ನೃತ್ಯೋತ್ಸವ ಕಾರ್ಯಕ್ರಮ ಸಮಾಜದಲ್ಲಿ ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ.
ಶಹಾಪುರ ;
ನಮ್ಮ ಶಹಾಪುರ ತಾಲೂಕು ಜಿಲ್ಲೆಯ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದವರೆಗೂ ತೆಗೆದುಕೊಂಡು ಹೋಗಬೇಕೆನ್ನುವ ಆಸೆ ನಮ್ಮದು ಎಂದು ಸಂಸ್ಥೆಯ ಅಧ್ಯಕ್ಷ್ಯೇ ಸುರೇಖಾ ಕುಂಬಾರ ಅವರು ಅಭಿಪ್ರಾಯಪಟ್ಟರು.
ಯಾದಗಿರಿ ಜಿಲ್ಲಾಡಳಿತ, ಸಹಾಯಕ ನಿರ್ದೇಶಕರು , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ, ಸಂಯುಕ್ತಾಶ್ರಯದಲ್ಲಿ ಕುಂಬಾರಗೆರಿ ಹಿರೇಮಠದಲ್ಲಿ ನಡೆದ ನೃತ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ದೀಪ ಬೆಳಗಿಸಿ, ನಟರಾಜ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕ; ಶಿಕ್ಷಣಕ್ಕೆ ನೀಡುವ ಆದ್ಯತೆ ಸಾಂಸ್ಕೃತಿಕ ನೃತ್ಯ ಹಾಗೂ ಸಂಗೀತಕ್ಕೆ ಆದ್ಯತೆ ನೀಡಬೇಕು ಹಾಗೂ ಸಂಸ್ಥೆಯು ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷ ಣಿಕವಾಗಿ ಬೆಳೆಯಬೇಕು ಎಂದು ಶರಣು ದೊರನಹಳ್ಳಿ ಅವರು ಅಭಿಪ್ರಾಯ ಪಟ್ಟರು.
ಇದೆ ಸಂದರ್ಭದಲ್ಲಿ ನಟರಾಜ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.
ಸಮಾಜದಲ್ಲಿ ಈ ಸಂಸ್ಥೆಯು ಬಹಳ ಪ್ರೇರಣೆಯಾಗಿದೆ ಹಾಗೂ ಇದೆ ರೀತಿಯ ಸಮಾಜಮುಖಿ ಕೆಲಸಗಳು,ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ಶಹಾಪುರಿನ ಯುವ ಉದ್ಯಮಿ ರಾಜು ಆನೆಗುಂದಿ ಅವರು ಮಾತನಾಡಿದರು,
ಗವಾಯಿಗಳದ ಬುದಯ್ಯ ಸ್ವಾಮಿ ಹಿರೇಮಠ ಮತ್ತು ತಬಲಾ ಸಾತಿ ಮಲ್ಲಿಕಾರ್ಜುನ ಇವರು ನೆರವೇರಿಸಿದರು. ಸುಗುರೇಶ ಕುಂಬಾರ ನಿರೂಪಿಸಿದರು ಶರಣು ಯಡ್ರಾಮಿ ಸ್ವಾಗತಿಸಿದರು ಸಂಗೀತಾ ಹೂಗಾರ ಇವರು ವಂದಿಸಿದರು
ಈ ಸಂದರ್ಭದಲ್ಲಿ
ಚಂದಪ್ಪ ವಡಿಗೆರಿ , ಉಮೇಶ ಗುಡಗುಂಟಿ, ಸಂಗಮೇಶ ಅನವಾರ, ರಾಜು ಆನೆಗುಂದಿ, ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಪ್ರೇಕ್ಷಕರು, ಉಪಸ್ಥಿತರಿದ್ದರು.