*ಇಲಕಲ್ ಅಂಜುಮನ್ ಎ ಇಸ್ಲಾಂ: ಪ್ರಜಾಪ್ರಭುತ್ವಾತ್ಮಕ ಚುನಾವಣೆಯತ್ತ ಬೃಹತ್ ಹೆಜ್ಜೆ!*
ಬಾಗಲಕೋಟೆ :
ಇಲಕಲ್ ನಗರದಲ್ಲಿ ಅಂಜುಮನ್ ಎ ಇಸ್ಲಾಂ ಆಡಳಿತ ಮಂಡಳಿಯ ಅನುಮೋದನೆಗಾಗಿ ನಡೆದ ಬೆಳವಣಿಗೆಗಳು ಇತ್ತೀಚೆಗೆ ಭಾರೀ ಚರ್ಚೆಗೆ ಕಾರಣವಾಗಿದ್ದವು. ಮಾಜಿ ಅಧ್ಯಕ್ಷ ಉಸ್ಮಾನ್ಗಣಿ ಹುಮನಾಬಾದ್ ಅವರ ಅಧಿಕಾರಾವಧಿ10/3/2025 ರಂದು ಮುಕ್ತಾಯಗೊಂಡು, ತಾತ್ಕಾಲಿಕವಾಗಿ ಮೂರು ತಿಂಗಳ ಅವಧಿಗೆ ಮುಂದುವರಿಸಲಾಗಿತ್ತು. ಆ ಅವಧಿಯೂ 30/06/2025 ರಂದು ಕೊನೆಗೊಂಡಿದೆ.
ಆದರೂ, ಕಳೆದ ವಾರ, ಬೆಂಗಳೂರಿನ ಕೆಲ ಹಿರಿಯ ನಾಯಕರ ಭೇಟಿಗೆ ತೆರಳಿದ ನಿಯೋಗವು ಇನ್ನೂ ಮೂರು ತಿಂಗಳ ವಿಸ್ತರಣೆಗಾಗಿ ಮನವಿ ಸಲ್ಲಿಸಿದ್ದು, ತಮ್ಮ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸಿ, ಸುದೀರ್ಘ ಪ್ರಚಾರ ನಡೆಸಿದೆ. ಈ ಎಲ್ಲಾ ಬೆಳವಣಿಗೆಗಳು ಸಮುದಾಯದ ಸತ್ಯ ನಿರೀಕ್ಷೆಗೆ ವಿರುದ್ಧವಾಗಿದ್ದವು.
ಈ ಹಿನ್ನೆಲೆಯಲ್ಲಿ, ಪ್ರತಿಪಕ್ಷದ ಪದಾಧಿಕಾರಿಗಳು ದರ್ಗಾ ಹಜರತ್ ಮುರ್ತುಜಾ ಶಾ ಖಾದ್ರಿ (ರ.ಅ) ಸಮಿತಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಪೂರಕ ದಾಖಲೆಗಳನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶ್ರೀ ನಸೀರ ಅಹಮ್ಮದ್ ಅವರಿಗೆ ಸಲ್ಲಿಸಿದ್ದು, ಅವರು ತಕ್ಷಣ ಸ್ಪಂದಿಸಿ ಸಂಬಂಧಿತ ಇಲಾಖೆಗೆ ಕ್ರಮಕ್ಕೆ ಸೂಚನೆ ನೀಡಿರುವುದು ಸಮುದಾಯದ ಹಿತದೃಷ್ಟಿಯಿಂದ ಮಹತ್ವಪೂರ್ಣ ಬೆಳವಣಿಗೆಯಾಗಿದೆ.
ಈ ಮೂಲಕ, ವ್ಯಕ್ತಿಗತ ನಡೆಯುತ್ತಿದ್ದ ಅಧಿಕಾರದ ದುರುಪಯೋಗಕ್ಕೆ ತಡೆ ಒಡ್ಡುತ್ತಾ, ವಕ್ಫ್ ಮಂಡಳಿಯ ನಿಯಮಾನುಸಾರವಾಗಿ 2017ರ ಮಾದರಿ ಬೈಲಾ ನ್ನು ಅನುಸರಿಸಿ, 18 ವರ್ಷ ಮೀರಿದ ಪ್ರತಿಯೊಬ್ಬ ಮುಸ್ಲಿಂ ಪುರುಷರಿಗೆ ಮತದಾನದ ಹಕ್ಕು ಒದಗಿಸಿ ಹೊಸ ಆಡಳಿತ ಮಂಡಳಿ ರಚನೆ ಮಾಡಲು ಈಗಾಗಲೇ ಕ್ರಮ ಆರಂಭವಾಗಿದೆ.
ಇದು ಕೇವಲ ಆಯ್ಕೆಯ ವಿಚಾರವಲ್ಲ. ಇದು ಸಮುದಾಯದ ಧರ್ಮಾಧಿಕಾರ, ಆಸ್ತಿ ನಿರ್ವಹಣೆ ಮತ್ತು ಜವಾಬ್ದಾರಿಯ ಪಾರದರ್ಶಕತೆಗೆ ಸಂಬಂಧಿಸಿದ ಪ್ರಮುಖ ದಿಕ್ಕು ತೋರಿಸುವ ಬೆಳಕು. ಹೀಗಾಗಿ, ಇಲಕಲ್‌ನ ಪ್ರತಿಯೊಬ್ಬ ಜಾಗೃತ ನಾಗರಿಕನು ಈ ಸಮಿತಿಯ ರಚನೆಗೆ ಸಕ್ರಿಯವಾಗಿ ಭಾಗವಹಿಸಬೇಕೆಂದು ವಿನಂತಿಸುತಿಸಲಾಗಿದೆ.
*ಭ್ರಷ್ಟಾಚಾರ ವಿರೋಧಿ, ಅನ್ಯಾಯದ ವಿರುದ್ಧ ಹೋರಾಟ — ನವಶಕ್ತಿ ಸಮುದಾಯದ ಕಡೆಗೆ ಹೆಜ್ಜೆ ಹಾಕಿ ಎಂದರು.
.