*ಅಂಬೇಡ್ಕರ್ ಗೆ ಅಪಮಾನ ಅಮಿತ್ ಶಾ ರಾಜಿನಾಮೆಗೆ : ಶರಣಬಸವ ಸೈದಾಪುರ ಒತ್ತಾಯ*
ಶಹಾಪುರ: -ಸಂವಿಧಾನ ವಿಷಯದ ಕುರಿತು ಚರ್ಚೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಾತನಾಡುವಾಗ ಡಾ. ಬಿ. ಆರ್ ಅಂಬೇಡ್ಕರ್ ರವರ ಬಗ್ಗೆ ಅಪಮಾನಿಸಿ ಮಾತನಾಡಿದ್ದಾರೆ ಅವರು ಕೂಡಲೇ ಕ್ಷಮೆ ಯಾಚಿಸಿ ರಾಜೀನಾಮೆ ನೀಡುವಂತೆ ಶಹಾಪುರ ತಾಲೂಕ ಕಾಂಗ್ರೆಸ್ ಯುವ ಮುಖಂಡರಾದ ಶರಣಬಸವ ಪೋಲಿಸ್ ಬಿರಾದಾರ ಸೈದಾಪುರ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿಯ ಹಲವಾರು ನಾಯಕರು ಪದೇ ಪದೇ ಡಾ. ಬಿ .ಆರ್.ಅಂಬೇಡ್ಕರ್ ಮತ್ತು ಸವಿಧಾನ ಕುರಿತು ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ ಇದು ಅವರಿಗೆ ಶೊಭೆ ತರುವಂತದ್ದಲ್ಲ ಅಂಬೇಡ್ಕರ್ ಅಂಬೇಡ್ಕರ್ ಎಂದು ಎಷ್ಟು ಸಲ ಹೇಳುತ್ತೀರಾ ನೀವು ದೇವರ ಹೆಸರನ್ನು ಹೇಳಿದರೆ ಸ್ವರ್ಗಕ್ಕೆ ಹೋಗುತ್ತಿದ್ದೀರಿ ಎಂದು ನೀಡಿರುವ ಹೇಳಿಕೆ ಖಂಡನಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಪವಿತ್ರವಾದ ಸಂವಿಧಾನವನ್ನು ನೀಡಿ ಬಡವರು ದೀನ ದಲಿತರ ಶೋಷಿತ ವರ್ಗದವರ ಏಳಿಗೆಗೆ ಹಗಲಿರಳು ಶ್ರಮಿಸಿ ಸಮ ಸಮಾಜ ನಿರ್ಮಾಣದ ಹರಿಕಾರ ಅಂತಹ ಮಹಾನ್ ನಾಯಕನ ವಿರುದ್ಧ ಈ ರೀತಿಯ ಹೇಳಿಕೆ ನೀಡಿರುವುದು ಬಾಲಿಶತನವಾದದ್ದು ಎಂದು ಅವರು ಕಿಡಿ ಕಾರಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಮಿತ್ ಶಾ ರವರು ಇಂತಹ ಹೇಳಿಕೆ ನೀಡಿರುವುದು ಎಷ್ಟರಮಟ್ಟಿಗೆ ಸರಿ ಬಿಜೆಪಿಯವರು ಸಂವಿಧಾನ ಮತ್ತು ಅಂಬೇಡ್ಕರ್ ವಿರೋಧಿ ಎಂಬುದು ಗೃಹ ಸಚಿವರು ತೋರಿಸಿಕೊಟ್ಟಿದ್ದಾರೆ ಕೂಡಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಗೃಹ ಸಚಿವ ಅಮಿತ್ ಷಾ ರಾಜೀನಾಮೆ ಪಡೆಯುವಂತೆ ಶಹಾಪುರ ತಾಲೂಕ ಕಾಂಗ್ರೆಸ್ ಯುವ ಮುಖಂಡರಾದ ಶರಣಬಸವ ಪೋಲಿಸ್ ಬಿರಾದಾರ ಸೈದಾಪುರ ಒತ್ತಾಯಿಸಿದ್ದಾರೆ
ವರದಿ… ನಬಿರಸೂಲ ಎಮ್ ನದಾಫ್ ಯಾದಗಿರಿ