*ಶಹಪುರ ತಾಲೂಕಿನ ಆಲ್ದಾಳ ಗ್ರಾಮದ ಹೊಸ ಬ್ರಿಜ್ ನಿರ್ಮಿಸಲು ಸಚಿವರಿಗೆ ಮನವಿ.*
ಶಹಪುರ ತಾಲೂಕಿನ ಆಲ್ದಾಳದ ಮುಖ್ಯ ದ್ವಾರದಂತೆ ಇರುವ ಏಕೈಕ ಮಾರ್ಗವಿದ್ದು, ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿರುವ ಬ್ರಿಜ್ ಪಾಳು ಬಿದ್ದು ಸಂಪೂರ್ಣ ಹಾಳಾಗಿದೆ. ಶಾಲೆಯ ಚಿಕ್ಕ ಚಿಕ್ಕ ಮಕ್ಕಳು ಇರುತ್ತೆಯ ಮೂಲಕವೇ ದಿನನಿತ್ಯ ಹೋಗುತ್ತಾರೆ ಹಾಗೂ ಈ ರಸ್ತೆಗೆ ಯಾವುದೇ ಕಡೆ ಗೋಡೆಗಳಿರುವುದಿಲ್ಲ. ಮತ್ತು ಊರಿಗೆ ಇದನ್ನು ಹೊರತುಪಡಿಸಿ ಶಹಪುರ, ಸುರಪುರಕ್ಕೆ, ಹೋಗುವ ಮಾರ್ಗ ಇದೇ ಮುಖ್ಯ ರಸ್ತೆಯಾಗಿರುತ್ತದೆ. ಅನೇಕ ಬಾರಿ ಪತ್ರಿಕೆ, ಲೋಕಲ್ ಪಬ್ಲಿಕ್ ಚಾನೆಲ್, ನಲ್ಲಿ ಪ್ರಸಾರವಾದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಹಿಂದೆ ಸುಮಾರು ನಾಲ್ಕು ತಿಂಗಳವರೆಗೂ ಇದೇ ಬ್ರಿಜ್ ಆದಗೆಟ್ಟಿದ್ದರಿಂದ ಊರಿಗೆ ಸರಕಾರಿ ಬಸ್ಸುಗಳು ಬಾರದೆ ಕಾಲೇಜು ವಿದ್ಯಾರ್ಥಿಗಳು ಪರದಾಡಿದ್ದು ಉಂಟು. ಅದಕ್ಕೆ ಮತ್ತೆ ಗ್ರಾಮ ಪಂಚಾಯತಿಯಿಂದ ಮರವಾಗಿ ಹಾಕಿ ದುರಸ್ಥಿಗೊಳಿಸುವುದು ಮಳೆಗಾಲ ಬಂದರೆ ಸಾಕು ಮತ್ತೆ ಕಿತ್ತುಕೊಂಡು ಹೋಗುತ್ತದೆ. ಅದಕ್ಕಾಗಿ ತಾವುಗಳು ಸಮಸ್ತ ಆಲ್ದಾಳ ಗ್ರಾಮದ ಜನತೆಯ ಹಿತದೃಷ್ಟಿಯಿಂದ ಹೊಸ ಬ್ರಿಜ್ ನಿರ್ಮಿಸಲು ತಾವುಗಳು ಅಧಿಕಾರಿಗಳಿಗೆ ಸೂಚಿಸಿ ಕಾರ್ಯಗತಗೊಳಿಸಬೇಕೆಂದು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷರು ಸಚಿವರಿಗೆ ಮನವಿ ಸಲ್ಲಿಸಿದರು. ಸಂದರ್ಭದಲ್ಲಿ ವೆಂಕಟೇಶ್ ನಾಯಕ ಆಲ್ದಾಳ ತಾಲೂಕು ಕಾರ್ಯಧ್ಯಕ್ಷರು ಶಹಾಪುರ, ಹಣಮಂತ ವನದುರ್ಗ, ಬಸವರಾಜ ವನದುರ್ಗ ಉಪಸ್ಥಿತರಿದ್ದರು.