ಅಮನ್ ಕೋಡಗಲಿಯವರಿಗೆ ” ವಿಶ್ವ ಕನ್ನಡ ಪ್ರಶಸ್ತಿ…
ಬೆಂಗಳೂರು : ಕನ್ನಡ ರಕ್ಷಕರ ವೇದಿಕೆ (ರಿ) ಬೆಮನಗಳೂರು ಮತ್ತು ವೈದ್ಯ ಕಿರಣ ಪತ್ರಿಕೆಯ 15 ನೇ ವಾರ್ಷಿಕೋತ್ಸವದ ಅಂಗವಾಗಿ ವಿಶ್ವ ಕನ್ನಡಿಗ ಪ್ರಶಸ್ತಿ ಗೆ ಸಾಮಾಜಿಕ ಕ್ಷೇತ್ರದಲ್ಲಿ ಮತ್ತು ಪತ್ರಿಕಾ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಿಮಿತ್ಯ ಹಾಯ್ ಮಿಂಚು ಪತ್ರಿಕೆಯ ಸಂಪಾದಕರು ಮತ್ತು ಜಮಿಯತುಲ್ ಮನ್ಸೂರ್ ರಾಜ್ಯಾಧ್ಯಕ್ಷ ಅಮನ್ ಕೊಡಗಲಿಯವರಿಗೆ ಆಯ್ಕೆ ಮಾಡಲಾಗಿದ್ದು , ಜ24 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಭಾಂಗಣ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ….
ಅವರಿಗೆ ಪ್ರಶಸ್ತಿ ಲಭಿಸಿದಕ್ಕೆ ಜಮಿಯತುಲ್ ಮನ್ಸೂರ್ ರಾಷ್ಟ್ರೀಯ ಅಧ್ಯಕ್ಷರು ಮತ್ತು ಉತ್ತರ ಪ್ರದೇಶದ ಮಾಜಿ ಮಂತ್ರಿಗಳಾದ ಜಾವೇದ ಇಕ್ಬಾಲ್ ಮನ್ಸೂರ್ ರವರು
ಭಾರತೀಯ ಪಿಂಜಾರ ನದಾಫ ಮನ್ಸೂರಿ ಭಾವೈಕ್ಯ ಗುರು ಪೀಠದ ಧರ್ಮ ಗುರುಗಳಾದ ಸಂಗಮ್ ಪೀರ್ ಚಿಸ್ತಿರವರು , ಹಜರತ ಟಿಪ್ಪು ಸುಲ್ತಾನ ಫೆಡರೇಶನ್ ರಾಷ್ತ್ರೀಯ ಅಧ್ಯಕ್ಷರಾದ ಕಪಗಲ್ ರಸೂಲಸಾಹೇಬರು,ಕಾರ್ಯ ನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿಯವರು, ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಾಗಲವಾಡರವರು
ರಾಜ್ಯ ಮಹಿಳಾ ಧುರೀಣರಾದ ಕವಿತಾ ಸಿಂಗ್ ರವರು ,ಹಿರಿಯ ವೈದ್ಯರು ಡಾ.ಸುಲೋಚನಾರವರು,ಹೇಮಲತಾರವರು, ಅಂಕಿತಾ ಮಹಿಳಾ ಸಂಘದ ಅಧ್ಯಕ್ಷರಾದ ಗೀತಾ ಸುರೇಶ ರವರು, ವಕೀಲರಾದ ಎಚ್.ಪಿ.ಕಲ್ಲಂ ಭಟ್ ರವರು, ಕಲ್ಯಾಣ ಕರ್ನಾಟಕದ ಯುವ ಮುಖಂಡ ರಮೇಶ ರವರು, ಸಮತಾ ಸೈನಿಕ ದಳದ ಮುಖಂಡ ಆರ್.ರಾಘವೇಂದ್ರ ರವರು, ಕಾಂಗ್ರೇಸ್ ಪಕ್ಷದ ಯುವ ಮುಖಂಡರಾದ ಸೈಫುಲ್ಲಾ, ಉದ್ಯಮಿ ಮುರ್ತುಜಾ ನದಾಫ,
ಇತರರು ಅಭಿನಂದನೆ ಸಲ್ಲಿಸಿದ್ದಾರೆ…
