ಅನಾಥವಾಯಿತೇ ಬಸವೇಶ್ವರ ಪ್ರತಿಮೆ
ರಸ್ತೆಯಲ್ಲಿ ಧೂಳು ಹಿಡಿದ ಬಸವ ಪುತ್ತಳಿ
ಯಾದಗಿರಿ :ಸುರಪುರ ನಗರದಲ್ಲಿ ಬಸವಾಭಿಮಾನಿಗಳ ಬಹುದಿನಗಳ ಬೇಡಿಕೆಯಂತೆ ಸುರಪುರ ನಗರಕ್ಕೆ ಹೋಗುವ ಮುಖ್ಯ ರಸ್ತೆ ಮಧ್ಯೆದಲ್ಲಿ ವೀರಶೈವ ಲಿಂಗಾಯತ ಕಲ್ಯಾಣ ಮಂಟಪ ಎದುರುಗಡೆ ವೀರಶೈವ ಲಿಂಗಾಯತ ಸಮಿತಿ ಮತ್ತು ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಸಹಯೋಗದಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಮೂರ್ತಿ ಅದ್ದೂರಿಯಾಗಿ ಬರಮಾಡಿಕೊಂಡು ಸ್ಥಳದಲ್ಲಿ ಕೂಡಿಸಲಾಯಿತು
ಉದ್ಘಾಟನೆ ಭಾಗ್ಯ ಕಾಣದ ಶ್ರೀ ಬಸವೇಶ್ವರ ಪುತ್ಥಳಿ ಅನೇಕ ಬಸವಾಭಿಮಾನಿಗಳು ಹಾಗೂ ಅನೇಕ ಯುವಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಸುರಪುರ ತಾಲೂಕು ವೀರಶೈವ ಲಿಂಗಾಯತ ಸಮಿತಿಯ ರಂಗಂಪೇಟಯ ಅಧ್ಯಕ್ಷರಾದ ಡಾ ಸುರೇಶ್ ಸಜ್ಜನ್ ಪುತ್ಥಳಿ ಉದ್ಘಾಟನೆ ಬಗ್ಗೆ ಜವಾಬ್ದಾರಿ ತೆಗೆದುಕೊಂಡಿದ್ದರು ಸ್ಥಳದಲ್ಲಿ ಕೂಡಿಸಿದ ನಂತರ ಕೆಲವೇ ದಿನಗಳ ಆದ ನಂತರ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಅನೇಕ ಬಸವಾಭಿಮಾನಿಗಳಿಗೆ ತಿಳಿಸಿದ್ದು ಇಂದು ಮಾತು ಹುಷಿಯಾಗಿದೆ
ಸುರಪುರ ತಾಲೂಕಿನಲ್ಲಿ ವೀರಶೈವ ಲಿಂಗಾಯತ ಹೆಸರನ್ನು ಬಳಸಿಕೊಂಡು ದೊಡ್ಡಮಟ್ಟಿಗೆ ಬೆಳೆದು ಬಸವಣ್ಣನವರಿಗೆ ಅವಮಾನ ಎಸೆಗವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ, ಏಕೆಂದರೆ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸುಮಾರು 10 ತಿಂಗಳು ಕಳೆದರೂ ಪ್ರತಿಷ್ಠಾಪನೆ ಮಾಡಲಾರದೆ
ಇಲ್ಲ ಸಲ್ಲದ ಸುಳ್ಳು ನೆಪಗಳು ಹೇಳಿಕೊಂಡು ಬಸವಾಭಿಮಾನಿಗಳಿಗೆ ಪ್ರತಿಷ್ಠಾನ ಮಾಡಲಾರದೆ ಬಹಳ ನೋವು ಮಾಡಲಾಗಿದೆ ಇಂಥ ಮನಸ್ಥಿತಿಯಲ್ಲಿರುವ ವ್ಯಕ್ತಿ, ಅಧ್ಯಕ್ಷ ಸ್ಥಾನದಿಂದ ರಾಜೀನಾಮೆ ಕೊಡಬೇಕು
ಕರ್ನಾಟಕದ ರಾಜ್ಯಾದ್ಯಂತ ಯಾವುದಾದರೂ ಮೂಲೆಗಳಲ್ಲಿ ಕೆಲವು ಕಿಡಿಗೇಡಿಗಳು
ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಮೂರ್ತಿಗೆ ಕಿಡಿಗೇಡಿಗಳು ಅವಮಾನ ಮಾಡಿದಾಗ ಹೋರಾಟಕ್ಕೆ ಬರುವುದಿಲ್ಲ,
ಆದರೆ ಸಮುದಾಯದ ಹೆಸರೆಳಿಕೊಂಡು ಸಮುದಾಯದಿಂದ ಉನ್ನತ ಹುದ್ದೆ ಬೇಕು ಇವರಿಗೆ ಅದಕ್ಕಾಗಿ ಈ ವಿಷಯದ ಬಗ್ಗೆ ಬಸವಾಭಿಮಾನಿಗಳು ಆಕ್ರೋಶ ಮಾಡುವುದಕ್ಕಿಂತ ಮುಂಚೆನೆ
ರಾಜೀನಾಮೆ ನೀಡಬೇಕೆಂದು ಅನೇಕ ಬಸವಾಭಿಮಾನಿಗಳು ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಶ್ರೀ ಬಸವರಾಜ್ ಅಂಗಡಿ ಪತ್ರಿಕಾ ಹೇಳಿಕೆ ನೀಡುವ ಮುಖಾಂತರ ಒತ್ತಾಯಿಸಿದರು .