*ಉಪವಾಸ ಆಚರಣೆಯಿಂದ ದೀರ್ಘಕಾಲದ ಕಾಯಿಲೆಯಲ್ಲಿ ಗಣನೀಯ ಸುಧಾರಣೆ – ಡಾ.ಕಲಾಲ್*
======
ಕೊಪ್ಪಳ, ಮಾರ್ಚ್ 22 : ಉಪವಾಸ ಆಚರಣೆ ಮಾಡುವುದರಿಂದ ಮನುಷ್ಯನಲ್ಲಿರುವ ದೀರ್ಘಕಾಲದ ಕಾಯಿಲೆಗಳಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ ಎಂದು ಕೊಪ್ಪಳ ಸದ್ಭಾವನಾ ವೇದಿಕೆಯ ಅಧ್ಯಕ್ಷ ಡಾ.ಸುಶೀಲ್ ಕುಮಾರ್ ಕಲಾಲ್ ಹೇಳಿದರು.
ಅವರು ಶುಕ್ರವಾರ ಸಂಜೆ ನಗರದಲ್ಲಿ ಸದ್ಭಾವನಾ ವೇದಿಕೆ ಹಾಗೂ ಲಿಂಗಾಯತ ಧರ್ಮ ಮಹಾಸಭಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಪವಿತ್ರ ರಮಜಾನ್ ಮಾಸಾಚರಣೆ ಪ್ರಯುಕ್ತ ಮುಸಲ್ಮಾನ್ ಬಾಂಧವರಿಗೆ ಏರ್ಪಡಿಸಿದ ಇಫ್ತಾರ್ ಸೌಹಾರ್ದ ಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿ, ಇಸ್ಲಾಂ ಧರ್ಮದ ಪ್ರಾರಂಭದ ಶತಮಾನದಲ್ಲಿ ದೇವರ ಅನುಗ್ರಹ ಪಡೆಯಲು ಉಪವಾಸ ಕೈಗೊಳ್ಳುತ್ತಿದ್ದರು. ಆದರೆ ಈಗಿನ ಶತಮಾನದಲ್ಲಿ ಉಪವಾಸದ ಬಗ್ಗೆ ಸಂಶೋಧನೆ ಮಾಡಲಾಗುತ್ತಿದೆ. ಅದರಂತೆ ಈ ಉಪವಾಸಗಳನ್ನು ಕೈಗೊಳ್ಳುವುದರಿಂದ ದೀರ್ಘಕಾಲದಿಂದ ಬಳಲುವ ಕಾಯಿಲೆಗಳಲ್ಲಿ ಗಣನೀಯ ಬದಲಾವಣೆ ಮತ್ತು ಸುಧಾರಣೆ ಕಂಡುಬರುತ್ತಿದೆ ಎಂದರು.
ಅಲ್ಲದೆ ನಮ್ಮ ಕೊಪ್ಪಳ ನಗರದ ನಾಗರಿಕರು ಮಾದರಿಯಾಗಿದ್ದೇವೆ ಎಂಬುವುದನ್ನು ತೋರಿಸಲು ನಾವೆಲ್ಲರೂ ಒಳಗೊಂಡು ಈ ಇಫ್ತಾರ್ ಕೋಟ ಏರ್ಪಡಿಸಲಾಗಿದೆ. ಪರಸ್ಪರ ಸೌಹಾರ್ದತೆಯನ್ನೂ ಬೆಳೆಸಿ ಕೊಂಡು ಜೀವನ ಸಾಗಿಸಬೇಕು. ಸೂಫಿ ಸಂತರು ದಾರ್ಶನಿಕರು ಸಜ್ಜನರು ತೋರಿದ ಮಾರ್ಗದಲ್ಲಿ ನಾವೆಲ್ಲರೂ ನಮ್ಮ ನಮ್ಮ ಬದುಕು ಕಟ್ಟಿಕೊಳ್ಳಬೇಕೆಂದ ಅವರು ಬಹುತೇಕ ಹಿಂದೂ ಸಮಾಜ ಬಾಂಧವರು ಸಹ ಈ ರಂಜಾನ್ ಉಪವಾಸವನ್ನು ಆಚರಣೆ ಮಾಡುತ್ತಿದ್ದಾರೆ. ಅದನ್ನು ನಾನು ಗಮನಿಸಿದ್ದೇನೆ, ನೋಡಿದ್ದೇನೆ ಕಂಡಿದ್ದೇನೆ ಎಂದು ಸದ್ಭಾವನ ವೇದಿಕೆಯ ಅಧ್ಯಕ್ಷ ಡಾ. ಸುಶೀಲ್ ಕುಮಾರ್ ಕಲಾಲ್ ಹೇಳಿದರು.
