ಹೊಸಪೇಟೆ ಕೇಂದ್ರ ಬಸ್ ನಿಲ್ದಾಣ ಅಕ್ರಮಗಳ ಆಗರ.. ಡಿ.ಸಿ. ಧೀಡಿರ್ ಭೇಟಿ…

ಹೊಸಪೇಟೆ. : .ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲು ಆಗಮಿಸಿದ್ದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಬಳಿಕ ಮಾರಾಟ ಮಳಿಗೆಗಳಲ್ಲಿನ ಸಿಹಿ ತಿನಿಸುಗಳು, ಕುಡಿಯುವ ನೀರಿನ ಬಾಟಲ್, ಪ್ಯಾಕಿಂಗ್ ತಿನಿಸುಗಳ ಕವರ್ ಮೇಲಿನ ವ್ಯಾಲಿಡಿಟಿ ಪರಿಶೀಲಿಸಿ ಮಾರಾಟಗಾರರಿಗೆ ಕೆಲವು ಸಲಹೆಗಳನ್ನು ನೀಡಿದರು. ನಿಲ್ದಾಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ವೀಕ್ಷಿಸಿ ಡಿ.ಟಿ.ಓ. ರಾಜಶೇಖರ್ ಭಜಂತ್ರಿರಿಗೆ ಒಂದು ಗ್ಲಾಸ್ ನೀರು ಕುಡಿಸಿದರು. ಘಟಕದಲ್ಲಿ ಮುದ್ರಿಸಿದ್ದ 1 ಲೀಟರ್ ನೀರಿಗೆ ರೂ.2 ನಾಮಫಲಕವನ್ನು ತೆರವುಗೊಳಿಸಿ, ಉಚಿತ ಕುಡಿಯುವ ನೀರು ನೀಡುವಂತೆ ಸೂಚಿಸಿದರು.
ಬಸ್ ನಿಲ್ದಾಣದಲ್ಲಿನ ಶೌಚಾಲಯದಲ್ಲಿ ಮಹಿಳೆಯರಿಂದ ರೂ.10 ಸಂಗ್ರಹಿಸುತ್ತಿದ್ದಾರೆ ಎಂದು ಸ್ಥಳೀಯ ಆಟೋ ಚಾಲಕರು ಡಿ.ಸಿ.ಯವರಿಗೆ ದೂರಿದರು. ಸ್ವತಃ ಜಿಲ್ಲಾಧಿಕಾರಿಗಳು ಶೌಚಾಲಯ ಸ್ವಚ್ಛತೆಯನ್ನು ಪರಿಶೀಲಿಸಿ ಹೊರ ಬರುತ್ತಿದ್ದ ಮಹಿಳೆಯರಿಗೆ ಹಣ ಎಷ್ಟು ಕೊಟ್ಟಿರಿ ಎಂದು ಕೇಳಿದರು. ಮಹಿಳೆರು ತಲಾ 10 ರೂ ಕೊಟ್ಟಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಕ್ಕೆ ಗರಂ ಆದ ಜಿಲ್ಲಾಧಿಕಾರಿಗಳು ಕೂಡಲೇ ಡಿಟಿಓರಿಗೆ ಶಿಸ್ತು ಕ್ರಮ ವಹಿಸುವಂತೆ ಸೂಚಿಸಿದರು. ಬಸ್ ನಿಲ್ದಾಣದಲ್ಲಿನ ಮೂರು ಶೌಚಾಲಯಗಳನ್ನು ಹಾಗೂ ನಿಲ್ದಾಣದ ಆವರಣ ಸೇರಿದಂತೆ ಕ್ಯಾಂಟಿನ್ ಒಳಗಡೆ ಅಡುಗೆ ಮನೆ, ವಿತರಣೆ ಹಾಗೂ ಅಡುಗೆಗೆ ಬಳಸುವ ಎಣ್ಣೆಯ ಗುಣಮಟ್ಟ, ಸ್ವಚ್ಛತೆಯನ್ನು ಪರಿಶೀಲಿಸಿದರು.
ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಪಿಐ ಲಖನ್ ಮಸಗುಪ್ಪಿ ಅವರು ಬಸ್ ನಿಲ್ದಾಣದಲ್ಲಿ ಕಳ್ಳತನ ಜಾಗೃತಿ ನಡೆಸುವ ಕುರಿತು ಮೈಕ್ ವ್ಯವಸ್ಥೆ ಮಾಡಿಸುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಈ ಸಮಸ್ಯೆಗೆ ಪ್ರಥಮ ಆದ್ಯತೆ ನೀಡಿ ಕೂಡಲೇ ಅವರಿಗೆ ಮೈಕ್ ವ್ಯವಸ್ಥೆ ಕಲ್ಪಿಸುವಂತೆ ಡಿಟಿಓ ರಾಜಶೇಖರ್ ವಾಜಂತ್ರಿರಿಗೆ ಸೂಚನೆ ನೀಡಿದರು. ಬಸ್ ನಿಲ್ದಾಣದ ದ್ವಿಚಕ್ರ ವಾಹನ ನಿಲ್ದಾಣದ ಮೇಲ್ಗಡೆ ಇರುವ ವ್ಯಾಪಾರಿ ಮಳಿಗೆಗಳ ಅಕ್ರಮ ವಿಷಯಗಳ ಪರವಾಗಿ ಮಾನ್ಯ ಧಾರವಾಡದ ಹೈಕೋರ್ಟ್ ಆದೇಶಕ್ಕೆ ಬೆಲೆಯನ್ನು ಕೊಡದೆ ವ್ಯಾಪಾರಿ ಮಳಿಗೆಗಳನ್ನು ಭೂತ ಬಂಗಲೆಯಾನ್ನಗಿಸಿರುವ ಅಧಿಕಾರಿಗಳನ್ನು ನೋಡಿದರೂ.. ಅವರ ಮೇಲೆ ಇವತ್ತಿನವರೆಗೂ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳದೆ ಜಾಣ ಕುರುಡರಂತೆ, ಗೊತ್ತಿದ್ದರೂ ಸಹ ,ಅವರೂಗಳ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದೆ, ಆ ಮಳಿಗೆಗಳ ಬಗ್ಗೆ ಅವಲೋಕನನ್ನು ಮಾಡಲಿಲ್ಲ.. ಕೇಳಲು ಇಲ್ಲ.. ಹೈಕೋರ್ಟ್ ಆದೇಶಕ್ಕೆ ಬೆಲೆಯನ್ನು ಕೊಡದ ಈ ಅಧಿಕಾರಿಗಳ ಮೇಲೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.. ಸಾರ್ವಜನಿಕರ ಕೋಟಿಗಟ್ಟಲೆ ದುಡ್ಡು ಹಾಗೂ ಸರ್ಕಾರದ ಅನುದಾನ ಹಾಳಾಗಿ, ಲೋಪದೋಷ ಕಂಡುಬಂದಿದ್ದರು,, ಅವರನ್ನು ಏನನ್ನು ಕೇಳದೆ.. ಅವರ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದೆ ಇರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.. ಧಾರವಾಡದ ಹೈಕೋರ್ಟ್ ಆದೇಶಕ್ಕೂ ಬೆಲೆ ಕೊಡದ ಇವರ ಮೇಲೆ ..ಒಂದು ವರ್ಷವಾದರೂ ಯಾವುದು ಶಿಸ್ತು ಕ್ರಮ ತೆಗೆದುಕೊಂಡಿಲ್ಲ.. ಹಾಗಾಗಿ ಅಧಿಕಾರಿಗಳು ತಮಗೆ ಇಷ್ಟ ಬಂದ ಹಾಗೆ ವರ್ತನೆ ಮಾಡುತ್ತಾ, ನಾಲ್ಕು ಲಾರಿ ಲೋಡ್ಗ ಬಸ್ಗಳ ಗುಜುರಿ ಸಾಮಾನುಗಳನ್ನೆಲ್ಲ ಮಾರಿ.. ಲಕ್ಷಗಟ್ಟಲೆ ದುಡ್ಡನ್ನು ತಿಂದು.. ತೇಗಿದ್ದಾರೆ.. ಈ ವಿಷಯವಾಗಿ ಸಾರ್ವಜನಿಕರ ದೂರು ಬಂದ ಮೇಲೆ.. ತನಿಖೆ ಮಾಡಿ. ನಾಲ್ಕು ಅಧಿಕಾರಿಗಳನ್ನು ಬಸ್ಸು ಡಿಪೋದಲ್ಲಿ ಅಮಾನತು ಮಾಡಿದ್ದಾರೆ.. ಆದರೆ ತಮ್ಮ ಪಕ್ಕದಲ್ಲಿಯೇ ಈ ವ್ಯಾಪಾರಿ ಮಳಿಗೆಗಳ ಹಗರಣವು ಒಂದು ವರ್ಷದಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಗೊತ್ತಿದ್ದರೂ.. ಹೈಕೋರ್ಟ್ ಆದೇಶಕ್ಕೆ ಯಾವುದೇ ಬೆಲೆ ಕೊಡದಿದ್ದರೂ
. ಜಿಲ್ಲಾಧಿಕಾರಿಗಳು ಏಕೆ ಸುಮ್ಮನಿದ್ದಾರೆ???? ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ .. ಸಾರ್ವಜನಿಕರ ಅನೇಕ ಅನುಮಾನಗಳಿಗೆ ಆಸ್ಪದ ನೀಡುತ್ತಿದೆ.. ಈಗಲಾದರೂ ತಕ್ಷಣವೇ ಎಚ್ಚೆತ್ತುಕೊಂಡು ಕಾನೂನು ಕ್ರಮ ಜರುಗಿಸಿ ಸಾರ್ವಜನಿಕ ವ್ಯಾಪಾರಿ ಮಳಿಗೆಗಳ ಮಾಲೀಕರ ಹಣವನ್ನು ವಾಪಾಸ್ ಕೊಡಬೇಕಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಈ ಮಳಿಗೆಗಳ 26 ಪರ್ವಾನಿಗೆದಾರಾದ ಮಂಜುನಾಥ್ ಬಸವರಾಜ್ ರಾಜೇಶ್ ಶ್ರೀಧರ್ ಶಿವಕುಮಾರ್ ನಾರಾಯಣಿ ಭಾಷ ರೆಡ್ಡಿ ಅಸ್ಲಾಂ ನಾಗರಾಜ್ ಎಂ ನಾಗರಾಜ್ ಮಂಜುಳಾ ರೇಖಾ ನಾಗಮ್ಮ ಮಲ್ಲಪ್ಪ ಹಾಗೂ ಇತರರು ಎಚ್ಚರಿಕೆ ನೀಡಿದ್ದಾರೆ..
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ವಾರ್ತಾಧಿಕಾರಿ ಧನಂಜಯಪ್ಪ.ಬಿ ಸೇರಿ ಕೆಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!