ಕೊಪ್ಪಳ: ನಗರದ ಬ್ರೂಸ್ ಲೀ ಕರಾಟೆ ಟ್ರೈನಿಂಗ್ ಸೆಂಟರ್ ವತಿಯಿಂದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗೆ 9 ಆಯ್ಕೆಯಾಗಿದ್ದಾರೆ.
ಅನೇಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಆರ್ನವ್ ಹಾನಗಲ್, ಶ್ರೀ ನಾಗಾರಣಿಕ ಹಾನಗಲ್, ಅಗಸ್ತ್ಯ ಅರಕೇರಿ,ವರ್ಷ, ದೈವಿಕ , ಆರ್ಚೀಶ್ ,ತೇಜಸ್ವಿನಿ ಹಾಗೂ ಅವರೊಂದಿಗೆ ಹೊಸ ಪ್ರತಿಭೆಗಳಾದ ಅಭಿನವ್ ಗಡಾದ, ಗಣೇಶ್ ಗಡಾದ ಕೊಪ್ಪಳ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ .
ಸಿಂಧನೂರಿನಲ್ಲಿ ನಡೆಯುವ ನವಂಬರ್ 25 ಹಾಗೂ 26ರಂದು ಎರಡನೇ ಅಂತರಾಷ್ಟ್ರೀಯ ಸ್ಪರ್ಧೆಗೆ ವಿವಿಧ ಜಿಲ್ಲೆ ಹಾಗೂ ರಾಜ್ಯ ರಾಷ್ಟ್ರಮಟ್ಟದಿಂದ ಆಗಮಿಸುವ ಕರಾಟೆ ಸ್ಪರ್ಧೆಗಳೊಂದಿಗೆ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು ಕೂಡ ಭಾಗವಹಿಸಲಿದ್ದಾರೆ ಪ್ರಥಮ ಬಾರಿಗೆ ಸಿಕ್ಸ್ ಇಯರ್ಸ್ ಕಟಗೇರಿ ಹಾಗೂ ಏಟ್ ಇಯರ್ಸ್ ಕೆಟಗೇರಿಯಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ ಯಾಗಿದೆ ಎಂದು ಕ್ರೀಡಾ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಕರಾಟೆ ಶಿಕ್ಷಕ ಮಹಾಂತೇಶ್ ಮಂಗಳೂರು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದು ಉನ್ನತ ಕಲೆ ಅಡಗಿರುತ್ತದೆ ಅದನ್ನು ಹೊರ ತೆಗೆಯುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು ಎಂಬ ನಿಟ್ಟಿನಲ್ಲಿ ಇಂದು ನಮ್ಮ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜಯಿಸಿ ಅಂತರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಕೊಪ್ಪಳ ಜಿಲ್ಲೆಯಿಂದ ಅಂತರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೊಪ್ಪಳ ಬಸವರಾಜ್, ವಾಣಿಜ್ಯ ಉದ್ಯಮಿ ಹಾಗೂ ಕ್ರೀಡಾಪಟು ಮಹಾಂತೇಶ್ ಹಾನಗಲ್, ಕೊಪ್ಪಳ ಜಿಲ್ಲಾ ಯೂತ್ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ಅರಕೇರಿ ,ಆರ್ ಟಿ ಓ ಇನ್ಸ್ಪೆಕ್ಟರ್ ಮಂಜುನಾಥ್ ಕೊರುವೆ ಇನ್ನಿತರರು ವಿದ್ಯಾರ್ಥಿಗಳಿಗೆ ಶುಭ ಕೋರಿದರು.