ಕೊಪ್ಪಳ : ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಇಲಾಖೆ ವತಿಯಿಂದ ವಿವಿಧ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಯಿತು.
ಅನೇಕ ಶಾಲೆ ಮಕ್ಕಳು ವಿಭಿನ್ನ ರೀತಿಯ ಚಿತ್ರ ಬಿಡಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದರು.
ವಿದ್ಯಾರ್ಥಿಗಳು ಬಿಡಿಸಿದ ಚಿತ್ರಣವನ್ನು ಆರ್ ಟಿ ಓ ಇನ್ಸ್ಪೆಕ್ಟರ್ ಮಂಜುನಾಥ್ ಕೋರುವೆ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಈ ವೇಳೆ ಮಾತನಾಡಿದ ಆರ್ ಟಿ ಓ ಇನ್ಸ್ಪೆಕ್ಟರ್ ಮಂಜುನಾಥ್ ಕೋರುವೆ ಪ್ರತಿಯೊಂದು ಮಕ್ಕಳೆಲ್ಲ ಒಂದು ವಿಶೇಷ ಕಲೆ ಅಡಗಿರುತ್ತದೆ ಅದನ್ನು ಪ್ರೋತ್ಸಾಹಿಸಲು ಇಂತಹ ವೇದಿಕೆಗಳು ಅತ್ಯವಶ್ಯ ಎಂದು ಪ್ರೋತ್ಸಾಹಿಸಿ ಶುಭ ಕೋರಿದರು .