ಲಿಂಗಾಯತ ಧರ್ಮದ ಮಹಾಸಭಾ ರಾಜ್ಯ ಅಧ್ಯಕ್ಷ ಈರಣ್ಣ ಕೊರ್ಲಹಳ್ಳಿ ಮಾತನಾಡಿ, ಇಫ್ತಾರ್ ಕೂಟ ಎಂದರೆ ಸೌಹಾರ್ದ ಕೂಟ. ನಮ್ಮೆಲ್ಲರಿಗೆ ಭೂಮಿ ಒಂದೇ, ರಕ್ತ ಒಂದೇ, ನೀರು ಗಾಳಿ ಒಂದೇ, ಅದರಂತೆ ನಾವು ಒಂದಾಗಿ ಬಾಳಬೇಕಾಗಿದೆ. ಮುಸ್ಲಿಮರು ರಂಜಾನ್ ಮಾಸಾಚರಣೆಯಲ್ಲಿ ಉಪವಾಸಗಳನ್ನು ಅತ್ಯಂಥ ಕಟ್ಟು ನಿಟ್ಟಾಗಿ ಆಚರಿಸುತ್ತಾರೆ ಅವರ ಈ ಶಿಸ್ತು ಬಹಳ ಚೆನ್ನಾಗಿದೆ. ಅದೇ ರೀತಿ ನಾವು ಶ್ರಾವಣ ಮಾಸ ಆಚರಣೆ ಆಚರಿಸುತ್ತೇವೆ. ಶ್ರಾವಣ ಎಂದರೆ ಒಳ್ಳೆಯದನ್ನು ಕೇಳಿದರೆ ಒಳ್ಳೆಯದನ್ನು ಮಾಡುತ್ತೇವೆ ಕೆಟ್ಟದ್ದನ್ನು ಕೇಳಿದರೆ ಕೆಟ್ಟದ್ದನ್ನು ಮಾಡುತ್ತೇವೆ. ಅದಕ್ಕಾಗಿ ನಾವು ಒಳ್ಳೆಯದನ್ನು ಕೇಳಿ ಒಳ್ಳೆಯದನ್ನು ಮಾಡಬೇಕಾಗಿದೆ, ಇದರ ಅರಿವು ಜನರಲ್ಲಿ ಮೂಡಿಸಲು ಶ್ರಾವಣ ಮಾಸದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಗೊಳ್ಳುತ್ತದೆ ಎಂದು ಅವರು ವಿವರಿಸಿದರು.
ವಿಶೇಷ ಉಪನ್ಯಾಸ ನೀಡಿದ ವಿಜಯನಗರ ಜಿಲ್ಲೆಯ ಕಮಲಾಪುರದ ಶಾಮಿದ ರವರು ಮಾತನಾಡಿ, ಹಿಂದೂ ಮುಸ್ಲಿಂ ಎಂಬ ಭೇದ ಭಾವ ಮರೆತು ನಾವೆಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಒಗ್ಗೂಡಿ ಬಾಳಬೇಕು. ರಮಜಾನ್ ಮಾಸ ಆಚರಣೆಯಿಂದ ಮನುಷ್ಯನಲ್ಲಿ ಪರಿವರ್ತನೆ ಬರುತ್ತದೆ. ದೇವ ಭಯ ಬರುತ್ತದೆ. ಕೆಟ್ಟದ್ದನ್ನು ಬಿಟ್ಟು ಒಳ್ಳೆಯದ್ದನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕೆಂಬ ಭಾವನೆ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆ ಮೇಲೆ ಜಮಾತೆ ಇಸ್ಲಾಮಿ ಹಿಂದ್ ನ ಕೊಪ್ಪಳ ಘಟಕದ ಅಧ್ಯಕ್ಷ
ಸೈಯದ್ ಹಿದಾಯತ್ ಅಲಿ ಮತ್ತು ಡಾ, ಮಹೇಶ್ ಗೋವನಕೊಪ್ಪ ಉಪಸ್ಥಿತರಿದ್ದು, ಅಪಾರ ಸಂಖ್ಯೆಯಲ್ಲಿ ಹಿಂದೂ ಮುಸ್ಲಿಂ ಸಾರ್ವಜನಿಕರು ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಾಹಿತಿ ಪತ್ರಕರ್ತ ಜಿಎಸ್ ಗೋನಾಳ ರವರು ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಜುದ್ದೀನ್ ರವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!