ಸಾಧನೆಗೂ ಮೀರಿದ ಸಾಧನೆ ಮಾಡಿದ ಸಾಧಕ
ಪತ್ರಿಕಾ ರಂಗದ ಅಜಾತಶತ್ರು ಸಾಧಿಕ್ ಅಲಿ
ಕೊಪ್ಪಳ : ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಹಂಬಲ ಇದ್ದೇ ಇರುತ್ತೆ ಬಿಡಿ. ಆದರೆ ಸಾಧನೆಗೂ ಮೀರಿದ ಸಾಧನೆ ಮಾಡಿದ ಸಾಧಕ ನಮ್ಮ ಮಧ್ಯೆ ಇದ್ದಾರೆ ಅವರೇ ಪತ್ರಿಕಾ ರಂಗದ ಅಜಾತಶತ್ರು ಎಂ ಸಾಧಿಕ್ ಅಲಿ ಎಂದರೆ ಬಹುತೇಕ ತಪ್ಪಾಗಲಾರದು.
1963ರ ಕಾಲಘಟ್ಟದಲ್ಲಿ ಕೊಪ್ಪಳದ ಸಜ್ಜನ ದಂಪತಿಗಳಾದ ಎಂ ಉಸ್ಮಾನ ಅಲಿ ಹಾಗೂ ತಾಜ್ ಬೀ ದಂಪತಿಗಳ ಮಡಿಲಲ್ಲಿ 23-08-1963 ರಂದು ಎಂ ಸಾಧಿಕ್ ಅಲಿ ಅವರ ಜನನವಾಯಿತು. ತಂದೆ-ತಾಯಿಯವರ ಸಾಮಾಜಿಕ ಕಾರ್ಯಗಳನ್ನ ಹಾಗೂ ಸಾಮಾಜಿಕ ಚಿಂತನೆಗಳನ್ನ ನೋಡುತ್ತಾ ಬೆಳೆದ ರವರು ತಮ್ಮ ಬಾಲ್ಯದ ಶಿಕ್ಷಣವನ್ನ ಕೊಪ್ಪಳದಲ್ಲೇ ಮಾಡಿದರು. ಹೆಚ್ಚು ಶಿಕ್ಷಣದ ಕಡೆ ಆಸಕ್ತಿ ಹೊಂದಿದ ಕಾರಣದಿಂದಾಗಿ ಸಾಧಿಕ್ ಅಲಿ ರವರು ಹೆಚ್ಚಿನ ಅಭ್ಯಾಸ ಮಾಡಿ ಬಡ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಬಿ.ಎ.ಬಿ.ಇ.ಡಿ (ಹಿಂದಿ) ನಲ್ಲಿ ಉತ್ತೀರ್ಣರಾದರು. ತಮ್ಮ ವಾರ್ಡ್ ನಲ್ಲಿರುವ ಶಿಕ್ಷಣ ವಂಚಿತರಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಹೇಳುವ ಮೂಲಕ ಶಿಕ್ಷಣ ಮಾರ್ಗದರ್ಶಕರಾಗಿ ಸೇವೆಯನ್ನು ಸಲ್ಲಿಸಿದರು.
*ಡಿ.ವಿ.ಜಿ ಪ್ರೇರಣೆ ಪತ್ರಿಕಾ ರಂಗಕ್ಕೆ ಪ್ರವೇಶ*
ತಮ್ಮ ಕಾಲೇಜಿನ ಅವಧಿಯಲ್ಲಿ ಎಂ ಸಾಧಿಕ್ ಅಲಿ ರವರು ದಿನನಿತ್ಯ ಬೆಳಗಾಯಿತು ಅಂದರೆ ಸಾಕು ಡಿ.ವಿ.ಜಿಯವರ ಬರಹಗಳು ಹಾಗೂ ಕನ್ನಡ ದಿನಪತ್ರಿಕೆಗಳನ್ನ ಓದುತ್ತಾ ಪತ್ರಿಕಾರಂಗ ಪ್ರವೇಶ ಮಾಡಲು ಅವರಿಗೆ ಹೆಚ್ಚು ಪ್ರೇರಣೆಯಾಯಿತು. 1997ರಲ್ಲಿ ಪ್ರಜಾಪ್ರಪಂಚ ಪತ್ರಿಕೆಯ ಸಂಪಾದಕರು ಇವರ ಜಾಣ್ಮೆ ಹಾಗೂ ಪತ್ರಿಕಾ ಆಸಕ್ತಿ ಇರುವ ಕಾರಣ ಇವರನ್ನ ಗುರುತಿಸಿ ಎಂ ಸಾಧಿಕ್ ಅಲಿ ಅವರನ್ನು ಕೊಪ್ಪಳ ಜಿಲ್ಲಾ ವರದಿಗಾರನಾಗಿ ನೇಮಕ ಮಾಡುವ ಮೂಲಕ ಸಾಧಿಕ್ ಅಲಿ ರವರು ಪತ್ರಿಕಾ ರಂಗಕ್ಕೆ ಪದಾರ್ಪಣೆ ಮಾಡಿದರು.
