ಸರ್ಕಾರದ ತಿದ್ದುಪಡಿ ಆದೇಶದನ್ವಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಟೆಂಡರ್ ಜಾಹೀರಾತು ನೀಡಿ : ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ
ಚಿತ್ರದುರ್ಗ : ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಸರ್ಕಾರದ ಟೆಂಡರ್ ಮತ್ತು ವರ್ಗೀಕೃತ ಜಾಹೀರಾತುಗಳನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ಬಿಡುಗಡೆಗೊಳಿಸಲು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ
ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಆಗಷ್ಟ್ 26 ರ ಸೋಮವಾರ ಮನವಿ ಸಲ್ಲಿಸಿ ಮಾತನಾಡಿದ ಅವರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ,ಪ್ರಾದೇಶಿಕ ಪತ್ರಿಕೆಗಳಿಗೆ ಸರ್ಕಾರದ ಟೆಂಡರ್ ಮತ್ತು ವರ್ಗೀಕೃತ ಜಾಹೀರಾತು ಬಿಡುಗಡೆಗೆ ಮಾರ್ಗಸೂಚಿವುಳ್ಳ ತಿದ್ದುಪಡಿ ಆದೇಶವನ್ನು ಸರ್ಕಾರ ದಿನಾಂಕ:19-01-2017 ರಂದು ಹೊರಡಿಸಿದೆ.
ಈ ಆದೇಶದಂತೆ ಸರ್ಕಾರದ ವಿವಿಧ ಇಲಾಖೆಗಳ ಟೆಂಡರ್ ಮತ್ತು ವರ್ಗೀಕೃತ ಜಾಹೀರಾತು ಬಿಡುಗಡೆ ಮಾಡುವಾಗ ತಿದ್ದುಪಡಿ ಆದೇಶದಲ್ಲಿ ಸೂಚಿಸಿದ ಪ್ರಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ,ಪ್ರಾದೇಶಿಕ ಪತ್ರಿಕೆಗಳಿಗೆ ಸರ್ಕಾರದ ಎಲ್ಲಾ ಇಲಾಖೆಗಳು ,ನಿಗಮ, ಮಂಡಳಿಗಳು ,ಪ್ರಾಧಿಕಾರಗಳು , ಸ್ಥಳೀಯ ಸಂಸ್ಥೆಗಳು ,ಜಿಲ್ಲಾ ಪಂಚಾಯತ್, ವಿಶ್ವವಿದ್ಯಾಲಯಗಳು ಆಯಾ ಜಿಲ್ಲೆಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಕಛೇರಿ ಮೂಲಕ ಬಿಡುಗಡೆ ಮಾಡಬೇಕು. ಆದರೆ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ಸರ್ಕಾರದ ಜಿಲ್ಲಾ ಮಟ್ಟದ ಕಚೇರಿಗಳು ತಮ್ಮ ಇಷ್ಟಕ್ಕೆ ಬಂದ ರೀತಿಯಲ್ಲಿ ಜಾಹೀರಾತುಗಳನ್ನು ರಾಜ್ಯ ಮಟ್ಟದ ಪತ್ರಿಕೆಗಳಿಗೆ ನೀಡುತ್ತಿದ್ದಾರೆ. ಹಾಗಾಗಿ ತಿಳಿಸಲಾದ ಅನೇಕ ಕಛೇರಿಗಳು ಈ ತಿದ್ದುಪಡಿ ಆದೇಶ ಉಲ್ಲಂಘಿಸಿ ನೇರವಾಗಿ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಟೆಂಡರ್ ಮತ್ತು ವರ್ಗೀವೃತ ಜಾಹೀರಾತುಗಳನ್ನು ಬಿಡುಗಡೆ ಮಾಡುತ್ತಿವೆ. ಇದರಿಂದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಟೆಂಡರ್ ಬಿಡುಗಡೆ ವಿಷಯದಲ್ಲಿ ತಾರತಮ್ಯ ಹಾಗೂ ಅನ್ಯಾಯವಾಗುತ್ತಿದೆ. ಈ ಕ್ರಮವು ಸರ್ಕಾರದ ಉಲ್ಲೇಖದ ಆದೇಶಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತದೆ ಎಂದು ಹೇಳಿದರು.
ಸರ್ಕಾರದ ತಿದ್ದುಪಡಿ ಆದೇಶದ ರೀತ್ಯಾ ಚಿತ್ರದುರ್ಗ ಜಿಲ್ಲೆಯ, ತಾಲ್ಲೂಕಿನ ಎಲ್ಲಾ ಕಛೇರಿಗಳು ಟೆಂಡರ್ ಮತ್ತು ವರ್ಗೀವೃತ ಜಾಹೀರಾತುಗಳನ್ನು ಕಡ್ಡಾಯವಾಗಿ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ, ಚಿತ್ರದುರ್ಗ ಇವರ ಕಚೇರಿ ಮೂಲಕವೇ ಬಿಡುಗಡೆ ಮಾಡುವಂತೆ ಮತ್ತು ನೇರವಾಗಿ ಟೆಂಡರ್ ಜಾಹೀರಾತುಗಳನ್ನು ರಾಜ್ಯ ಮಟ್ಟದ ಪತ್ರಿಕೆಗಳಿಗೆ ಬಿಡುಗಡೆ ಮಾಡದಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಉಪಾಧ್ಯಕ್ಷ ಗೌನಹಳ್ಳಿ ಗೋವಿಂದಪ್ಪ, ಜಂಟಿ ಕಾರ್ಯದರ್ಶಿ ದಿನೇಶ್‌ಗೌಡಗೆರೆ,
ಕೇಂದ್ರ ಸಂಘದ ನಾಮನಿರ್ದೇಶನ ಸದಸ್ಯರಾದ ಸಿ.ಹೆಂಜಾರಪ್ಪ,
ಎಸ್.ಟಿ.ನವೀನ್‌ಕುಮಾರ್, ಸಿ.ಎನ್.ಕುಮಾರ, ಟಿ.ತಿಪ್ಪೇಸ್ವಾಮಿ ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳಾದ
ಹರೀಶ್.ಎಂ.ಕೆ, ಎಸ್.ಶ್ರೀನಿವಾಸ್, ಜಿ.ಓ.ಎನ್.ಮೂರ್ತಿ,
ಬಿ.ಕೃಷ್ಣಮೂರ್ತಿ, ವೆಂಕಟೇಶನಾಯ್ಕ್, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.