ಪತ್ರಿಕಾ, ಮಧ್ಯಮ ಕ್ಷೇತ್ರದ ಸೇವೆಗಾಗಿ ” ವಿಶೇಷ ಜೀವಮಾನ ಸಾಧನೆ ಪ್ರಶಸ್ತಿ ” ಪಡೆದ ರಾಯಚೂರಿನ ಭೀಮರಾಯ ಹದ್ದಿನಾಳ್
ದಾವಣಗೆರೆ : ಸರಳ ಜೀವಿಗಳು,ಯುವಕರ ಕಣ್ಮಣಿಗಳು,ಪತ್ರಿಕಾ ರಂಗದ ಧ್ರುವತಾರೆ, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ರತ್ನ ಪ್ರಶಸ್ತಿ ಪುರಸ್ಕೃತರು, ಸದಾ ಹಸನ್ಮುಖಿಗಳು, ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣನಡತೆವುಳ್ಳವರು,ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಸರಳ ಸಜ್ಜನಿಕೆಯ ಸಹಕಾರ ಮೂರ್ತಿಯಾಗಿರುವ ರಾಯಚೂರಿನ ಕಂಪಿಲವಾಣಿ ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಭೀಮರಾಯ ಹದ್ದಿನಾಳ್ ಅವರಿಗೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜುಲೈ 27 ರ ಭಾನುವಾರದಂದು ಏರ್ಪಡಿಸಿದ್ದ ” ಪತ್ರಿಕಾ ದಿನಾಚರಣೆ ” ಸಮಾರಂಭದಲ್ಲಿ ” ವಿಶೇಷ ಜೀವಮಾನ ಸಾಧನೆ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪತ್ರಿಕೆ ಮಾಧ್ಯಮ ಕ್ಷೇತ್ರದಲ್ಲಿ 33 ವರ್ಷಗಳ ಕಾಲ ಸುದೀರ್ಘವಾಗಿ ಸೇವೆಯನ್ನು ಸಲ್ಲಿಸಿರುವ ಇವರು
“ವಿಶೇಷ ಜೀವಮಾನ ಸಾಧನೆ ಪ್ರಶಸ್ತಿ” ಯನ್ನು ಸ್ವೀಕರಿಸಿದ್ದು ನಮಗೆಲ್ಲರಿಗೂ ಸಂತಸ ತಂದಿದೆ ಎಂದು ತಿಳಿಸಿರುವ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ. ತಿಪ್ಪೇಸ್ವಾಮಿ ಅವರು ಭೀಮರಾಯ ಹದ್ಧಿನಾಳ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರಾದ ಭೀಮರಾಯ ಹದ್ದಿನಾಳ್ ಅವರು ನಮ್ಮ ಸಂಘದ ರಾಜ್ಯ ಉಪಾಧ್ಯಕ್ಷರಾಗಿರುವುದು ನಮಗೆಲ್ಲ ಹೆಮ್ಮಪಡುವಂತಹದ್ದು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.