ಕೆರೆ ಕಟ್ಟೆಗಳನ್ನು ಪುನಶ್ಚೇತನಗೊಳಿಸಬೇಕು..
ಧಾರವಾಡ / ತೇಗೂರ : ಪ್ರಸ್ತುತ ದಿನಗಳಲ್ಲಿ ಕೆರೆಕಟ್ಟೆಗಳು ಗ್ರಾಮೀಣ ಭಾಗದ ಜನರಿಗೆ ಜೀವಾಳ ಹೀಗಾಗಿ ಗ್ರಾಮೀಣ ಭಾಗಗಳಲ್ಲಿ ಪೂಜ್ಯ ಹೆಗ್ಗಡ ಯವ್ರು ಕೆರೆಕಟ್ಟೆಗಳನ್ನು ಪುನಶ್ಚೇತನ ಗೊಳಿಸಬೇಕು ಅಲ್ಲಿನ ಜನತೆಗೆ ರೈತರಿಗೆ ಹಾಗೂ ಪಶು ಪಕ್ಷಿಗಳಿಗೆ ಸದುಪಯೋಗವಾಗಬೇಕೆಂದು 2016 ರಲ್ಲಿಯೇ ಕೆರೆಗಳನ್ನು ಪುನಶ್ಚೇತನ ಗೊಳಿಸಲು ಉತ್ತಮ ಯೋಜನೆಯನ್ನು ಜಾರಿಗೆ ತಂದರು ಎಂದು ಜಿಲ್ಲಾ ನಿರ್ದೇಶಕರು ತಿಳಿಸಿದರು
ಜೀವಜಲ ಉಳಿಸಲು ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಈ ದಿನ ಧಾರವಾಡ ಗ್ರಾಮೀಣ ಯೋಜನಾ ಕಚೇರಿ ವ್ಯಾಪ್ತಿಯ ತೆಗೂರ್ ಗ್ರಾಮ ಪಂಚಾಯಿತಿಗೆ ಒಳಪಡುವ ಹಳೆತೇಗುರ್ ಗ್ರಾಮದ ಜೋಗಿ ಕೆರೆಯ ಭೂಮಿ ಪೂಜೆ ಮತ್ತು ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಉದ್ಘಾಟಕರಾಗಿ ಕಾರ್ಯಕ್ರಮಕ್ಕೆ ಆಗಮಿಸಿರುವಂತಹ ಧಾರವಾಡ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಪ್ರದೀಪ್ ಶೆಟ್ಟಿ ಯವರು ಜ್ಯೋತಿಯನ್ನು ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡುತ್ತಾ ಪಂಚಭೂತಗಳಲ್ಲಿ ಒಂದಾದ ಈ ಜೀವ ಜಲ ಪ್ರತಿಯೊಂದು ಹನಿಯೂ ಅಮೃತಕ್ಕೆ ಸಮಾನ ಮೊದಲು ಬಾವಿಯಿಂದ ತೆಗೆದು ಕುಡಿಯುತ್ತಿರುವ ನೀರನ್ನು ಈಗ ಹಣ ನೀಡಿ ವಾಟರ್ ಬಾಟಲ್ ಗಳಲ್ಲಿ ಕುಡಿಯುತ್ತಿದ್ದೇವೆ ಇದೇ ರೀತಿ ಮನುಷ್ಯನ ದುರಾಸೆಗೆ ಪ್ರಕೃತಿ ಕೆರೆಕಟ್ಟೆಗಳನ್ನು ನಾಶವಾಗುತ್ತಿದ್ದು ಮುಂದೊಂದು ದಿನ ಕುಡಿಯುವ ನೀರಿಗೂ ಆಹಾಕಾರ ಉಂಟಾದಲ್ಲಿ ಕ್ಯಾಪ್ಸುಲ್ ಗಳ ಮುಖಾಂತರ ನೀರನ್ನು ಸೇವಿಸುವ
ಪರಿಸ್ಥಿತಿ ಬಂದರೂ ಬರಬಹುದು ಎಂದು ಎಚ್ಚರಿಸುತ್ತಾ ಕೆರೆಕಟ್ಟೆಗಳು ಗ್ರಾಮೀಣ ಭಾಗದ ಜನರಿಗೆ ಜೀವಾಳ ಎಂಬುದನ್ನ ಮನಗಂಡ ವೀರೇಂದ್ರ ಹೆಗಡೆ ಅವರು ಕೆರೆಗಳ ಪುನರ್ಚೇತನಗೊಳಿಸುವ ಉತ್ತಮ ಯೋಜನೆಯನ್ನು 2016ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಾರಿಗೆ ತಂದು ರಾಜ್ಯದಲ್ಲಿ ನೂರಾರು ಕೆರೆಗಳನ್ನು ಇಲ್ಲಿಯವರೆಗೆ ಪುನರ್ ಚೇತನ ಗೊಳಿಸುತ್ತಾ ಬಂದಿದೆ ಎಂದು ತಿಳಿಸುತ್ತಾ ಯೋಜನೆಯ ಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಗ್ರಾಮಸ್ಥರಿಗೆ ಪರಿಚಯ ಮಾಡಿಕೊಟ್ಟರು
