ಅಬ್ದುಲ್ ಸಾಬ ಬಿ.ಕೊಡಗಲಿ ಪೈಗಂಬರವಾಸಿಗಳಾದರು..
ಬಾಗಲಕೋಟೆ/ ಇಳಕಲ್ : ನಗರದ ಮುಸ್ಲಿಂ ಸಮುದಾಯದ,ಹಾಯ್ ಮಿಂಚು ಪತ್ರಿಕೆಯ ಸಂಸ್ಥಾಪಕ ಸಂಪಾದಕ ಮಂಡಳಿ ಸದಸ್ಯರು, ಲಿಂ.ಹಾಜಿ ಬಾವಾಸಾಹೇಬ ಕೊಡಗಲಿಯವರ ದ್ವಿತೀಯ ಸುಪುತ್ರರಾದ ಅಬ್ದುಲಸಾಬ ಬಿ.ಕೊಡಗಲಿಯವರು (70)ಇಂದು 9/04/2025 ಬುಧವಾರ, ಬೆ.7.30 ಗಂಟೆಗೆ ಪೈಗಂಬರವಾಸಿಗಳಾದರು ಎಂದು ತಿಳಿಸಲು ವಿಷಾದಿಸುತ್ತೇವೆ..
ಮೃತರು ಹೆಂಡತಿ, ಮೂರು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು, 5 ಜನ ಸಹೋದರರು, 5 ಜನ ಸಹೋದರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದು, ಸಂಜೆ 5-30 ಗಂಟೆಯ ವರೆಗೆ ಅಂತಿಮ ದರ್ಶನದಲ್ಲಿ ನಗರದ ಅಪಾರ ಸಂಖ್ಯೆಯಲ್ಲಿ ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು.
ಸಂತಾಪ : ಕರ್ನಾಟಕ ರಾಜ್ಯ ವೀರ ಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಹುನಗುಂದ ಮತಕ್ಷೇತ್ರದ ಶಾಸಕರಾದ ವಿಜಯಾನಂದ ಎಸ್.ಕಾಶಪ್ಪನವರ, ಬಾಗಲಕೋಟೆ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ವೆಂಕಟೇಶ ಸಾಕಾ, ಜಿ.ಪಂ.ಮಾಜಿ ಸದಸ್ಯ ನರಗುಂದ ಮಹಾಂತೇಶ, ನಗರಸಭೆ ಸದಸ್ಯರು, ಇತರೆ ಪ್ರಮುಖ ಗಣ್ಯರು, ಅಮನ್ ವೆಲ್ ಫೇರ ಅಸೋಸಿಯೇಷನ್ ಸದಸ್ಯರು, ಏಕ ಮಿನಾರ ಮಸಜಿದ ಜಮಾತಿನ ಎಲ್ಲ ಸದಸ್ಯರು ಕೊಡಗಲಿ ಪರಿವಾರದವರಿಗೆ ಅಬ್ದುಲಸಾಬ ಕೊಡಗಲಿ ಯವರ ಅಗಲಿಕೆಯೂ ದೇವರು ಅವರ ನೋವು ಭರಿಸಲಿ ಎಂದು ಸಂತಾಪ ಸೂಚಿಸಿದರು.