ಇಂದು ಕೊಪ್ಪಳದಲ್ಲಿ ಉರ್ದು ಸಹಪಾಠಿಗಳ
ಸ್ನೇಹ ಮಿಲನ ಹಾಗೂ ಗುರು ವಂದನ ಕಾರ್ಯಕ್ರಮ
ಕೊಪ್ಪಳ ಸಪ್ಟಂಬರ್ 13 ,ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಉರ್ದು ಪ್ರೌಢ ಶಾಲಾ ವಿಭಾಗದ 1980 81ರ ಸಾಲಿನ ಉರ್ದು ಎಸ್ ಎಸ್ ಎಲ್ ಸಿ ಬ್ಯಾಚ್ ಸಹಪಾಠಿಗಳ ಸ್ನೇಹ ಮಿಲನ ಹಾಗೂ ವಿದ್ಯಾಭ್ಯಾಸ ಕಲಿಸಿದ ಗುರುಗಳಿಗೆ ಗುರು ವಂದನಾ ಕಾರ್ಯಕ್ರಮ ನಗರದ ಜಿಲ್ಲಾ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ದಿ, 14ರ ರವಿವಾರ ಬೆಳಿಗ್ಗೆ 10:30 ಗಂಟೆಗೆ ಜರುಗಲಿದೆ,
ಕಾರ್ಯಕ್ರಮದಲ್ಲಿ ಅಂದಿನ ಗುರುಗಳಾದ ಹಾಲಿ ಮೈಸೂರು ನಿವಾಸಿ ನಿವೃತ್ತ ಗಣಿತ ಶಿಕ್ಷಕ ರಾದ ರಹಮತುಲ್ಲಾ ಷರೀಫ್ ಹಾಗೂ ಹಾಲಿ ಚಿತ್ರದುರ್ಗದ ನಿವಾಸಿ ನೀವೃತ್ತ ವಿಜ್ಞಾನ ಶಿಕ್ಷಕ ಸೈಯದ್ ಸಾದತುಲ್ಲ ರವರಿಗೆ ಗುರು ವಂದನಾ ಹಾಗೂ ವಿಶೇಷ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ,
ಸದ್ರಿ ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತ ಅತಿಥಿಗಳಾಗಿ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್, ಸರ್ಕಾರಿ ಉರ್ದು ಪ್ರೌಢಶಾಲೆಯ ಉಪ ಪ್ರಚಾರ್ಯರಾದ ಎಂ. ಎ. ಖೈಯುಮ್ , ಕೊಪ್ಪಳ ದ ಉರ್ದು ಸಾಹಿತಿ ನಿವೃತ್ತ ಪ್ರಾಧ್ಯಾಪಕ ಅನ್ವರ್ ಹುಸೇನ್ ,ವಿಜಯನಗರ ಜಿಲ್ಲೆಯ ಹಿರಿಯ ಸಮಾಜಸೇವಕ ಉರ್ದು ಸಾಹಿತಿ ಶಬ್ಬೀರ್ ಅಹ್ಮದ್, ಕೊಪ್ಪಳದ ಹಿರಿಯ ಸಮಾಜ ಸೇವಕ ಎಂ .ಎ. ಮಾಜಿದ ಸಿದ್ದೀಕಿ ,ಕಾನೂನು ಮಾಪನ ಇಲಾಖೆಯ ನಿರೀಕ್ಷಕ ಎಂ. ಬದಿಯುದ್ದೀನ್ ಅಹಮದ್ ನವೀದ. ಉರ್ದು ಸಾಹಿತಿ ಪ್ರಾಧ್ಯಾಪಕ ಮೌಲಾನ ಮೊಹಮ್ಮದ್ ಅಲಿ ಹಿಮಾಹಿತಿ ,ಉರ್ದು ಕವಿ ಎಂ, ವಿಚಾರತ್ ಅಲಿ, ಉದ್ಯಮಿ ಗಳಾದ ರಿಯಾಜುದ್ದೀನ್ ಅಹಮದ್ ಖಲ್ಲೆದಾರ್, ಜಾಕಿರ್ ಹುಸೇನ್ ಕುಷ್ಟಗಿ, ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ,