ಯೋಜನೆಯಿಂದ ಕೆರೆಕಟ್ಟೆಗಳ ಪುನರ್ಚೇತನವನ್ನು ಕೈಗೊಳ್ಳುತ್ತಿರುವುದು ಸಂತೋಷದ ವಿಚಾರ ಹಾಗೆ ನಮ್ಮ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಗೆ ಬರುವ ಜೋಗಿ ಕೆರೆಯನ್ನು ಆಯ್ಕೆ ಮಾಡಿರುವುದು ನಮ್ಮೆಲ್ಲರಿಗೂ ಸಂತೋಷವನ್ನು ತಂದುಕೊಟ್ಟಿದೆ ಕೆರೆ ಕಾಮಗಾರಿಗೆ ಬೇಕಾದಂತಹ ಎಲ್ಲಾ ಸಹಕಾರವನ್ನ ಪಂಚಾಯತ್ ಕಡೆಯಿಂದ ನೀಡುವುದಾಗಿ ನಾಗರತ್ನ ತಪೇಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಸಬಲಿಕರಣಕ್ಕೋಸ್ಕರ ಈಗಾಗಲೇ ಸಾಲ ಸೌಲಭ್ಯಗಳನ್ನ ನೀಡುತ್ತಾ ಬರುವುದರೊಂದಿಗೆ ವಿಕಲಚೇತನರಿಗೆ ನೀಡುವ ಸಲಕರಣೆಗಳು ಇನ್ನೂ ಇಂತಹ ಸಾಕಷ್ಟು ಅನುದಾನಗಳ ರೂಪದಲ್ಲಿ ನೀಡುವ ಸೌಲಭ್ಯಗಳನ್ನ ಬಗ್ಗೆ ಶ್ಲಾಗಿಸುತ್ತಾ ಕೆರೆ ಹೂಳು ತೆಗೆಯುವುದರಿಂದ ನೀರಿನ ಸಂಗ್ರಹಣೆ ಹೆಚ್ಚಾಗುವುದರಿಂದ ಅಂತರ್ಜಲ ಮಟ್ಟವು ಹೆಚ್ಚಾಗುವುದರೊಂದಿಗೆ ಸುತ್ತಮುತ್ತಲಿನ ಬೋರ ವೇಲ್ ಗಳು ಕೂಡ ರಿಚಾರ್ಜ್ ಆಗುವುದರಿಂದ ರೈತರಿಗೆ ಕೃಷಿ ಜಮೀನಿಗೆ ನೀರಿನ ಸಮಸ್ಯೆ ಬಗೆಹರಿಯುವುದು ಎಂದು ತಿಳಿಸಿ ಈ ಒಂದು ಅಭೂತಪೂರ್ವ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಮಡಿವಾಳಪ್ಪ ಬೇಳವಲಾದ್ ಅವರು ತಿಳಿಸಿದರು
ಜೋಗಿ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಭೀಮಪ್ಪ ಕಮತರ ಅವರು ನೀರಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಗ್ರಾಮದ ಕೆರೆಯ ಹೂಳೆತ್ತಲು ಆಯ್ಕೆ ಮಾಡಿದ್ದು ಇದರಿಂದ ನಮ್ಮ ಗ್ರಾಮದ ಸುತ್ತಮುತ್ತಲಿನ ರೈತರಿಗೆ ಫಲವತ್ತತೆಯಾದ ಮಣ್ಣು ಹಾಗೂ ಪ್ರಾಣಿಪಕ್ಷಿಗಳಿಗೆ ಕುಡಿಯಲು ನೀರಿನ ಅನುಕೂಲವಾಗುವುದರೊಂದಿಗೆ ಕೆರೆಯಿಂದ ತೆಗೆದ ಹೋಳಿನಿಂದ ಸಾಕಷ್ಟು ರೈತರಿಗೆ ಫಲವತ್ತತೆಯಾದ ಮಣ್ಣು ದೊರೆ ಯುತ್ತದೆ ಈ ಒಂದು ಕಾಮಗಾರಿಯಿಂದ ಗ್ರಾಮಕ್ಕೆ ಸಾಕಷ್ಟು ಅನುಕೂಲವಾಗುವದಕ್ಕೆ ನಮ್ಮ ಗ್ರಾಮದ ಮೇಲೆ ಪೂಜ್ಯರು ನೀಡಿರುವ ಆಶೀರ್ವಾದ ಎಂದು ಭಾವಿಸುತ್ತೇವೆ ಎಂದು ತಿಳಿಸಿದರು ವೇದಿಕೆ ಮೇಲಿರುವ ಎಲ್ಲಾ ಅಧಿಕಾರಿ ವರ್ಗದವರಿಗೆ ಅಭಿನಂದನೆಗಳನ್ನು ತಿಳಿಸಿದರು
