ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ಅವರ ಜನ್ಮದಿನಾಚರಣೆ.
ಹುನಗುಂದ -ಇಲ್ಲಿನ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆಯಲ್ಲಿ ಇಂದು ಅಕ್ಷರತಾಯಿ ಸಾವಿತ್ರಿ ಬಾಯಿ ಪುಲೆ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ಶ್ರೀಮತಿ ಜಯಶ್ರೀ ಲೆಕ್ಕಿಹಾಳ ಅವರು ಪೂಜೆ ಸಲ್ಲಿಸಿ ಗೌರವ ಸಮರ್ಪಿಸಿದರು.
ಮುಖ್ಯ ಶಿಕ್ಷಕ ಯಮನೂರಸಾ ನದಾಫ ಮಾತನಾಡಿದರು.ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದ ಕೆ ಎಚ್ ಸೋಲಾಪೂರ ಮಾತನಾಡಿ ಅಂದಿನ ಕಠಿಣ ಪರಿಶ್ರಮದಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೈಯದ್ ವಾಲಿಕಾರ,ಸಹೀದ ನಾಯಕ, ಶಿಕ್ಷಕಿಯರಾದ ಶ್ರೀಮತಿ ನಾಗಮ್ಮ ರಾಮವಾಡಗಿ, ಶ್ರೀಮತಿ ಬಸವಂತಿ ಕೋರಿ,ಹಲಿಮಾಬೀ ಕಲ್ಬುರ್ಗಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.