ಪತ್ರಕರ್ತರು ಮತ್ತು ಪತ್ರಕರ್ತರ ಮಕ್ಕಳಿಗಾಗಿ ಚದುರಂಗ ತರಬೇತಿ ಕಾರ್ಯಾಗಾರ ಉದ್ಘಾಟನೆ:
ಮಕ್ಕಳ ಬೌದ್ಧಿಕ ಶಕ್ತಿ ವೃದ್ದಿಗೆ ಚದುರಂಗ ಕಲಿಯುವುದು ಅತ್ಯಗತ್ಯ – ರವಿಕುಮಾರ
ರಾಯಚೂರು:ಅ:12: ಮಕ್ಕಳ ಬೌದ್ಧಿಕ ಶಕ್ತಿ ವೃದ್ದಿಗೆ ಚದುರಂಗ ಕಲಿಯುವುದು ಅತ್ಯಂತ ಅಗತ್ಯವಾಗಿದೆ ಎಂದು ರೋಟರಿ ಕ್ಲಬ್ ರಾಯಚೂರಿನ ಮಾಜಿ ಅಧ್ಯಕ್ಷರಾದ ರವಿಕುಮಾರ ಗಣೇಕಲ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್, ರೋಟರಿ ಕ್ಲಬ್ ರಾಯಚೂರು ಹಾಗೂ ವೇದಾಂತ ಕಾಲೇಜ್ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರು ಮತ್ತು ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಚದುರಂಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಪತ್ರಕರ್ತರು ಸಮಾಜದಲ್ಲಿ ಬುದ್ದಿವಂತರೆಂಬ ಮಾತಿದ್ದು ಅವರ ಮಕ್ಕಳಿಗೆ ಬುದ್ದಿವಂತಿಕೆಗೆ ಚೆಸ್ ತರಬೇತಿ ನೀಡುತ್ತಿರು ವುದು ಶ್ಲಾಘನೀಯ ಎಂದರು.
ವೇದಾಂತ ಕಾಲೇಜಿನ ಆಡಳಿತಾಧಿಕಾರಿ ರಾಕೇಶ ರಾಜಲಬಂಡಿ ಮಾತನಾಡಿ ಚೆಸ್ ಎನ್ನುವುದು ಅತ್ಯಂತ ಬುದ್ದಿವಂತರ ಆಟ ಯಾರು ಇದನ್ನು ಕಲಿಯುತ್ತಾರೊ ಅವರ ಮೆದಳು ಯಾವಾಗಲೂ ಚಟುವಟಿಕೆಯಿಂದ ಇರುತ್ತದೆ ಎಂದರು.
ಮಕ್ಕಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಇಂತಹ ಆಟಗಳನ್ನು ಕಲಿಯಬೇಕು ಒಂದು ಉತ್ತಮ ಕಾರ್ಯಾಗಾರ ಆಯೋಜಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಿಪೋರ್ಟ್ರರ್ಸ್ ಗಿಲ್ಡ್ ಅಧ್ಯಕ್ಷ ವಿಜಯಕುಮಾರ್ ಜಾಗಟಗಲ್ , ಇಂದು ಮಕ್ಕಳು ಮೊಬೈಲ್ ಅತಿಯಾಗಿ ಬಳಕೆ ಮಾಡುತ್ತಿದ್ದಾರೆ ಅದರಲ್ಲಿಯೂ ಇರುವ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು ಎಂಬ ಸದುದ್ದೇಶದಿಂದ ಈ ಚೆಸ್ ತರಬೇತಿ ಆಯೋಜಿಸಿದ್ದೇವೆ ಎಂದರು.
ಸಮಾಜದಲ್ಲಿ ಪತ್ರಕರ್ತರ ವರದಿಗಾರಿಕೆ ಯಷ್ಟೆ ಜವಾಬ್ದಾರಿ ಸಮಾಜಮುಖಿ ಯಾಗಿರಬೇಕೆಂಬ ಆಲೋಚನೆಯಿಂದ ನಗರದ ಎಲ್ಲ ಪತ್ರಕರ್ತರ ಮಕ್ಕಳಿಗೆ ಈ ತರಬೇತಿ ನೀಡುತ್ತಿದ್ದೇವೆ ಎಂದರು.ಈ ಕಾರ್ಯಾಗಾರಕ್ಕೆ ಬೆನ್ನೆಲುಬಾಗಿ ನಿಂತ ಎಲ್ಲ ಪತ್ರಕರ್ತರಿಗೆ ಧನ್ಯವಾದ ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ರಾಯಚೂರು ಅಧ್ಯಕ್ಷ ಕೇಶವರಾವ್, ಚೆಸ್ ಅಸೋಸಿಯೇ ಷನ್ ಕಾರ್ಯದರ್ಶಿ ಮೃತ್ಯುಂಜಯ ಮಾಚನೂರು, ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್, ತರಬೇತುದಾರರಾದ ಹನುಮಂತ ಯಾದವ್, ಶರತ್ ಕುಮಾರ, ಪತ್ರಕರ್ತರಾದ ಕೆ.ಸತ್ಯನಾರಾಯಣ, ಚನ್ನಬಸವಣ್ಣ, ರಂಗನಾಥ್, ಚಂದ್ರಕಾಂತ ಮಸಾನಿ, ಚನ್ನಬಸವ ಬಾಗಲವಾಡ, ವಿಶ್ವನಾಥ ಬಿ.ಸ್ವಾಮಿ, ವಿಶ್ವನಾಥ ಸಾಹುಕಾರ, ರಾಚಯ್ಯಸ್ವಾಮಿ ಮಾಚನೂರು, ಮಂಜುನಾಥ ಸಾಲಿ, ಜಯಕುಮಾರ ದೇಸಾಯಿ ಕಾಡ್ಲೂರು, ಆನಂದ ವಿ.ಕೆ, ಸಂಗಮೇಶ ವಸ್ತ್ರದ, ಬಸವರಾಜ, ಗಂಗಣ್ಣ , ಅಮರೇಶ ಸಜ್ಜನ, ಮಲ್ಲಿಕಾರ್ಜುನ ಸ್ವಾಮಿ, ಸಂದೀಪ ಭಾಗನಗರೆ, ಅರುಣ ಕಂಬದ್ ಸೇರಿದಂತೆ ಹಿರಿಯ ಕಿರಿಯ ಪತ್ರಕರ್ತರು, ಪತ್ರಕರ್ತರ ಮಕ್ಕಳಿದ್ದರು.
ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ ಸ್ವಾಗತಿಸಿದರೆ, ಖಜಾಂಚಿ ಸಣ್ಣ ಈರಣ್ಣ ನಿರೂಪಿಸಿದರು,ಜಂಟಿ ಕಾರ್ಯದರ್ಶಿ ಶ್ರೀಕಾಂತ್ ಸಾವೂರು ವಂದಿಸಿದರು.