃಷ್ಣ ಸ್ವಾಮೀಜಿ ಅವರ ಕುರಿತು ” ರಾಧಾಕೃಷ್ಣ ಸ್ವಾಮೀಜಿ ಮತ್ತು ಅವರ ಭಕ್ತರು”. ಪುಸ್ತಕವನ್ನು ಇಂದು ಸಂಜೆ ತ್ಯಾಗರಾಜ ನಗರದಲ್ಲಿರುವ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದ ಸಾಯಿ ಮಂದಿರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಚೆನೈನ ಮಾತೆ ಗುರೂಜಿ ಸುಭು ದಿ ಇವರು ಬಿಡುಗಡೆ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ಗುರೂಜಿ ಶ್ರೀ ಸಾಯಿಬಾಬಾ ರವರಿಗೆ ಎಲ್ಲಾ ಧರ್ಮದವರು ಭಕ್ತರಿದ್ದಾರೆ, ಭಕ್ತಿ ಧರ್ಮದ ಎಲ್ಲೆಯನ್ನ ಮೀರಿದೆ. ಪ್ರತಿಯೊಬ್ಬ ಭಕ್ತರು ಅವರ ಭಕ್ತರಾಗಿ, ಅವರ ತತ್ವವನ್ನ ಅನುಸರಿಸಿ ಮುಕ್ತಿಪಡೆಯಿರಿ, ನಮ್ಮ ಜೇವನ ಶುದ್ಧವಾಗಿದ್ದಲ್ಲಿ ಬಾಬಾ ನಿಮ್ಮಲ್ಲಿ ಯಾವತ್ತೂ ಇರುತ್ತಾನೆ ಎಂದು ಆಶೀರ್ವಾಚನ ನೀಡಿದರು.
ವೇದಿಕೆಯಲ್ಲಿ ಆಧ್ಯಾತ್ಮಿಕ ಕೇಂದ್ರದ ಕಾರ್ಯಾಧ್ಯಕ್ಷ ಚಾಂದ್ ರಾಜ್ಪಾಲ್ ಅಧ್ಯಕ್ಷರಾದ ಜ್ಯೋತಿ ರಾಘವನ್ ಉಪಸ್ಥಿತರಿದ್ದರು.
ಸಮಾರಂಭಕ್ಕು ಮೊದಲು ದಿವ್ಯಾ ರಾಘವನ್ ಮತ್ತು ನರಸಿಂಹ ಕಣ್ಣನ್ ಇವರಿಂದ ಭಕ್ತಿ ಗೀತೆ ಕಾರ್ಯಕ್ರಮ ನಡೆಯಿತು . ಮೊಹೋತ್ಸವದ ಏಳು ದಿನಗಳ ಕಾಲ ಅನೇಕ ಧಾರ್ಮಿಕ ಕಾರ್ಯಕ್ರಮ, ಪೂಜೆ ಮತ್ತು ವಿವಿಧ ತಂಡದವರಿಂದ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಎನ್ ನಟರಾಜ್
ಪದ್ಮನಾಭನಗರ