ಬಾಗಲಕೋಟೆ: ಬೆನಕಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಆರೋಗ್ಯ ಸಿಂಚನ” ಕಾರ್ಯಕ್ರಮ ಆಯೋಜಿಸಲಾಗಿತ್ತು. ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ ಆರ್ ಸಣ್ಣಪ್ಪನ್ನವರ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿ,ಜಿ ಆರ್ ತಳವಾರ ಹಾಗೂ ಶಾಲಾ ಗುರುಮಾತೆಯರು ಸಾಂಕ್ರಾಮಿಕ ರೋಗಗಳ ತಡೆ ವೈಜ್ಞಾನಿಕ ಮಾಹಿತಿ ಕರಪತ್ರ ಬಿಡುಗಡೆ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ, ರಾಷ್ಟ್ರೀಯ ವಿವಿಧ ಸಾಂಕ್ರಾಮಿಕ ವೈರಾಣು ಬ್ಯಾಕ್ಟೀರಿಯಾ ರೋಗಗಳ ತಡೆಗೆ ಮುಂಜಾಗ್ರತೆ ಅರಿವು ಮುಖ್ಯ ಕಡಿತ ಚಿಕ್ಕದು ಹಾನಿ ದೊಡ್ಡದು ತದ್ದು ಮಚ್ಛೆ ಮುಚ್ಚಿಡಬೇಡಿ ಮನದಲ್ಲಿ ವೈದ್ಯರಲ್ಲಿ ತೋರಿಸಿ ಪರೀಕ್ಷಿಸಿಕೊಳ್ಳಿ ಸ್ಪರ್ಶ ಜ್ಞಾನ ಇಲ್ಲದ ತಿಳಿ ಬಿಳಿ ತಾಮ್ರ ವರ್ಣದ ಚರ್ಮದ ತದ್ದು ಮಚ್ಛೆ ಕುಷ್ಠರೋಗವಿರಬಹುದು ಬಹುಔಷಧಿ ಚಿಕಿತ್ಸೆಯಿಂದ ಕುಷ್ಠರೋಗ ಸಂಪೂರ್ಣ ಗುಣಮುಖ.ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆಯಿಂದ ಅಂಗವಿಕಲತೆ ತಡೆಯಬಹುದು ಸೊಳ್ಳೆ ಉತ್ಪತ್ತಿ ತಾಣಗಳು ಬೆಳೆಯದಂತೆ ನೋಡಿಕೊಳ್ಳಬೇಕು ವೈಜ್ಞಾನಿಕವಾಗಿ ನೀರನ್ನು ಸಂಗ್ರಹಿಸಿ ಬಳಸಬೇಕು ನೀರಿನ ಸಂಗ್ರಹಗಳಮೇಲೆ ತಪ್ಪದೇ ಮುಚ್ಚಳಿಕೆ ಹಾಕಿ ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಪೋಷಕಾಂಶಯುಕ್ತ ಆಹಾರ ಸೇವನೆ ಮಾಡಬೇಕು ಬೇಕರಿ ಪದಾರ್ಥಗಳು ವರ್ಜಿಸಬೇಕು ಜಂತು ಹುಳು ರಹಿತ ಮಕ್ಕಳು ಆರೋಗ್ಯವಂತ ಮಕ್ಕಳು ಆಹಾರ ಸೇವನೆ ಮುಂಚೆ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿ ಆಸ್ಪತ್ರೆಗೆ ಅಲೆದಾಟ ತಪ್ಪಿಸಿಕೊಳ್ಳಿ ಎಂದು ಮಕ್ಕಳಲ್ಲಿ ಆರೋಗ್ಯ ಸಿಂಚನ ಅರಿವು ಮೂಡಿಸಿದರು. ಸಹ ಶಿಕ್ಷಕ ಪಿ ಆರ್ ಸಣ್ಣಪ್ಪನ್ನವರ ಆರೋಗ್ಯ ಇಲಾಖೆಯ ಎಲ್ಲ ಸಲಹೆಗಳನ್ನು ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.”ಆರೋಗ್ಯ ಸಿಂಚನ” ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಜಿ ಆರ್ ತಳವಾರ,ಶಾಲಾ ಗುರುಮಾತೆಯರಾದ ಎಲ್ ಎ ಪಾಟೀಲ್ ಎಸ್ ಆರ್ ಅಬ್ಬಿಗೇರಿ ಎ ಎಸ್ ಮಂತ್ರೆ, ಎ ಬಿ ಮೇಟಿ ,ಆಶಾ ಕಾರ್ಯಕರ್ತೆಯರಾದ ತಾಯವ್ವ ಮಾದರ, ಅವ್ವಕ್ಕ ಗೊರವರ, ಸುನಂದಾ ನಿಂಗಾಪೂರ ಶಾಲಾ ಮಕ್ಕಳ ತದ್ದು ಮಚ್ಛೆ ತಪಾಸಣೆ ಮಾಡಲಾಯಿತು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.