ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮವು ವಿಜಯನಗರ ಸಾಮ್ರಾಜ್ಯ ಕಾಲದ ಕಲಾಪೊಷಿತ ಚಿತ್ರಕಲೆಯ ತವರೂರು ಕಿನ್ನಾಳ ಗ್ರಾಮವು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಪ್ರವಾಸಿ ಕೇಂದ್ರ ದೇವರ ಮೂರ್ತಿಗಳು, ಗೊಂಬೆ ತಯಾರಿಕೆ, ಚಿತ್ರಕಲೆ, ನೇಕಾರಿಕೆ, ಕೃಷಿ, ಕಿನ್ನಾಳ ಡ್ಯಾಮ್ ಸೇರಿದಂತೆ ವಿವಿಧತೆಗೆ ಹೆಸರುವಾಸಿಗಿರುವ ಕಿನ್ನಾಳ ಗ್ರಾಮಕ್ಕೆ ವಿದೇಶಿಗರು, ವಿಶ್ವವಿದ್ಯಾಲಯದ, ಶಾಲಾ ಕಾಲೇಜುಗಳ ಕಲಿಕಾರ್ಥಿಗಳು ಪ್ರತಿನಿತ್ಯ ಆಗಮಿಸುತ್ತಾರೆ ಪ್ರಸ್ತುತ ಸರಿಯಾದ ರಸ್ತೆಗಳಿಲ್ಲದೆ ಮೂಲಭೂತ ಸೌಲಭ್ಯಗಳಿಲ್ಲದೆ ಗ್ರಾಮಸ್ಥರು ಮಾತ್ರವಲ್ಲದೆ ಪ್ರವಾಸಿಗರು ಪರದಾಡುವಂತಾಗಿದೆ.
ಕೊಪ್ಪಳ ಜಿಲ್ಲಾ ಕೇಂದ್ರದಿಂದ ಕೇವಲ 11 ಕಿ.ಮೀ ದೂರದಲ್ಲಿರುವ ಕಿನ್ನಾಳ ಗ್ರಾಮವನ್ನು ತಲುಪಲು ಬರೋಬ್ಬರಿ 45 ನಿಮಿಷ ಸಮಯ ಬೇಕಾಗುತ್ತದೆ ಅಷ್ಟರ ಮಟ್ಟಿಗೆ ತಗ್ಗು ಗುಂಡಿಗಳು ತುಂಬಿಕೊಂಡಿವೆ.
ಗ್ರಾಮದ ಬಹುತೇಕ ಜನರು ತಮ್ಮೆಲ್ಲ ಕಸುಬು ಮತ್ತು ವ್ಯವಹಾರಕ್ಕಾಗಿ ಕೊಪ್ಪಳವನ್ನೇ ಅವಲಂಬಿಸಿದ್ದಾರೆ, ಕಳೆದ ಮೂರು ವರ್ಷಗಳಿಂದ ಪ್ರತಿನಿತ್ಯ ಅಪಘಾತಗಳು ಆಗುತ್ತಿವೆ ಇಲ್ಲಿವರೆಗೆ ಕಿನ್ನಾಳ ರಸ್ತೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೂ ಹೆಚ್ಚಿದೆ ಅಂಗ ಹೂನರಾದವರೂ ಲೆಕ್ಕವೇ ಇಲ್ಲಾ ಇಷ್ಟಾದರೂ ಯಾವೊಬ್ಬ ಜನಪ್ರತಿನಿದಿಗಳು, ಅಧಿಕಾರಿಗಳು ಗಮನ ಹರಿಸುತಿಲ್ಲ.
ಗಂಗಾವತಿ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಕಿನ್ನಾಳ ಗ್ರಾಮದ ರಸ್ತೆ 03ಕಿ.ಮಿ ಆದರೆ ಉಳಿದ 08ಕಿ.ಮಿ ಕೊಪ್ಪಳ ವಿಧಾನಸಭಾ ವ್ಯಾಪ್ತಿಗೆ ಬರುತ್ತದೆ ಗಂಡ ಹೆಂಡತಿ ನಡುವೆ ಕೂಸು ಬಡವನಾಯಿತು ಅನ್ನೋಹಾಗೆ ಇಬ್ಬರು ಶಾಸಕರನ್ನು ಪಡೆದಿದ್ದರೂ, ಪಕ್ಕದಲ್ಲೇ ಜಿಲ್ಲಾ ಕೇಂದ್ರವಿದ್ದರೂ, ಪ್ರವಾಸಿ ತಾಣವಾಗಿದ್ದರು ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.
ಕಿನ್ನಾಳ ರಸ್ತೆ ದುರಸ್ಥಿಗಾಗಿ ಪಾದಯಾತ್ರೆ ಮಾಡಿದ್ದೇವೆ, ಧರಣಿ ಕೂತಿದ್ದೇವೆ, ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿದಿಗಳಿಗೆ ಮನವಿ ಕೊಟ್ಟಿದ್ದೇವೆ ಇಷ್ಟಾದರೂ ಕಳೆದ 10ವರ್ಷಗಳಿಂದ ಯಾವುದೇ ಸ್ಪಂದನೆ ದೊರತಿಲ್ಲ ಕಾಮಗಾರಿ ಆರಂಭಗೊಂಡಿಲ್ಲ ಈ ಮೂಲಕ ಜನಪ್ರತಿನಿದಿಗಳಿಗೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ ಇನ್ನೂ 15 ದಿನಗಳ ಒಳಗಾಗಿ ರಸ್ತೆ ಕಾಮಗಾರಿ ಪ್ರಾರಂಭಿಸದೆ ಇದ್ದಲ್ಲಿ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಮೂಲಕ ಕಿನ್ನಾಳ ಗ್ರಾಮಸ್ಥರು
ಕಿನ್ನಾಳ ಕೊಪ್ಪಳ ರಸ್ತೆ ಹೋರಾಟ ಸಮಿತಿ ಸಂಚಾಲಕರು ಮೌನೇಶ ಕಿನ್ನಾಳ, ದೇವರಾಜ ಹರಿಜನ, ಮಲ್ಲಪ್ಪ ಉದ್ದಾರ, ಕೆ. ಎಲ್ ರವಿಕಿರಣ ಮನವಿ ಸಲ್ಲಿಸಿದ್ದಾರೆ.