ಬಾಗಲಕೋಟ ಲೋಕಸಭೆ ಕ್ಷೇತ್ರದ ಕಾಂಗ್ರೇಸ್ ಟಿಕೇಟ್ : ಮುಂದೊರೆದ ಹಗ್ಗ ಜಗ್ಗಾಟ ಬಾಗಲಕೋಟ : ಪಕ್ಷಕ್ಕಾಗಿ ದುಡಿದ ಕ್ಷೇತ್ರದ ಜನರ ನಾಡಿಮಿತ , ಹೃದಯ ಗೆದ್ದ ವೀಣಾ ವಿ ಕಾಶಪ್ಪನವರಿಗೆ ಹೈ ಕಮಾಂಡ್ ಟಿಕೇಟ್ ನೀಡಿದರೆ ಗೆಲ್ಲುವ ವಿಶ್ವಾಸವನ್ನು ಕ್ಷೇತ್ರದ ಪ್ರಜ್ಞಾವಂತದ ನಿಲುವು ಆಗಿದೆ. ಜಿಲ್ಲೆಯಲ್ಲಿ ಸತತವಾಗಿ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷ ಸೋಲುವುದಕ್ಕೆ ಇದೇ ಕಾರಣ ಪ್ರತಿಯೊಂದು ಚುನಾವಣೆಯಲ್ಲಿ ಒಂದೊಂದು ಅಭ್ಯರ್ಥಿಗಳನ್ನು ಬೇರೆ ಬೇರೆ ಹುಡುಕಿ ತಂದು ನಿಲ್ಲಿಸುವುದೇ ಕಾಂಗ್ರೆಸ್ ಪಕ್ಷಕ್ಕೆ ಹೀನಾಯವಾಗಿ ಸೋಲಲು ಕಾರಣವಾಗಿದೆ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಡಿ ಕೆ ಶಿವಕುಮಾರ್ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈಗಲಾದರೂ ಎಚ್ಚೆತ್ತುಕೊಂಡು ಆಡಳಿತ ಲೋಕಸಭಾ ಸದಸ್ಯರ ವಿರುದ್ಧ ಇರುವ ಅಲೆ ಹಾಗೂ ಹಿಂದಿನ ಚುನಾವಣೆಯಲ್ಲಿ ಸೋತರೂ ಕೂಡ ದಿಟ್ಟ ತನದಿಂದ ಸತತವಾಗಿ ಐದು ವರ್ಷಗಳ ಕಾಲ ಇಡೀ ಜಿಲ್ಲೆಯಲ್ಲಿ ಓಡಾಡಿ ಪಕ್ಷ ಸಂಘಟನೆಯ ಮಾಡುವುದರ ಮುಖಾಂತರ ಪ್ರತಿ ಹಳ್ಳಿಗಳಲ್ಲಿ ತಮ್ಮದೆಯಾದ ಕಾರ್ಯಕರ್ತರನ್ನು ಬೆಳೆಸಿಕೊಂಡು ಬಾಗಲಕೋಟೆಯ ಜಿಲ್ಲೆಯ ಮನೆಮಗಳು ಎಂದು ಪ್ರತಿಯೊಬ್ಬರ ಮನಸ್ಸಿನಲ್ಲಿ ಮುಡಿರುವ ಜನ ನಾಯಕಿ ವೀಣಾ_ಕಾಶಪ್ಪನವರಿಗೆ ಟಿಕೆಟ್ ಅನ್ನು ನೀಡಿ ಅನುಕಂಪದ ಲಾಭವನ್ನು ಪಡೆದುಕೊಂಡರೆ ಕಾಂಗ್ರೆಸ್ ಪಕ್ಷ ಗೆಲ್ಲೋದು ಖಚಿತ ಇಲ್ಲವಾದರೆ ಮತ್ತೆ ಇದು ಬಾರಿಯೂ ಕೂಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಷ್ಟದ ಕಾಲವನ್ನು ಎದುರಿಸಬೇಕಾಗುತ್ತದೆ ರಾಜ್ಯ ಕಾಂಗ್ರೆಸ್ ಸಮಿತಿಯ ಎಲ್ಲಾ ಸದಸ್ಯರು ಇನ್ನೊಮ್ಮೆ ಪರಿಶೀಲಿಸಿ ಸೂಕ್ತ ಅಭ್ಯರ್ಥಿಯಾದ
#ಶ್ರೀಮತಿ_ವೀಣಾ_ಕಾಶಪ್ಪನವರಿಗೆ ಟಿಕೆಟ್ ನೀಡಬೇಕೆಂದು ಅವರ ಅಭಿಮಾನಿಗಳ ವಿನಂತಿಸಿಕೊಳ್ಳುತ್ತಲಿದ್ದಾರೆ. ಮತ್ತು ಇದು ಬಾಗಲಕೋಟ ಜಿಲ್ಲೆಯ ಪ್ರತಿಯೊಬ್ಬ ಕಟ್ಟ ಕಡೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಕೂಗು ಜಿಲ್ಲೆಯ ಟಿಕೆಟ್ ಜಿಲ್ಲೆಯವರಿಗೆ ಕೊಟ್ಟು ಕಾಂಗ್ರೆಸ್ ಪಕ್ಷದ ಗೆಲುವಿಗೆ ಮುಂದಾಗಿ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಲಿದೆ.
ಸ್ಥಳಿಯರಿಗೆ ಆದ್ಯತೆ ಕೊಟ್ಟರೆ ಗೆಲ್ಲುವ ಲಕ್ಷಣಗಳು ತುಂಬಾ ಇರುವದು. ಬೇರೆಯವರಿಗೆ ಟಿಕೇಟ್ ಕೊಟ್ಟರೆ ಬಹುತೇಕ ಕಾಂಗ್ರೇಸ್ ಸೋಲುವದು ಖಚಿತವೆಂಬ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಪಕ್ಷ ಯಾವ ತೀರ್ಮಾನ ತಗೆದುಕೊಳ್ಳುವದೋ ಕಾದು ನೋಡಬೇಕು.
