ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಇಳಕಲ್:-ಇಳಕಲ್ ತಾಲೂಕ ಪ್ರಾಥಮಿಕ ಶಾಲಾ ಪತ್ತಿನ ಸಹಕಾರ ಸಂಘ ಇಳಕಲ್ ಇದರ ನೂತನ ನಿರ್ದೇಶಕರಾಗಿ ಮಲ್ಲಪ್ಪ ತುಪ್ಪದ ,ಶಿವಾನಂದ ಎಸ್ ಕೋರಿ ,ಜಾಕಿರ ಹುಸೇನ ಗಡೇದ , ಶಿವರಾಜ ಮುಧೋಳ, ಶರಣಪ್ಪ ಆವಾರಿ, ಶೇಖರಪ್ಪ ಹಿರೇಕುಂಬಿ, ಮಹಾಂತೇಶ ಹಲಕುರ್ಕಿ, ಎಸ್ ಸಿ ಸ್ಥಾನದಿಂದ ಶಿವಪ್ಪ ಎಸ್ ಚಲವಾದಿ ,ಮಹಿಳಾ ಸ್ಥಾನದಿಂದ ವಿಜಯಲಕ್ಷ್ಮಿ, ನಾಗಲೋಟಿ ಹಾಗೂ ಪ್ರಭಾವತಿ ಎಂ ಬೀಳಗಿ ಇಂದು ನಡೆದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಗದ್ದಿ ಯವರು ಘೋಷಿಸಿದ್ದಾರೆ.
ಈ ಮೊದಲು ಹಿಂದುಳಿದ ವರ್ಗ ಅ ದಿಂದ ಎಸ್ ಎಸ್ ಬೇನಾಳ, ಹಿಂದುಳಿದ ವರ್ಗ ಬ ದಿಂದ ಚನ್ನಬಸವ ಖೈರವಾಡಗಿ ಹಾಗೂ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಓಲೇಕಾರ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರೆಲ್ಲರನ್ನು ವಿವಿಧ ಸಂಘಗಳ ಪದಾಧಿಕಾರಿಗಳು ಅಭಿನಂದಿಸಿ ಶುಭಾಶಯ ಕೋರಿದ್ದಾರೆ.
ವರದಿ ಕೆ ಎಚ್ ಸೋಲಾಪೂರ ಇಳಕಲ್