ಕ್ರೂರ ಆರೋಪಿಗೆ ಗುಂಡಿಟ್ಟ ನೇರ, ನಿಷ್ಠುರ , ಪ್ರಾಮಾಣಿಕ ಪಿ.ಎಸ್.ಐ. ಅನ್ನಪೂರ್ಣ
ಹುಬ್ಬಳ್ಳಿ. ಏಪ್ರಿಲ್.14. ನಗರದಲ್ಲಿ ಐದು ವರ್ಷದ ಮಗುವನ್ನು ಅಪಹರಣ ಮಾಡಿ, ಬಲಿ ತೆಗೆದುಕೊಂಡ , ಕ್ರೂರ, ಆರೋಪಿಗೆ ತಕ್ಷಣವೇ ಶರಣಾಗತಿಯಾಗು ಎಂದು ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದರು ಸಹ, ತಪ್ಪಿಸಿಕೊಂಡು ಪೊಲೀಸರಿಗೆ ಮೇಲೆ ದಾಳಿ ಮಾಡಿದವನಿಗೆ , ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ, ಆರೋಪಿಯ ಎದೆಗೆ ಹಾಗೂ ಕಾಲಿಗೆ ಗುಂಡಿಟ್ಟಿದ್ದ ಲೇಡಿ ಪಿ.ಎಸ್.ಐ. ಅನ್ನಪೂರ್ಣ ರವರ ಧೈರ್ಯವನ್ನು ಮೆಚ್ಚಲೇಬೇಕು .ಇಡೀ ಕರ್ನಾಟಕದ ಜನತೆಯೇ ಅವರ ಧೈರ್ಯ, ಶೌರ್ಯಕ್ಕೆ ಮನಸೋತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಸಹ ಅವರ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ.. ಈ ಎನ್ಕೌಂಟರ್ ಹಿಂದಿನ ದಕ್ಷ ಪೊಲೀಸ್ ಅಧಿಕಾರಿ ಯಾರೆಂದು ಎಲ್ಲರಿಗೂ ತಿಳಿದಿದೆ. ಗನ್ ಒಳಗಿದ್ದ ಬುಲೆಟ್ ಆಚೆ ಬರೋದಕ್ಕೆ ಕಾರಣ ಶಶಿಕುಮಾರ್ ಎನ್ನುವ ದಕ್ಷ ಪೊಲೀಸ್ ಅಧಿಕಾರಿ ಪರ್ಮಿಷನ್ ಇತ್ತು. ಮುಂದಿನ ದಿನಗಳಲ್ಲಿ ತನಿಖೆ ನಡೆಸದೆ ಅಮಾಯಕನನ್ನು ಕೊಂದರು ಎಂದು ಕೆಲವರ ಮಾತಿಗೆ ಸರಿಯಾದ ಉತ್ತರ ಕೊಡಲಿಕ್ಕೆ ಕರ್ನಾಟಕದ ಜನತೆ, ಹಾಗೂ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ.. ಅಮಾಯಕ
ಆ ಪುಟ್ಟ ಹೆಣ್ಣು ಮಗುವಿಗೆ ಕೆಲವೇ ಗಂಟೆಗಳಲ್ಲಿ ನ್ಯಾಯ ಒದಗಿಸಿ ಕೊಟ್ಟಿದ್ದಾರೆ ಎಂದು ಸಾರ್ವಜನಿಕರು ತಮ್ಮ ಮೆಚ್ಚುಗೆಯ ಮಾತನಾಡುತ್ತಿದ್ದಾರೆ.
ಅಮಾಯಕ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಪ್ರಕರಣದ ಆರೋಪಿಯು ಪೊಲೀಸರ ಗುಂಡೇಟಿಗೆ ಬಲಿಯಾಗಿರುವುದು ಸಂತೋಷದ ವಿಷಯವೆಂದು ಸಾರ್ವಜನಿಕರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