ಜಿಲ್ಲಾ ವಕ್ಪ್ ಬೋರ್ಡ ಅಧ್ಯಕ್ಷ ಫರೀದರಿಗೆ ಸತ್ಕಾರ…
ರಾಯಚೂರ : ಜಿಲ್ಲಾ ವಕ್ಫ ಬೋರ್ಡ ನೂತನ ಅಧ್ಯಕ್ಷರಾದ ಮಹಮದ ಮೌಲಾನಾ ಫರೀದ ಖಾನ ಇವರಿಗೆ ಇಂದು ಅಖಿಲ ಕರ್ನಾಟಕ ಪಿಂಜಾರ ನ HBದಾಫ್ ಮನ್ಸೂರಿ ಹಕ್ಕುಗಳ ಸಂಘದಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ಇಮ್ರಾನ್ ಬಡೇಸಾಬ ಅವರು ಸಂಘದ ಪದಾಧಿಕಾರಿಗಳ ಜೊತೆ ತೆರಳಿ ಶಾಲು ಹೊದಿಸಿ, ಹೂಮಾಲೆ ಹಾಕಿ ಗೌರವಿಸಿದರು..ಅವರು ಈ ಸಂದರ್ಭದಲ್ಲಿ ಮಾತನಾಡಿ, ಫರೀದ ಅವರಲ್ಲಿ ಪಕ್ಷ ನಿಷ್ಠೆ, ಪ್ರಾಮಾಣಿಕ ಸೇವಾಗುಣ, ಎಲ್ಲರಿಗೂ ಗೌರವಿಸುವ, ಸತ್ಕರಿಸುವ ಗುಣ ಹೊಂದಿದ ಕಾರಣವೇ ಪಕ್ಷ ವಕ್ಫ ಸಮಿತಿ ಅದ್ಯಕ್ಷ ಸ್ಥಾನ ಕೊಟ್ಟಿದೆ ಎಂದರು. ಎಲ್ಲ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಲು ಕೋರಿದರು.
. ಈ ಸಂದರ್ಭದಲ್ಲಿ ಸಂಘದ ರಾಜ್ಯ ಅಧ್ಯಕ್ಷರಾದ: ಇಮ್ರಾನ್ ಬಡೇಸಾಬ ಹಾಗೂ ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ. ಖಾಸಿಂ ಬೀ. ಮುಖಂಡರುಅದ .ಶಬಾನಾ. ಶಾಲಂ ಸಾಬ್ ಮೆಡಿಕಲ್ ದಿನ್ನಿ. ರಾಜ್ ಮೊಹಮ್ಮದ್. ಹುಸೇನ್ ಬಾಷಾ. ಜಮೀರ್. ನಜೀರ್ ಅಹ್ಮದ್. ಹಾಜಿ ಬಾಬು. ಮತ್ತು ಸಂಘದ ಪದಾಧಿಕಾರಿಗಳು ಇದ್ದರು.