20 ಟ್ರಾಕ್ಟರ್ ಬಣವಿ ಭಸ್ಮ : ಸುಗಳಿಗೆ ಆಹಾರ ಎಲ್ಲಿಂದ ತರಲಿ ರೈತ ಭೀಮರಾಯ ಹಳಿಸಗರ್ ಗೋಳು ಕೇಳೋರ್ಯಾರು
ಯಾದಗೀರ : ಹಳಿಸಗರ ಶ್ರೀಮಂತರದಲ್ಲಿ ಬರುವ 178 ಮತ್ತು 179 ಸೀಮಾಂತರದಲ್ಲಿ ಬರುವ ಮಡ್ನಾಳ್ ಮುಖ್ಯ ರಸ್ತೆಯಲ್ಲಿ ಬೇಸಿಗೆಕಾಲದಲ್ಲಿ ತಮ್ಮ ಧನು ಕರಿಗಾಗಿ ಸುಮಾರು 30 ಟ್ರ್ಯಾಕ್ಟರ್ ಗಳ ಹುಲ್ಲು. ಕಣಕ್ಕಿ. ತೊಗರಿ ಹೊಟ್ಟು ಹೀಗೆ ಬೇಸಿಗೆ ಕಾಲದಲ್ಲಿ ತಮ್ಮ ಧನಕರುಗಳಿಗಾಗಿ ವರ್ಷಪೂರ್ತಿ ಬೇಕಾಗುವ ಆಹಾರವನ್ನು ಸಂಗ್ರಹಿಸಿ ಇಟ್ಟಿದ್ದರು. ಅಲ್ಲಿನ ಇಟ್ಟಂಗಿ ಬಟ್ಟೆಯ ಕಿಡಿಯನ್ನು ಈ ಬಣಮಿಗೆ ಬಿದ್ದು ಇಡೀ ಬಾಣಮೀಯನೆ ಸುಟ್ಟು ಕರ್ಕಲಾಗಿದ್ದು. ರೈತನ ಹಸುವಿಗಾಗಿ ಕಾದಿಟ್ಟ ಬಣಮಿಗೆ ಕೀಡಿಬಿದ್ದು ಹಸುಗಳಿಗೆ ನಾನೇನು ತಿನ್ನಿಸುವುದು ದನ ಕರು ಎತ್ತುಗಳು 20 ಇದ್ದು ಇದಕ್ಕೆ ವರ್ಷಪೂರ್ತಿ ನಾನೇನು ಮಾಡಲಿ ದುಡ್ಡು ಕೊಟ್ರೂ ಸಹ ಈಗ ಎಲ್ಲಿ ಸಿಗುತ್ತೆ. ಈಗಿನ ಪರಿಸ್ಥಿತಿಯಲ್ಲಿ ಕುಡಿಯಲಿಕ್ಕೆ ನೀರು ಸಿಗುವುದು ದೊಡ್ಡ ವಿಪರ್ಯಾಸವಾಗಿದ್ದು. ರೈತನ ಗೋಳು ಪರದಾಡುವ ಪರಿಸ್ಥಿತಿ ಎದುರಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಟ್ಟಂಗಿ ಭಟ್ಟಿಯ ಮಾಲೀಕರ ಇಟ್ಟಿಗೆ ತಯಾರು ಮಾಡಲು ಕಾನೂನು ಪ್ರಕಾರ ಕೆಲವು ಇಲಾಖೆಯ ಅನುಮತಿ ಪಡೆದು . ಸಾರ್ವಜನಿಕ ಹಿತಾಸಕ್ತಿ ಹಾಗೂ ಸಾರ್ವಜನಿಕರಿಗೆ ದುಷ್ಪರಿಣಾಮ ಬೀಳದಂತೆ ನಿಗ ವಹಿಸಿ ಪರಿಸರ ಅಧಿಕಾರಿಗಳು ಅನುಮತಿ ನೀಡುತ್ತಾರೆ. ಅದ್ಯಾವದು ಪಾಲನೆ ಮಾಡದೆ ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಆದ ಇಟ್ಟಿಗೆ ಭಟ್ಟಿ ಮಾಲೀಕರು ಯಾವುದೇ ಸರ್ಕಾರದ ನಿಯಮ ಗಾಳಿಗೆ ತೂರಿ ತಮ್ಮ ಮನ ಬಂದಂತೆ ಇಟ್ಟಿಗೆ ಬಟ್ಟೆ ನಿರ್ಮಿಸಿರೋದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಇವರ ವಿರುದ್ಧ ಕ್ರಮ ಕೈಗೊಂಡು ರೈತನ ಕಣ್ಣೀರು ಒರೆಸುವ ಕೆಲಸ ಅಧಿಕಾರಿಗಳು ಮಾಡಬೇಕೆಂದು ದೇವೇಂದ್ರಪ್ಪ ಭೀಮರಾಯ ಬಂಧೋಡ್ಡಿ ಆಗ್ರಹಿಸಿದ್ದಾರೆ. ನಮ್ಮ ಹೊಲದ ಪಕ್ಕದಲ್ಲಿರುವ ಕಾನೂನುಬಾಹಿರವಾಗಿ ಇಟ್ಟಿಗೆ ಬಟ್ಟೆ ನಡೆಯುತ್ತಿದ್ದು ಯಾವುದೇ ಸರಕಾರದ ಪರವಾನಗಿಲ್ಲದೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೆಯನ್ನದ ಅಧಿಕಾರಿಗಳು ಬಡವನ ಸಿಟ್ಟು ದವಡೆಗೆ ಮೂಲ ಎನ್ನುವ ಹಾಗೆ ಹಲವು ಬಾರಿ ಜಿಲ್ಲಾಡಳಿತಕ್ಕೂ ಹಾಗೂ ತಾಲೂಕಾ ಆಡಳಿತಕ್ಕೂ ಪರಿಸರ ಇಲಾಖೆ ಅಧಿಕಾರಿಗಳಿಗೂ ಮನವಿ ಮಾಡಿ ಈ ಇಟ್ಟಿಗೆ ಬಟ್ಟೆಯಿಂದ ಸುತ್ತಮುತ್ತಲಿನ ರೈತರಿಗೆ ಅಲ್ಲಿಂದ ಹೊಗೆ ಹಾಗೂ ದೂಲೆನಿಂದ ನಮ್ಮ ಬೆಳೆಗಳ ಹಾಳಾಗುತ್ತಿದ್ದು .ಕೂಡಲೇ ತೆರವುಗೊಳಿಸಿ ಸುತ್ತಮುತ್ತಲಿನ ರೈತರಿಗೆ ಹಾಗೂ ರಸ್ತೆ ಓಡಾಡುತ್ತಿರುವ ಸಾರ್ವಜನಿಕರಿಗೂ ಅನುಕೂಲ ಮಾಡಿ ಕೊಡಿ ಇಲ್ಲವಾದರೆ ಉಪವಾಸ ಸತ್ಯಾಗ್ರಹವನ್ನು ಕೊಡುವುದಾಗಿ ಎಚ್ಚರಿಕೆ ನೀಡಿದರು. ಪ್ರಕರಣ ಶಾಪುರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಅಗ್ನಿ ನಂದಿಸುವಲ್ಲಿ ಅಗ್ನಿಶಾಮಕದಳ ಸಾತ್ ನೀಡಿದರು.ವರದಿ..ನಬಿರಸೂಲ್ ಎಮ್ ನದಾಫ್ ಯಾದಗಿರಿ
