*ಹಳಿಸಗರ ಶ್ರೀ ಬಲಭೀಮೇಶ್ವರ ಕಾರ್ತಿಕ ಮಹೋತ್ಸವ*
*ಶಹಾಪುರ ನಗರದ ಹಳಿಸಗರದಲ್ಲಿ ಕಾರ್ತಿಕ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಬಲ ಭೀಮೇಶ್ವರ ಪಲ್ಲಕ್ಕಿಯು ಶನಿವಾರ ಹಳಿಸಗರದಿಂದ ಹುರಸಗುಂಡಗಿಯ ಭೀಮಾನದಿಯಲ್ಲಿ ಗಂಗಸ್ಥಾನಕ್ಕೆ ತೆರಳಿ ಸಾಯಂಕಾಲ ಮರಳಿ ಹಳಿಸಗರ ಅಂಬಾ ಭವಾನಿ ದೇವಸ್ಥಾನಕ್ಕೆ ಬಂದು ದೇವಸ್ಥಾನದಲ್ಲಿ ಇಡೀ ರಾತ್ರಿ ಭಜನೆ ಕಾರ್ಯಕ್ರಮ ನೆರವೇರುತ್ತದೆ ಬೆಳಗ್ಗೆ 11 ಗಂಟೆಗೆ ಅಂಬಾಭವಾನಿ ದೇವಸ್ಥಾನದಿಂದ ನಗರಿ ವಾದ್ಯಗಳ ಮೆರವಣಿಯೊಂದಿಗೆ ವಿಜ್ರಂಭಣೆಯಿಂದ ಪಲ್ಲಕ್ಕಿ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತಲುಪುತ್ತದೆ ಅದೇ ಸಂದರ್ಭದಲ್ಲಿ ನಗರದ ಸಾರ್ವಜನಿಕರು ತಮ್ಮ ಹರಕೆ ಕೂಡ ತೀರಿಸುತ್ತಾರೆ ಮತ್ತು ನಗರದಲ್ಲಿ ವಿಶೇಷವಾಗಿ ಜಾತ್ರೆ ಹಾಗೂ ಕುಸ್ತಿ ಕೂಡ ನೆರವೇರುತ್ತದೆ ಎಂದು ಮೌನೇಶ ಹಳಿಸಗರ ತಿಳಿಸಿದರು*ವರದಿ.. ನಬಿರಸೂಲ ಎಮ್ ನದಾಫ್ ಯಾದಗಿರಿ