ಇಂದು ಕೊಪ್ಪಳ ಜಿಲ್ಲಾ ಉತ್ಸವ ದಲ್ಲಿ ವಿವಿಧ
ಕ್ಷೇತ್ರದ ಹಲವರಿಗೆ ಕೊಪ್ಪಳ ಐಸಿರಿ ಪ್ರಶಸ್ತಿ ಪ್ರಧಾನ
ಕೊಪ್ಪಳ ಆಗಸ್ಟ್ 22, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಸಾಹಿತ್ಯ ಭವನ ದಲ್ಲಿ ದಿ, 23 ರಿಂದ ದಿ, 25 ರವರೆಗೆ ಜರುಗಲಿರುವ ಕೊಪ್ಪಳ ಜಿಲ್ಲಾ ಉತ್ಸವ ದಲ್ಲಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಲವೂ ಜನ ಗಣ್ಯರಿಗೆ ಜಿಲ್ಲಾ ಉತ್ಸವದ ಮೊದಲ ದಿನ ವಾದ ದಿ, 23ರ ಶನಿವಾರ ಸಂಜೆ 7:30ಕ್ಕೆ ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಪ್ಪಳ ಐಸಿರಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು,
ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿಯ ಸದಸ್ಯರಾದ ಹನುಮೇಶ್ ಕೋವಿ ಯವರ ಉತ್ತಮ ಜನಪರ ಸೇವೆಗಾಗಿ, ವೃತ್ತಿ ಶಿಕ್ಷಣ ಸೇವೆಗಾಗಿ ನಿವೃತ್ತಿ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ್ ಅವರ ವೃತ್ತಿ ಶಿಕ್ಷಣದ ಉತ್ತಮ ಸೇವೆಗಾಗಿ, ವಾಣಿಜ್ಯ ಮತ್ತು ಸಮಾಜ ಸೇವೆಗಾಗಿ ಉದ್ಯಮಿ ಯಾಗಿರುವ ಲಕ್ಷ್ಮಿ ಕಲ್ಯಾಣ ಮಂಟಪದ ಪ್ರೊ, ರಾಮಚಂದ್ರಪ್ಪ ಅಡ್ಡೆದಾರ್ ರವರಿಗೆ, ತಾಂತ್ರಿಕ ಮತ್ತು ರಕ್ಷಣೆ ಸೇವೆಗಾಗಿ ಕಿರ್ಲೋಸ್ಕರ್ ಕಾರ್ಖಾನೆಯ ಫೋರ್ ಮೆನ್ ರಾಚಪ್ಪ ಗೊಂಡಬಾಳ ರವರ ಉತ್ತಮ ಸೇವೆಗಾಗಿ, ಸಮಾಜ ಸೇವೆಗಾಗಿ ಉದ್ಯಮಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಯುವ ನಾಯಕ ಕಿನ್ನಾಳ ಗ್ರಾಮದ ನಿವಾಸಿ ಮಹಿಬೂಬ್ ಬಾದಾಮಿ ಯವರಿಗೆ, ಉತ್ತಮ ಪ್ರವಾಸಿ ತಾಣದ ಸೇವೆಗಾಗಿ ತಾಲೂಕಿನ ಬಸಾಪುರ್ ಲಿಯೋ ಉಡನ್ ರಿಸಾರ್ಟ್ ನ ಪ್ರೊ, ಶಿರೀಶ್, ಪಿ, ಹಾಗೂ ಸರ್ಕಾರಿ ನೌಕರರ ಸಂಘ ಕೊಪ್ಪಳ ಜಿಲ್ಲಾ ಘಟಕದ ವ್ಯವಸ್ಥಾಪಕ ಯಶವಂತ್ ಕುಮಾರ್ ರವರ ಉತ್ತಮ ಸೇವೆ ಅಲ್ಲದೆ ಕಿನ್ನಾಳ ಗ್ರಾಮದ ನಿವಾಸಿ ಜನಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದ ವೀರೇಶ್ ,ಪಿ ,ಕಲಾಲ್ (ಗುಜರೆ ಕಾರ್) ರವರುಗಳಿಗೆ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆ ವತಿಯಿಂದ ಕೊಡ ಮಾಡುವ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ಶನಿವಾರದಂದು ಪ್ರಧಾನ ಮಾಡಲಾಗುವುದು ಎಂದು ಕಾರ್ಯಕ್ರಮ ದ ಸಂಘಟಕ ಹಾಗೂ ಸಂಚಾಲಕ ಮಹೇಶ್ ಬಾಬು ಸುರ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,