ಯಡ್ರಾಮಿ ಬಸ್ಸ ನಿಲ್ದಾಣ ಸ್ಥಳಾಂತರ ಬೇಡ: ಶಾಮ್ ಪವಾರ
ಯಡ್ರಾಮಿ: ಕೆಲವು ಜನ ತಮ್ಮ ಹಿತಾಸಕ್ತಿಗಾಗಿ ಈಗಿರುವ ಬಸ್ಸ ನಿಲ್ದಾಣವನ್ನು ರೇಷ್ಮ ಇಲಾಖೆ ಹತ್ತಿರ, ಪೊಲೀಸ್ ಠಾಣಾ ಎದರುಗಡೆ ಸ್ಥಳಾಂತರ ಮಾಡುತ್ತಿದ್ದಾರೆ ಎಂದು ಶಾಮ ಪವಾರ ಆರೋಪಿಸಿದ್ದಾರೆ.
ಸೋಮವಾರ ತಹಸೀಲ್ದಾರ್ ಶಶಿಕಲಾ ಪಾದಗಟ್ಟಿ ಅವರ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಪಟ್ಟಣದಲ್ಲಿರುವ ಬಸ್ಸ ನಿಲ್ದಾಣ ಯಾವುದೇ ರೀತಿಯ ತೊಂದರೆ ಇಲ್ಲ. ಆದರೂ ಬಸ್ಸ ನಿಲ್ದಾಣ ಸ್ಥಳಾಂತರಿಸುವ ಅವಶ್ಯಕತೆ ಯಾದರು ಏನಿತ್ತು. ಈಗಿರುವ ಬಸ್ಸ ನಿಲ್ದಾಣ 2017-18ರಲ್ಲಿ ಸ್ಥಾಪನೆ ಗೊಂಡಿದೆ. ಅದರ ಬೆನಲ್ಲೇ ಬೇರೆ ಕಡೆ ಸ್ಥಳಾತಂರ ಅಂದರೆ ಹೇಗೆ ಎಂದು ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಗ್ರಹಿಸಿದ್ದರು.
ಈಗಿರುವ ಬಸ್ಸ ನಿಲ್ದಾಣ ಪ್ರಯಾಣಿಕರಿಗೆ ಅನುಕೂಲ ವಾದ ಸ್ಥಳ ಇದ್ದು. ಪಟ್ಟದಲ್ಲಿ ಪ್ರತಿ ಸೋಮವಾರ ಕೊಮ್ಮೆ ಬಸವೇಶ್ವರ ವೃತ್ತದಿಂದ ಸರ್ದಾರ್ ಶರಣಗೌಡ ವೃತ್ತದ ವರೆಗೆ ಮಾರುಕಟ್ಟೆ ನಡೆಯುತ್ತೆ. ಆ ದಿನವಂತು ಟ್ರಾಫಿಕ್ ಜಾಮ್ ಯಿಂದ ವಾಹನ ಸವರಾಗಿಗೆ ತುಂಬಾ ತೊಂದರೆ ಯಾಗುತ್ತೆ. ಅಂತಹ ಸ್ಥಳದಲ್ಲಿ ಬಸ್ಸ ನಿಲ್ದಾಣಕ್ಕೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕ ಬಂಜಾರ ಸಮಾಜದ ಅಧ್ಯಕ್ಷ ಜಯರಾಮ ರಾಠೋಡ, ಸೋಮ್ನಾಥ ಪವರ, ಧರ್ಮು ಗೆಮು ರಾಠೋಡ, ಮಂಜುನಾಥ ರಾಠೋಡ, ವಿನೋದ ಧರ್ಮು ರಾಥೋಡ, ಮನಸಿಂಗ ಪವರ, ರಮೇಶ ಪವಾರ, ಆನಂದ ಪವಾರ, ತಾರುಸಿಂಗ ಪವಾರ, ನಂದಕುಮಾರ ರಾಠೋಡ, ಸೋಮು ಚವ್ಹಾಣ, ಶಿವು ರಾಠೋಡ, ಪ್ರಭಾಕರ ಪವಾರ ಇನ್ನಿತರಿದ್ದರು.
ಚಿತ್ರ. 1 ಯಡ್ರಾಮಿ ಬಸ್ಸ ನಿಲ್ದಾಣ ದೃಶ್ಯ.