*ರಾಜ್ಯದ ಪ್ರತಿಷ್ಠಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನೇಮಕ*
ಸದಾ ಪತ್ರಿಕಾ ವೃತ್ತಿ ಕಾರ್ಯಗಳನ್ನ ಮಾಡುತ್ತಾ ಬೆಳೆದ ಎಂ ಸಾಧಿಕ್ ಅಲಿ ರವರಿಗೆ ಅವರ ಜಾಣ್ಮೆ ಹಾಗೂ ಒಡನಾಟದಿಂದ ರಾಜ್ಯದ ಪ್ರತಿಷ್ಠಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಎರಡು ಬಾರಿ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಎರಡು ಬಾರಿ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದು.ಇಂದು ಕೂಡ ಪತ್ರಿಕಾ ರಂಗದ ಅಜಾತ ಶತ್ರುವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
*ಪತ್ರಿಕಾ ಆರಂಗದ ಅಜಾತಶತ್ರು ಸಾಧಿಕ್ ಅಲಿ*
ಹೌದು ಇತ್ತೀಚಿನ ದಿನಗಳಲ್ಲಿ ಪತ್ರಿಕಾ ರಂಗದಲ್ಲಿ ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಅಪಸ್ವರ ಎಂಬಂತೆ 1997 ರಿಂದ 2025ರ ವರೆಗೆ ಕೊಪ್ಪಳ ಜಿಲ್ಲೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆತ್ಮೀಯ ಸ್ನೇಹಿತರನ್ನ ಗಳಿಸಿರುವ ಹಾಗೂ ಯಾರಿಗೂ ಕೇಡನ್ನು ಬಯಸದ ಸ್ನೇಹಜೀವಿಯಾಗಿ ಪತ್ರಿಕಾ ರಂಗದ ಅಜಾತಶತ್ರುವಾಗಿ ಎಂ ಸಾಧಿಕ್ ಅಲಿ ಅವರನ್ನು ಅನೇಕರು ಕರೆಯುತ್ತಾರೆ. ಪತ್ರಿಕಾ ರಂಗದ ಕುರಿತು ಇಂದಿನ ಯುವ ಪತ್ರಕರ್ತರಿಗೆ ಅಂದಿನ ನೆನಪುಗಳನ್ನ ಹಾಗೂ ಪತ್ರಿಕಾ ರಂಗದಲ್ಲಿ ಹೇಗೆ ಕಾರ್ಯಗಳನ್ನ ಮಾಡಬೇಕು ಎಂಬುವ ಮಾರ್ಗದರ್ಶನವನ್ನ ಸಲಹೆ, ಸೂಚನೆಗಳನ್ನು ಕೊಡುತ್ತಾ ಯುವ ಪತ್ರಕರ್ತರಿಗೂ ಅಚ್ಚುಮೆಚ್ಚಿನ ಹಿರಿಯ ಪತ್ರಕರ್ತರಾಗಿ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಪ್ರಶಸ್ತಿಗಳನ್ನ ಸಮಾಜ ಸೇವೆಗಳನ್ನ ಮಾಡುವ ಮೂಲಕ ಸಾಧನೆಗೂ ಮೀರಿದ ಸಾಧಕರಾಗಿ ಅಜಾತ ಶತ್ರುಗಳಾಗಿ ನಮ್ಮ ಮುಂದೆ ಇಂದು ಇರುವ ಎಂ ಸಾಧಿಕ್ ಅಲ್ಲಿ ರವರಿಗೆ ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಪ್ರಶಸ್ತಿಗಳು ಹಾಗೂ ಸೇವೆ ನೀಡಲಿ ಎನ್ನುವುದೇ ನಮ್ಮೆಲ್ಲರ ಅಭಿಲಾಷೆಯಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಸೇವೆಯ ವಿವರ :