19 80 81ರ ಸಾಲಿನ ಉರ್ದು ಸಹಪಾಠಿಗಳಾದ ಈಗಿನ ಕರ್ನಾಟಕ ಕುಡಿಯುವ ನೀರು ಸರಬರಾಜು ಇಲಾಖೆಯ ಮುಖ್ಯ ಅಭಿಯಂತರಾದ ಏಜಾಜ ಹುಸೇನ್, ಉದ್ಯಮಿ ಮೈಸೂರಿನ ಸಮಾಜ ಸೇವಕರಾದ ಎಂ. ತಾಹಿರ್ ಅಲಿ ,ಐಟಿಐ ಕಾಲೇಜು, ಮೈಸೂರಿನ ನಿವೃತ್ತ ಪ್ರಾಚಾರ್ಯರಾದ ರಫೀಕ್ ಅಹಮದ್ ಬಿಜಾಪುರ್, ವಿಜಯಪುರದ ನಿವೃತ್ತ ಉಪನ್ಯಾಸಕಿ ರುಕ್ಸಾನಾ ಪರ್ವೀನ್ ಮನಿಯಾರ್ ,ಕಲಬುರ್ಗಿಯ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಜೈಬು ನ್ನಿಸಾ ಪಟೇಲ್, ನಿವೃತ್ತ ಶಿಕ್ಷಕರಾದ ಶಮೀಮುನ್ನಿಸಾ ಬೇಗಂ ಹನಗುಂದ್, ಸೈಯದ್ ಗೌಸ್ ಪಾಷಾ ಖಾಜಿ, ಜೀನತ್ ಬೇಗಮ್ ,ಸಿ ಆರ ಪಿ ಎಫ್ ನಿವೃತ್ತ ನಿರೀಕ್ಷಕ ಸೈಯದ್ ಸಲೀಮುದ್ದೀನ್, ಇರಕಲ್ಗಡ ಪ್ರೌಢಶಾಲೆಯ ಸಹಶಿಕ್ಷಕಿ ಸಲ್ಮಾ ಜಹಾನ್ ,ಸಾರಿಗೆ ಸಂಸ್ಥೆಯ ನಿವೃತ್ತ ನೌಕರ ಅಬ್ದುಲ್ ರಜಾಕ್ ಸೌದಾಗರ್, ಕೊಪ್ಪಳದ ಖಲೀಲ ಅಹ್ಮದ್ ,ಯೂಸೂಫ್ ಅಹಮದ್ ಮನಿಯಾರ್, ಶೇಕ್ ಅಬ್ದುಲ್ಲಾ, ರಾಯಚೂರಿನ ಅಬ್ದುಲ್ ಲತೀಫ್ ,ಬೆಂಗಳೂರಿನ ಅಫೀಫಾ ಕೀಲ್ಲೇದಾರ್ , ಧಾರವಾಡದ ಜಕೀಯಾ ಸುಲ್ತಾನ. ಕೊಪ್ಪಳದ ಬದ್ರುನ್ನಿಸಾ ಬೇಗo, ನಫೀಸ್ ಫಾತಿಮಾ, ಸಿಂಧನೂರಿನ ಖಮರ್ ಸುಲ್ತಾನ , ,ಷಮ್ಸ್ ಬೇಗಂ , ಗಂಗಾವತಿಯ ಮುನವರ್ ಹುಸೇನ್, ಕೊಪ್ಪಳದ ಸಲ್ಮಾ ಸುಲ್ತಾನ ಸಿದ್ದಿಕೀ ರವರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ ಸಹಪಾಠಿ ಹಾಗೂ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,