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರು ಕೈಗೊಳ್ಳುವ ಎಲ್ಲ ಸಮಾಜಮುಖಿ ಕಾರ್ಯಕ್ರಮಗಳು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು ಪ್ರತಿಯೊಂದು ಕಾರ್ಯಕ್ರಮಗಳು ಕೂಡ ಅರ್ಥಪೂರ್ಣವಾಗಿದ್ದು ಪೂಜ್ಯ ವೀರೇಂದ್ರ ಹೆಗಡೆಯವರು ತಮ್ಮ ಸಂಸ್ಥೆಯ ಮೂಲಕ ಮಾಡುವ ಎಲ್ಲಾ ಅಭಿವೃದ್ಧಿ ಕಾರ್ಯಗಳೆಲ್ಲವನ್ನು ನಾವು ನೀವೆಲ್ಲರೂ ಸೇರಿ ಸಂರಕ್ಷಣೆ ಮಾಡೋಣ ಎಲ್ಲರೂ ಸೇರಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪಣತೊಡೋಣ ಎಂದು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಮ.ನಿ.ಪ್ರ.ಸ್ವ.ಪಂಚಾಕ್ಷರಿ ಮಹಾಸ್ವಾಮಿಗಳು ಶ್ರೀ ಗುರು ಮಡಿವಾಳೆಶ್ವರ ಮಠ ನಿಚ್ಚನಕಿ ಸ್ವಾಮಿಗಳು ಕರೆ ನೀಡಿದರು
**ಸದರಿ ಸಭೆಯಲ್ಲಿ ಧಾರವಾಡ ಗ್ರಾಮೀಣ ಯೋಜನಾ ಕಚೇರಿ ಯ ಮಾನ್ಯ ಯೋಜನಾಧಿಕಾರಿಗಳಾದ ಶ್ರಿ ಯುತ ಮಯೂರ.ಎನ್. ತೊರಸ್ಕರ್, ನಿಂಗರಾಜ್ ಮಾಳವಾಡ ಕೆರೆ ಅಭಿಯಂತರರು ಧಾರವಾಡ ಪ್ರಾದೇಶಿಕ ವಿಭಾಗ, ಲಕ್ಷ್ಮಿ ಮಡಿವಾಳಪ್ಪ ಬೆಳವಲದ ಗ್ರಾಮ ಪಂಚಾಯತ್ ಅಧ್ಯಕ್ಷರು ತೇಗುರ್, ಗ್ರಾಮ ಪಂಚಾಯತ್ ಸದಸ್ಯರಾದ ಮಾರುತಿ ಬಂಡಿವಡ್ಡರ್, ಈರಯ್ಯ ಹಿರೇಮಠ, ಮಂಜುಳಾ ಜೋಗಿ, ಸಿದ್ದಲಿಂಗವ್ವ ಗುಡದರಿ, ಹಾಗೂ ಜೋಗಿ ಕೆರೆಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಸ್ವ ಸಹಾಯ ಮತ್ತು ಪ್ರಗತಿ ಬಂದು ಸಂಘಗಳ ಸದಸ್ಯರು ಹಾಗೂ ಗ್ರಾಮದ ಗುರುಹಿರಿಯರು ಮತ್ತು ಗ್ರಾಮದ ಸದಸ್ಯರು ಹಾಗೂ ಸೇವಾ ಪ್ರತಿನಿಧಿ ಶಿವಲಿಂಗಪ್ಪ ಒಕ್ಕೂಟದ ಅಧ್ಯಕ್ಷರಾದ ನೀಲಪ್ಪ ಉಪಸ್ಥಿತರಿದ್ದರು
ಕಾರ್ಯಕ್ರಮದ ನಿರೂಪಣೆಯನ್ನು ಕೃಷಿ ಮೇಲ್ವಿಚಾರಕರಾದ ರವಿ ಚ ಹೊಟ್ಟಿನ ಅವರ ನಿರ್ವಹಿಸಿದರು ವಲಯದ ಮೇಲ್ವಿಚಾರಕರಾದ ಶ್ರೀಮತಿ ಶಿಲ್ಪ ಸಭೆಯಲ್ಲಿರುವ ಎಲ್ಲರನ್ನೂ ಕೂಡ ಸ್ವಾಗತಿಸಿದರು..