ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಗೆ ರಾಜೇಸಾಬ್ ಕಂದಗಲ್ ಆಯ್ಕೆ
ಕೆಂಭಾವಿ:-ವರ್ಷದ ಸಾಲಿನ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಗೆ ಇಲ್ಲಿನ ವಲಯದ ಪ್ರಭಾವಿ ಕಂದಾಯ ನಿರೀಕ್ಷಕರು ರಾಜೇಸಾಬ ಕಂದಗಲ್ ಆಯ್ಕೆಯಾಗಿದ್ದಾರೆ. ಕಂದಾಯ ಇಲಾಖೆ ವತಿಯಿಂದ ಸೇವೆಯನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿಗೆ ಈ ವರ್ಷದ ರಾಜ್ಯಾದ್ಯಂತ ಆಯ್ಕೆಯಾಗಿರುವ 9 ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಂದಗಲ್ ಕೂಡ ಒಬ್ಬರಾಗಿದ್ದಾರೆಸೆ ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆಯಲಿರುವ ಕಂದಾಯ ಇಲಾಖೆ ಪ್ರಗತಿ ಪರಿಶೀಲನ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ ಎಂದು ಕಂದಾಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.