ಇಳಕಲ್ ಅರ್ಬನ್ ಬ್ಯಾಂಕ್ ಚುನಾವಣೆಗೆ 55 ಜನ ನಾಮಪತ್ರ ಸ್ವೀಕೃತ, ಓರ್ವರು ಅವಿರೋಧ ಆಯ್ಕೆ.
ಇಳಕಲ್:- ನಗರದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಇಳಕಲ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್ ಗೆ 2025ರಿಂದ 2030 ನೇ ಅವಧಿಯ ಚುನಾವಣೆಗೆ ಕಳೆದ ಒಂದು ವಾರದಿಂದ 55 ನಾಮಪತ್ರಗಳನ್ನು ಸಲ್ಲಿಸಿದ್ದಾರೆ . ಅವುಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಮಹದೇವ ಕುಂಬಾರ ತಿಳಿಸಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ 35 ಜನರು ,ಹಿಂದುಳಿದ ವರ್ಗ ಅ ದಿಂದ ಐವರು,ಹಿಂದುಳಿದ ಬ ವರ್ಗಗಳ ಸ್ಥಾನಕ್ಕೆ ಮೂವರು, ಪರಿಶಿಷ್ಟ ಜಾತಿ ಸ್ಥಾನಕ್ಕೆ ಆರು ಜನ , ಮಹಿಳಾ ಸ್ಥಾನಕ್ಕೆ ಆರು ಜನರು ಸೇರಿದಂತೆ ಒಟ್ಟು 55 ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಪರಿಶಿಷ್ಟ ಪಂಗಡದ ಸ್ಥಾನಕ್ಕೆ ನಗರದ ಹಿರಿಯ ಗ್ರಾನೈಟ್ ಉದ್ದಿಮೆದಾರ ಶಾಂತಕುಮಾರ ಸುರಪುರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು 31 ಮಂಗಳವಾರ ಕೊನೆಯ ದಿನವಾಗಿದೆ.ಒಟ್ಟು 16 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.ಈ ಬಾರಿಯ ಚುನಾವಣೆಯು ಜಿದ್ದಾಜಿದ್ದಿನ ನಡುವೆ ನಡೆಯುವ ಸಾಧ್ಯತೆಗಳಿವೆ.
ವರದಿ ಕೆ ಎಚ್ ಸೋಲಾಪೂರ ಇಳಕಲ್.