ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಮಡಿವಾಳಪ್ಪ ಪಾಟೀಲ್*
ಕೆಂಭಾವಿ:- ಶಿಕ್ಷಕರು ದೇಶೆ ಕಟ್ಟುವಲ್ಲಿ ಪ್ರಮುಖ ಪಾತ್ರ ಇದೆ ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಜೊತೆಗೆ ಮಾನವೀಯ ಮೌಲ್ಯಗಳು ಮತ್ತು ಉತ್ತಮ ಸಂಸ್ಕಾರ ನೀಡುವುದು ಪ್ರತಿಯೊಬ್ಬ ಶಿಕ್ಷಕರ ಪಾತ್ರವಾಗಿದೆ ಎಂದು ಶಿಕ್ಷಕ ಹಾಗೂ ಸಾಹಿತಿಯಾದ ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ ಹೇಳಿದರು
.
ಕೆಂಭಾವಿ ಪಟ್ಟಣದಲ್ಲಿ ನಡೆಯುತ್ತಿರುವ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ , ಅವರು ಸುಮಾರು ಹದಿನೈದು ವರ್ಷಗಳ ನಂತರ ಶಾಲೆಯ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಆಯೋಜಿಸಿದ್ದು ತುಂಬಾ ಶ್ಲಾಘನೀಯ ಕಾರ್ಯ ಬೆಟ್ಟದ ಮೇಲಿರುವ ನೆಲ್ಲಿಕಾಯಿ ಸಮುದ್ರದಲ್ಲಿರುವ ಉಪ್ಪು ಎತ್ತಣ ದಿತ್ತ ಸಂಬಂಧವಯ್ಯ ಎನ್ನುವಂತೆ ವಸತಿ ಶಾಲೆಯಿಂದ ಹದಿನೈದು ವರ್ಷಗಳ ನಂತರ ದೂರ ದೂರ ಇದ್ದಾ ಎಲ್ಲಾ ಗುರು ಶಿಷ್ಯರು ಒಟ್ಟಿಗೆ ಸಮಾಗಮ ವಾಗಿದ್ದು ನನಗೆ ತುಂಬಾ ಖುಷಿ ಆಗಿದೆ ಇವತ್ತಿನ ದಿನಗಳಲ್ಲಿ ಗುರು ಶಿಷ್ಯರ ಸಂಭಂದ ಅಷ್ಟೋಂದು ಚೆನ್ನಾಗಿಲ್ಲ ಅಲ್ಲಮಪ್ರಭುಗಳವರು 12ನೇ ಶತಮಾನದಲ್ಲಿ ಹೇಳಿದ ವಚನ ಮಾತು ಇವತ್ತು ಅದು ನಿಜವೆನಿಸುತ್ತದೆ ಗುರುವೇನೂ ಮಹಾ ಅನ್ನುವ ಕಾಲದಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳು ಗುರುಗಳ ಮೇಲೆ ಇಟ್ಟಿರುವ ಭಕ್ತಿ ನಮ್ಮೆಲ್ಲ ಗುರುಗಳಿಗೆ ಸಂತೋಷವೆನಿಸುತ್ತದೆ ಗುರುವಿನ ಗುಲಾಮನಾಗುವ ತನಕ ದೊರೆಯುವುದನ್ನ ಮುಕ್ತಿ ಎನ್ನುವ ವಾಣಿಯಂತೆ ಗುರುಗಳ ಪಾಠ ಪ್ರವಚನಗಳನ್ನ ಕೇಳಿಕೊಂಡು ಇವತ್ತು ಅದೆಷ್ಟು ವಿದ್ಯಾರ್ಥಿಗಳು ಡಾಕ್ಟರ್ಸ್ ಇಂಜಿನಿಯರ್ಸ್ ಪೊಲೀಸ್ ಪಿಎಸ್ಐ ಶಿಕ್ಷಕರು ದೊಡ್ಡ ದೊಡ್ಡ ಉದ್ಯಮಿದರರಾಗಿದ್ದು ನೋಡಿದರೆ ಗುರುವಿಗೆ ತುಂಬಾ ಸಂತೋಷವಾಗುತ್ತದೆ ಇನ್ನು ಕೆಲವು ವಿದ್ಯಾರ್ಥಿಗಳು ಗುರುಗಳ ಮಾತನ್ನು ಕೇಳದೆ ಅವರ ಪರಿಸ್ಥಿತಿ ನೋಡಿದರೆ ನಮ್ಮ ಮನಸ್ಸಿಗೆ ತುಂಬಾ ನೋವಾಗುತ್ತದೆ ಅದಕ್ಕೆ ಕಲಿಯುವ ವಯಸ್ಸಿನಲ್ಲಿ 25 ವರ್ಷಗಳ ಕಾಲ ಯಾವ ವಿದ್ಯಾರ್ಥಿ ತದೆಕಚಿತ್ತದಿಂದ ಪಾಠ ಪ್ರವಚನ ಕೇಳುತ್ತಾನೋ ಅಂತ ವಿದ್ಯಾರ್ಥಿ 