ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ : ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಅವರಿಗೆ ಭೇಟಿ ಮಾಡಿದ ನಿಯೋಗ.. ಬೆಂಗಳೂರು :
ಇಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿರುವ ಕೆ.ವಿ.ಪ್ರಭಾಕರ್ ರವರನ್ನು ಕನಾ೯ಟಕ ಕಾಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ಭೇಟಿ ಮಾಡಿ ದಿನಪತ್ರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪದಾಧಿಕಾರಿಗಳೊಂದಿಗೆ ಮನವರಿಕೆ ಮಾಡಿಕೊಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ ಅವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮಟ್ಟದ ದಿನಪತ್ರಿಕೆಗಳು ಮತ್ತು ಪ್ರಾದೇಶಿಕ ಪತ್ರಿಕೆಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಪ್ರಜಾಪ್ರಭುತ್ವದ 4ನೇ ಅಂಗವೆಂದು ಹೇಳುವ ಪತ್ರಿಕಾ ರಂಗ ಇತ್ತೀಚಿನ ದಿನಗಳಲ್ಲಿ ಬಡವಾಗುತ್ತಿದೆ. ಪತ್ರಿಕೆಗಳ ಬೆಳವಣಿಗೆಗೆ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದರೂ ಸಹ ಅವುಗಳಿಂದ ಪತ್ರಿಕೆಗಳ ಬೆಳವಣಿಗೆ ಆಗುತ್ತಿಲ್ಲ ಎಂದರು.
ಆದ್ದರಿಂದ ಪತ್ರಿಕೆಗಳ ಏಳಿಗೆಗೆ ಸರ್ಕಾರದ ಸಹಾಯ ಮತ್ತು ಸಹಕಾರ ಅತ್ಯವಶ್ಯಕವಾಗಿದೆ, ಈ ನಿಟ್ಟಿನಲ್ಲಿ ಸಂಘದ ಪ್ರಮುಖ ಮತ್ತು ನೈಜ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಜಾಹೀರಾತು ದರಕ್ಕೆ ಶೇ.12 ರಷ್ಟು ಜಾಹೀರಾತು ದರವನ್ನು ಕೂಡಲೇ ಹೆಚ್ಚಳ ಮಾಡಬೇಕು.
ಪತ್ರಿಕೆಗಳಿಗೆ ಬಾಕಿ ಜಾಹೀರಾತುಗಳನ್ನು ಬಿಡುಗಡೆ ಮಾಡಬೇಕು.
2023-2024ನೇ ಸಾಲಿನ ಇಲ್ಲಿಯವರೆಗೆ ಬಾಕಿ ಇರುವ ಎಲ್ಲಾ ಬಗೆಯ ಜಾಹೀರಾತುಗಳ ಹಣ ಪಾವತಿಗೆ ಅನುದಾನ ಬಿಡುಗಡೆ ಮಾಡಬೇಕು.
ಇಲಾಖೆಯ ಅಂಗೀಕೃತ ಜಾಹೀರಾತು ಸಂಸ್ಥೆಗಳು ಪಾವತಿಸಬೇಕಾದ ಜಾಹೀರಾತು ಬಿಲ್‌ಗಳ ಬಾಕಿ ಹಣವನ್ನು ಪಾವತಿ ಮಾಡಿಸುವುದಕ್ಕೆ ಕ್ರಮಕೈಗೊಳ್ಳಬೇಕು.
ರಾಜ್ಯ ಮಟ್ಟದ ಪತ್ರಿಕೆಗಳಿಗೆ ಬಿಡುಗಡೆ ಮಾಡುವ ಆಕರ್ಷಕ ಜಾಹೀರಾತುಗಳನ್ನು ಜಿಲ್ಲಾಮಟ್ಟದ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಯಾವುದೇ ತಾರತಮ್ಯ ಆಗದಂತೆ ಬಿಡುಗಡೆ ಮಾಡಬೇಕು.
ಸರ್ಕಾರದ ಇಲಾಖೆಗಳು ಮತ್ತು ನಿಗಮ, ಮಂಡಳಿ ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳು ಕರೆಯುವ ಕಾಮಗಾರಿಗಳ ಮೌಲ್ಯಕ್ಕೆ ತಕ್ಕಂತೆ ಬಿಡಿಬಿಡಿ ಟೆಂಡರ್‌ಗಳನ್ನು ಅನ್ವಯವಾಗುವ ಪತ್ರಿಕೆಗಳಿಗೆ ಬಿಡುಗಡೆ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು.
ಇಲಾಖೆಯಿಂದ ಏಜೆನ್ಸಿಗಳಿಗೆ ಜಾಹೀರಾತು ಬಿಲ್‌ಗಳ ಪಾವತಿ ಆಗಿದ್ದರೂ, ಕೆಲವು ಏಜೆನ್ಸಿಗಳು ಹಣ ಪಾವತಿ ಮಾಡದೇ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಅಂತಹ ಏಜೆನ್ಸಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಮಾಡಲಾಯಿತು.
ಮನವಿ ಪತ್ರ ಸ್ವೀಕರಿಸಿದ ಕೆ.ವಿ.ಪ್ರಭಾಕರ ಅವರು ಮನವಿಗೆ ಉತ್ತಮವಾಗಿ ಸ್ಪಂದಿಸಿದರು.
ಇದೇ ಸಂದರ್ಭದಲ್ಲಿ ಕನಾ೯ಟಕ ಕಾಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದವತಿಯಿಂದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿರುವ ಕೆ.ವಿ.ಪ್ರಭಾಕರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ,ಕೆ.ಎಸ್.ಸ್ವಾಮಿ, ಜಿ.ವೈ.ಪದ್ಮಾ, ಮಹಮ್ಮದ್ ಯುನೂಸ್, ಹೆಚ್. ನರಸಿಂಹರಾಜು, ಅಮನ್ ಕೊಡಗಲಿ, ರಾಜು, ಜಗದೀಶ್, ಇರ್ಫಾನ್, ಡಾ.ಮಲ್ಲಿಕಾರ್ಜುನ್ ಸೇರಿದಂತೆ ಗದಗ ಹಾಗೂ ರಾಯಚೂರು ಜಿಲ್ಲಾ ಪದಾಧಿಕಾರಿಗಳು, ನಾನಾ ಜಿಲ್ಲೆಯ ದಿನಪತ್ರಿಕೆಗಳ ಸಂಪಾದಕರು ಇದ್ದರು.