1985 ರಿಂದ ಅಧ್ಯಕ್ಷರು, ಅಫ್ತಾಬ್ ಅಸೋಸಿಯೇಷನ್ (ಸೇವಾ ಸಂಸ್ಥೆ) ಕೊಪ್ಪಳ
ನಿರ್ದೇಶಕರು, ಅಂಜುಮನ್ ಖಿದ್ದತೆ ಮುಸ್ಲಿಮೀನ್ ಸಂಸ್ಥೆ, ಕೊಪ್ಪಳ
ನಿರ್ದೇಶಕರು, ಬಜ್ಜಯಾ ಉರ್ದು ಅದಬ್ ಸಂಸ್ಥೆ, ಕೊಪ್ಪಳ
1991 ರಲ್ಲಿ ಸರ್ದಾರ್‌ವಲ್ಲಭಾಯಿ ಪಟೇಲ್ ಹಿಂದಿ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಸಮಾಜ ಸೇವಾ ವಿಭಾಗದ ಕಾರ್ಯದರ್ಶಿ
1991 ರಿಂದ 1995 ರವರೆಗೆ ಅಂದಿನ ರಾಯಚೂರು ಜಿಲ್ಲೆಯ ರಾಷ್ಟ್ರೀಯ ಕಾರ್ಯಕ್ರಮವಾದ ಸಂಪೂರ್ಣ ಸಾಕ್ಷರತಾ ಆಂದೋಲನ ಕಾರ್ಯಕ್ರಮದಲ್ಲಿ ವಾರ್ಡ್ ಸಂಯೋಜಕ, ನಗರ ಸಂಯೋಜಕ, ರಾಯಚೂರು ಜಿಲ್ಲಾ ಸಂಯೋಜಕ, ಉರ್ದು ಸಂಪನ್ಮೂಲ ವ್ಯಕ್ತಿ (ಮಾಸ್ಟರ್ ಟ್ರೇನರ್)
1993 ರಿಂದ 1995 ರವರೆಗೆ ಕೊಪ್ಪಳ ತಾಲೂಕು ಕಾರ್ಯದರ್ಶಿಯಾಗಿ ತಹಸೀಲ್ದಾರರವರ ಅಧ್ಯಕ್ಷತೆಯಲ್ಲಿನ ಸಮಿತಿಯಲ್ಲಿ ಸಾಕ್ಷರತಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗಿ.
1996 ರಲ್ಲಿ ಎಸ್.ಬಂಗಾರಪ್ಪನವರ ಕೆಸಿಪಿ ಪಕ್ಷದ ಕೊಪ್ಪಳ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಸೇವೆ ಮತ್ತು ಕೊಪ್ಪಳ ಪುರಸಭೆಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿ ಸೇವೆ
1999ರಲ್ಲಿ ಅಧ್ಯಕ್ಷರು, ಮುಖ್ಯ ಸಲಹೆಗಾರರು, ಆಡಳಿತ ಮಂಡಳಿ ನಿರ್ದೇಶಕರು, ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ, ಕೊಪ್ಪಳದಲ್ಲಿ ಸೇವೆ.
ಪತ್ರಿಕಾ ರಂಗದಲ್ಲಿ ವಿವಿಧ ಹುದ್ದೆ ಮತ್ತು ಸೇವೆ :
1997 ರಲ್ಲಿ ಪ್ರಜಾಪ್ರಪಂಚ ಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರರಾಗಿ ಪತ್ರಿಕಾ ರಂಗಕ್ಕೆ ಪಾದಾರ್ಪಣೆ.
