ಪತ್ರಿಕೆ ಸಂಪಾದಕರು, ಪತ್ರಕರ್ತರಿಂದ ಎ.ಸಿ.ತಿಪ್ಪೇಸ್ವಾಮಿ ಗೆ ಸ್ವಾಗತ
ಚಾಮರಾಜನಗರ : ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಅವರು ಚಾಮರಾಜನಗರದಿಂದ ಪ್ರಕಟವಾಗಿ ಪ್ರಸಾರ ಹೊಂದುತ್ತಿರುವ ” ಶಿಂಷಾ ಪ್ರಭ” ಕನ್ನಡ ದಿನಪತ್ರಿಕೆ ವತಿಯಿಂದ ಜೂನ್ 5 ರ ಶನಿವಾರ ಮುಂಜಾನೆ ನಗರದ ಶ್ರೀ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ” ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದ ಉದ್ಘಾಟಕರಾಗಿ ಶುಕ್ರವಾರ ಸಂಜೆ ಆಗಮಿಸಿದರು.
ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಎ.ಸಿ.ತಿಪ್ಪೇಸ್ವಾಮಿ ಅವರನ್ನು ಪತ್ರಿಕೆಯ ಸಂಪಾದಕರಾದ ಗುರುಬಸವಯ್ಯ, ಮನಮಿಡಿತ ಪತ್ರಿಕೆ ಸಂಪಾದಕ ಪುರುಷೋತ್ತಮ್, ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಬಂಗಾರು, ಸಾಗರದೀಪ ಕನ್ನಡ ದಿನಪತ್ರಿಕೆ ಸಂಪಾದಕ ಪುಟ್ಟಸ್ವಾಮಿನಾಯಕ ಎನ್ (ಪುಟ್ಟು), ಸುಬ್ರಮಣ್ಯ ಸಿವಿಲ್ ಕಾಂಟ್ರ್ಯಾಕ್ಟರ್, ಪತ್ರಕರ್ತ ಲಕ್ಷ್ಮಣ್, ಶಿಕ್ಷಕ ರಂಗನಾಥ್ ಸ್ವಾಗತಿಸಿದರು.