ನಮಗೆ ವರ್ಷಪೂರ್ತಿ ಕೆಲಸ ನೀಡಿ, ಯಾರೂ ಹೆಣ್ಣು ಕೊಡ್ತಿಲ್ಲ: ಗೃಹ ರಕ್ಷಕರ ಅಳಲು

ಬೆಳಗಾವಿ: ತೆಲಂಗಾಣ ಮಾದರಿಯಲ್ಲಿ ರಾಜ್ಯದಲ್ಲಿಯೂ ಗೃಹ ರಕ್ಷಕರಿಗೆ ವರ್ಷಪೂರ್ತಿ 365 ದಿನಗಳ ಕಾಲ ಕೆಲಸ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಲೇಬರ್ ರೈಟ್ಸ್ ಫೋರಂ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ನೇತೃತ್ವದಲ್ಲಿ ನಗರದ ಸುವರ್ಣ ಗಾರ್ಡನ್ ನಲ್ಲಿ ಸಾವಿರಾರು ಸಿಬ್ಬಂದಿಗಳು ಹೋರಾಟ ನಡೆಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಶ್ರೀರಾಮ್

ನಮ್ಮ ಕರ್ನಾಟಕ ರಾಜ್ಯದಲ್ಲಿ 25,882 ಗೃಹ ರಕ್ಷಕರಿದ್ದು, ಅವರಲ್ಲಿ 21,327 ಪುರುಷರು ಮತ್ತು 4555 ಮಹಿಳಾ ಗ್ರಹ ರಕ್ಷಕರು, 426 ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಮತ್ತು ಹೊರರಾಜ್ಯ ಚುನಾವಣೆ ಕರ್ತವ್ಯ, ಕಾರ್ಯಕ್ರಮಗಳು, ರಾಷ್ಟ್ರೀಯ ಮತ್ತು ನಾಡ ಹಬ್ಬ, ಗಣಪತಿ ಹಬ್ಬ, ದಸರಾ ಮತ್ತು ಜಾತ್ರೆಗಳ ಬಂದೋಬಸ್ತ್ ಒಟ್ಟು ಸೇರಿ ವರ್ಷದಲ್ಲಿ ಮೂರು ತಿಂಗಳು ಮಾತ್ರ ಕರ್ತವ್ಯ ಸಿಗುತ್ತದೆ.

ಉಳಿದ ಒಂಬತ್ತು ತಿಂಗಳು ಗ್ರಹ ರಕ್ಷಕರ ಜೀವನ ಚಿಂತಾಜನಕವಾಗಿರುತ್ತದೆ ತಮ್ಮ ಅಳಲು ತೋಡಿಕೊಂಡರು.

ಹೀಗೆ ಅತಂತ್ರ ಪರಿಸ್ಥಿತಿ ನಮ್ಮದಾಗಿದೆ. ಅಪೂರ್ಣ ಕೆಲಸದಿಂದ ಗೃಹ ರಕ್ಷಕರಿಗೆ ಮದುವೆಯಾಗಲು ಯಾರು ಹೆಣ್ಣುಕೊಡಲು ಮುಂದೆ ಬರುತ್ತಿಲ್ಲ ಸಾವಿರಾರು ಗೃಹರಕ್ಷಕ ಮದುವೆಯಾಗದೆ ಉಳಿದಿದ್ದಾರೆ ಎಂದು ಗೋಳು ಹೊರಹಾಕಿದರು.ಎಂ.ಎ, ಎಲ್.ಎಲ್.ಬಿ, ಬಿ.ಎ, ಬಿ.ಎಡ್ ಹೀಗೆ ಆನೇಕ ಪದವಿಗಳನ್ನು ಪಡೆದವರು ಒಟ್ಟು ಐದು ಸಾವಿರಕ್ಕೂ ಹೆಚ್ಚು ಪದವೀಧರರು ಗೃಹರಕ್ಷಕ ಕರ್ತವ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ ಸರ್ಕಾರ ನಮ್ಮ ನೋವು ನಲಿವುಗಳನ್ನು ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುಬಾರಿ ದುನಿಯಾದಲ್ಲಿ ನಮ್ಮ ಬದುಕು ನಡೆಸುವುದು ಕಷ್ಟಕರವಾಗಿದೆ. ಇದರಿಂದ ಗ್ರಹರಕ್ಷಕರ ಪೊಷಕರಿಗೆ ತುಂಬಾ ತೊಂದರೆಯಾಗಿದ್ದು, ನಮ್ಮ ಮಕ್ಕಳಿಗೆ ಕೆಲಸ ಇದೆ ತಂದೆ ತಾಯಿಯನ್ನು ಪೊಷಣೆ ಮಾಡುವುದಿರಲಿ, ನಮಗೆ ಔಷಧಿ ಕೊಡಿಸಲು ಹಣವಿಲ್ಲದೆ. ಮಕ್ಕಳ ವಿದ್ಯಾಭಾಸ, ಮನೆ ಬಾಡಿಗೆ ಹೀಗೆ ಕುಟುಂಬ ನಿರ್ವಹಣೆ ನಡೆಸುವುದು ತುಂಬಾ ದುಸ್ತರವಾಗಿದೆ ಎಂದರು.

ಬೇರೆ ಕೆಲಸ ಮಾಡಲು ಸಾಧ್ಯವಾಗದೆ ಈ ಕೆಲಸ ಬಿಡಲು ಮನಸ್ಸು, ಒಪ್ಪದೆ ಅವರ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ಇದೆ. ಆದ್ದರಿಂದ ನಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರ ಹಾಗೂ ಗೃಹ ಇಲಾಖೆಯ ಸಚಿವರು ಮುಂದಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ವರದಿ …ನಬಿರಸೂಲ ಎಮ್ ನದಾಫ್ ಯಾದಗಿರಿ

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!