* 1998 ರಲ್ಲಿ ಸುದ್ದಿಮೂಲ ಪತ್ರಿಕೆಯ ಜಿಲ್ಲಾ ವರದಿಗಾರರು
1999 ರಲ್ಲಿ ನಾಗರಿಕ ಪತ್ರಿಕೆಯ ಜಿಲ್ಲಾ ವರದಿಗಾರರು
2000 ರಿಂದ ಇಂದಿನ ವರೆಗೆ ಲೋಕದರ್ಶನ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪತ್ರಕರ್ತರ ವೇದಿಕೆಯ ಕೊಪ್ಪಳ ತಾಲೂಕಾಧ್ಯಕ್ಷರಾಗಿ ಸೇವೆ
ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆಯ ಅಧ್ಯಕ್ಷರಾಗಿ ಸೇವೆ
ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಮಂಟಪದ ಕೊಪ್ಪಳ ತಾಲೂಕಾಧ್ಯಕ್ಷರಾಗಿ ಸೇವೆ
* ತಿರುಳನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಸೇವೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರಕಾರಿಣಿ ಸಮಿತಿ ಸದಸ್ಯರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾಧ್ಯಕ್ಷರಾಗಿ (2 ಅವಧಿಗೆ) ನಂತರ ರಾಜ್ಯ ಕಾರಕಾರಿಣಿ ಸಮಿತಿಗೆ ಚುನಾವಣೆ ಮೂಲಕ ಆಯ್ಕೆಯಾಗಿ ಪತ್ರಿಕಾ ರಂಗದಲ್ಲಿ ಸೇವೆ.
*ಪ್ರಶಸ್ತಿ ಮತ್ತು ಸನ್ಮಾನಗಳು*
*ಫಕೀರಸ್ವಾಮಿ ಹೊಗಾರ ಸ್ಮಾರಕ ಪ್ರಶಸ್ತಿ*
*ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ*
*ಸಿದ್ದಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿ*
*ಶ್ರೀ ರಾಘವೇಂದ್ರಸ್ವಾಮಿ ಸದ್ಭಾವನಾ ಪ್ರಶಸ್ತಿ*
*ಕರುನಾಡ ಭೂಷಣ ಪ್ರಶಸ್ತಿ*
*ಕರುನಾಡ ಪದ ಪ್ರಶಸ್ತಿ*
*ಆದರ್ಶ ದಂಪತಿಗಳ ಪ್ರಶಸ್ತಿ*
*ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ*
*ರಾಷ್ಟ್ರೀಯ ವಿಕಾಸ ರತ್ನ ಪ್ರಶಸ್ತಿ*
*ಡಾ.ಎ.ಪಿ.ಜಿ.ಅಬುಲ್‌ಕಲಾಂ ಸ್ಮಾರಕ ಪ್ರಶಸ್ತಿ*
*ಕೆಯುಡಬ್ಲ್ಯೂಜೆಯಿಂದ ಡಿ.ವಿ.ಗುಂಡಪ್ಪನವರ ಸ್ಮಾರಕ ಪ್ರಶಸ್ತಿ*
*ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಪ್ರಶಸ್ತಿ (2017)*
*ಕರ್ನಾಟಕ ಉರ್ದು ಅಕಾಡೆಮಿಯಿಂದ ಸನ್ಮಾನ ಮತ್ತು ಪ್ರಶಸ್ತಿ*
*ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಮತ್ತು ವಿಶಾಲ ಪ್ರಕಾಶನದಿಂದ ಕರುನಾಡ ಚೇತನ ಪ್ರಶಸ್ತಿ*
* *ಎಂ ಸಾಧಿಕ್ ಅಲಿ ರವರ ಸೇವೆಯನ್ನ ಗುರುತಿಸಿ ಸೇವಾ ಸಂಸ್ಥೆ ವತಿಯಿಂದ ಸೇವಾಶ್ರೀ ಪ್ರಶಸ್ತಿ*
*ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಸ್ಥೆಯಿಂದ ನೇತಾಜಿ ಪ್ರಶಸ್ತಿ*
ಹೀಗೆ ಅನೇಕ ಪ್ರಶಸ್ತಿಗಳು ಸನ್ಮಾನಗಳು ಲಭಿಸಿವೆ.