75 ವರ್ಷಗಳ ಕಾಲ ಸುಖಕರ ಜೀವನ ನಡೆಸಬಲ್ಲನು ದೇವನೂರು ಮಹದೇವರ ಹೇಳಿದಂತೆ ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಇವತ್ತೆಲ್ಲಾ ನಾಳೆ ಫಲ ಕೊಡುತ್ತವೆ ಅದಕ್ಕೆ ವಿದ್ಯಾರ್ಥಿಗಳು ಜ್ಞಾನ ಸಂಪಾದನೆ ಮೊದಲ ಗುರಿಯಾಗಬೇಕು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಕೆಲಸವಾಗಬೇಕು ಎಂದು ಹೇಳಿದರು . ಮುಂದೆ ಭೀಮರಾಯ ಪಾಟೀಲ್ ಅವರು ಮಾತನಾಡಿ ನಾನು ಸುಮಾರು ವರ್ಷಗಳ ಕಾಲ ಈ ಶಾಲೆಯಲ್ಲಿ ಪ್ರಾಂಶುಪಾಲನಾಗಿ ಸೇವೆ ಮಾಡಿ ತೃಪ್ತಿ ತಂದಿದೆ ಮತ್ತು ನನ್ನ ಹೊಳೆಯ ವಿದ್ಯಾರ್ಥಿಗಳು ಸಾಧನೆ ನೋಡಿ ನಾನಂತೂ ತುಂಬಾ ಖುಷಿ ಪಟ್ಟಿದ್ದೇನೆ ಇನ್ನೂ ಶಾಲೆಯ ಕೀರ್ತಿ ಹೆಚ್ಚಿಸುವ ಕೆಲಸವಾಗಲಿ ನಾನು ಕೂಡ ಈ ವಸತಿ ಶಾಲೆಗೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದು ಹೇಳಿದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಸಮ್ಮ ಪಾಟೀಲ್ ಅವರ ಮಾತನಾಡಿ ಇವತ್ತಿನ ದಿನಗಳಲ್ಲಿ ಗುರು ಶಿಷ್ಯರ ಕೂಡುವುದು ಬಹುಳ ಅಪರೂಪ ಆದರೆ ಈ ಶಾಲೆಯ ನನ್ನ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ತನು ಮನ ಧನ ಸಮಯ ಕೊಟ್ಟು ಇವತ್ತಿನ ಕಾರ್ಯಕ್ರಮ ಯಶಸ್ವಿ ಆಗಬೇಕಾದರೆ ನಿಮ್ಮೆಲ್ಲರ ಪ್ರಯತ್ನ ಸಾಕಷ್ಟು ಇದೆ ಎಂದು ಹೇಳಿದರು.
.ಶ್ವೇತಾ ರಾಖಾ ಹಾಗೂ ವಗ್ಗರ ಸರ್ ಮಾತನಾಡಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸತಿ ಶಾಲೆಯ ಪ್ರಾಂಶುಪಾಲರಾದ ಅಪ್ಪು ರಾಠೋಡ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಯಲ್ಲಪ್ಪ ಸರ್, ಶಾಂತಲಿಂಗ ಪಾಟೀಲ್,ಮೈಹಿಬೂಬ ಪಟೇಲ್ ಪ್ರಕಾಶ್,ವಗ್ಗರ ಸರ್ ಭಾಗ್ಯಮ್ಮ ಪಾಟೀಲ್, ಶರಣಯ್ಯ ಸಗರ, ಶಿವಶರಣಪ್ಪ ಬಾಣಂತಿಹಾಳ,ದೇವೇಂದ್ರಪ್ಪ ಕರಡಕಲ್, ದೈಹಿಕ ಶಿಕ್ಷಕರಾದ ಮಡಿವಾಳಪ್ಪ ಹೆಗ್ಗನದೊಡ್ಡಿ,ಗುತ್ತನಗೌಡ,ಪವನ್ ಕುಲಕರ್ಣಿ, ಗುರುಪಾದಪ್ಪ ಗೋಡ್ರಿಹಾಳ, ಬಸವಲಿಂಗಯ್ಯ ಹಿರೇಮಠ, ಶಿವುಕುಮಾರ ಬೈಬಾಳ ಆಸೀಫ್ ತಿಪ್ಪಣ್ಣ ಸಂಗೀತಾ ತೋಟೇಶ್ವರಿ ಸುವರ್ಣ ಸರಿತಾ, ಸವಿತಾ ತಿಪ್ಪಣ್ಣ, ಶ್ರೀಕಾಂತ್,ಇತರರು
ಉಪಸ್ಥಿತರಿದ್ದರು ಸಂಗೀತಾ ಸುರಪುರ ನಿರೂಪಿಸಿದರು ಬಸವಲಿಂಗಯ್ಯ ಹಿರೇಮಠ ಸ್ವಾಗತಿಸಿದರು ಶಿವಾನಂದ ವಂದಿಸಿದರು