ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕು ಗೊಳಿಸುತ್ತಿರುವುದು ಅತ್ಯಂತ ವಿಷಾದಕರ:-ಹೆಚ್.ಎನ್ ಮೊಹಮ್ಮದ್ ಇಮಾಮ್ ನಿಯಾಜಿ
ಹೊಸಪೇಟೆ :- (ವಿಜಯನಗರ ಜಿಲ್ಲೆ) ಹೊಸಪೇಟೆ ತಾಲೂಕು ಅಂಜುಮನ್ ಶಾದಿ ಮಹಲಿನಲ್ಲಿ ಅಂಜುಮನ್ ಖಿದ್ಮತೆ- ಇ -ಇಸ್ಲಾಂ ಕಮಿಟಿ ಹೊಸಪೇಟೆ ಇವರ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಸರ್ಕಾರಿ ಉದ್ಯೋಗಗಳ ದೃಷ್ಟಿ ಕೋನದಿಂದ ಆಕಾಂಕ್ಷಿ ಅಭ್ಯರ್ಥಿಗಳಿಗೆ ಉಚಿತ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಅಂಜುಮನ್ ಕಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಎಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕು ಗೊಳಿಸುತ್ತಿರುವುದು ಅತ್ಯಂತ ವಿಷಾದಕರವಾಗಿರುತ್ತದೆ. ಹಾಗೂ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಮಯದಲ್ಲಿ ದುಶ್ಚಟಗಳಿಗೆ ಬಲಿಯಾಗಿ ತನು, ಮನ, ಧನ, ಸಮಯ, ವಯಸ್ಸು, ಆರೋಗ್ಯ, ಆತ್ಮ ಸಂಯಮ, ಆತ್ಮ ಗೌರವ, ಜೀವನದ ಗುರಿ ಉದ್ದೇಶಗಳನ್ನು, ಒಟ್ಟಾರೆಯಾಗಿ ಸರ್ವಸ್ವವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗೂ ಜವಾಬ್ದಾರಿ ರಹಿತವಾಗಿ ವರ್ತಿಸಿ ತಂದೆ ತಾಯಿಗಳ ಸಾವಿರಾರು ಕನಸುಗಳನ್ನು ಹಾಳು ಮಾಡುತ್ತಿದ್ದಾರೆ ಎಂದರು
ಹಾಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಆಗಮಿಸಿದ ರಾಜ್ಯ ಸಮನ್ವಯಾಧಿಕಾರಿಗಳಾದ ನಿಜಾಮುದ್ದೀನ್ ರವರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗಗಳ ಕುರಿತು ಮಾಹಿತಿ ನೀಡುತ್ತಾ,, ಯು ಪಿ ಎಸ್ ಸಿ, ಎಸ್ ಎಸ್ ಸಿ, ಕೆಪಿಎಸ್ಸಿ, ಕೆಇಎ, ಎಫ್ಡಿಎ, ಎಸ್ಡಿಎ, ಪಿಎಸ್ಐ, ಪಿ ಸಿ, ಇನ್ನು ಹಲವಾರು ವೆಬ್ಸೈಟ್ಗಳ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಉನ್ನತ ಸ್ಥಾನಕ್ಕೆ ಏರಲು ಜಗತ್ತಿನ ಯಾರಾದರೂ ಒಬ್ಬ ಆದರ್ಶ ವ್ಯಕ್ತಿಗಳನ್ನು ಆಯ್ಕೆಮಾಡಿಕೊಂಡು ಅವರ ಮಾರ್ಗದರ್ಶನಗಳನ್ನ ಚಾಚು ತಪ್ಪದೆ ಪಾಲಿಸಬೇಕೆಂದರು
ಈ ಒಂದು ಕಾರ್ಯಗಾರದಲ್ಲಿ ಎಜುಕೇಶನಲ್ ಸೆಕ್ರೆಟರಿ ಆಗಿರುವ ಅಡ್ವಕೇಟ್ ಸದ್ದಾಮ ಹುಸೇನ್, ಅಂಜುಮನ್ ಕಮಿಟಿಯ ಉಪಾಧ್ಯಕ್ಷರಾದ ಫೈರೋಜ್, ಕಮಿಟಿಯ ಕಾರ್ಯದರ್ಶಿಗಳಾದ ಅಬೂಬಕರ್ ಸಿದ್ದಿಕಿ,ಹಾಗೂ ಸದಸ್ಯರಾದ ಕದೀರ್, ಹಾಗೂ ಮುಜೀಬುಲ್ ರೆಹಮಾನ್, ಹಾಗೂ ನೂರಾರು ವಿದ್ಯಾರ್ಥಿಗಳು ಪಾಲಕರು ಪೋಷಕರು ಉಪಸ್ಥಿತರಿದ್ದರು