*ಬಸ್ ಪಲ್ಟಿ ಅಪಘಾತ ದುರಂತ – ಮಾನವೀಯತೆ ಮೆರೆದ ಶಾಸಕ ಗೋಪಾಲ ಕೃಷ್ಣ ಬೇಳೂರು – ಸಹಬಾಳ್ವೆ ಸೌಹಾರ್ದ ಸಾಮರಸ್ಯದತ್ತ ಸಾಗರೀಕರು – ಅಪಘಾತ ನೆಡೆದ ಸುತ್ತಮುತ್ತಲಿನ ಸ್ಥಳೀಯರು, 108, ಖಾಸಗಿ ಆಂಬುಲೆನ್ಸ್ ಸಹಾಯಹಸ್ತಕ್ಕೆ ಅಭಾರಿಯಾದ ಅಪಘಾತದಲ್ಲಿ ನೊಂದ ಗಾಯಾಳುಗಳು*
*ಸಾಗರ :-* ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಕಾರ್ಗಲ್ ಪೊಲೀಸ್ ಸರಹದ್ದು ಮುಪ್ಪಾನೆ ಬಳಿ ನೆಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಪ್ರವಾಸಿಗರು ಜೋಗ ಜಲಪಾತ ವಡನ್ ಬೈಲ್ ಪದ್ಮಾವತಿ ದೇವಸ್ಥಾನ ಇನ್ನಿತರ ಪ್ರವಾಸಿ ತಾಣ ನೋಡಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಸುಮಾರು 27 ಕ್ಕೂ ಹೆಚ್ಚಿನ ಪ್ರವಾಸಿಗರು ಸಾಗರ ಉಪ ವಿಭಾಗೀಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಮಂಗಳೂರು ಆಸ್ಪತ್ರೆಗೆ ಆಂಬುಲೆನ್ಸ್ ಮುಖಾಂತರ ರವಾನಿಸಿರುವ ಮಾಹಿತಿ ಲಭ್ಯವಾಗಿದೆ.
*ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಜನಸ್ನೇಹಿ ಆಪತ್ಬಾಂದವ ಎಂದೇ ಖ್ಯಾತರಾದ ಗೋಪಾಲ ಕೃಷ್ಣ ಬೇಳೂರು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ ಗಾಯಾಳುಗಳ ಬಗ್ಗೆ ವೈದ್ಯರೊಂದಿಗೆ ವಿಚಾರಿಸಿ, ಸ್ವಂತ ಖರ್ಚಿನಲ್ಲಿ 20 ಕ್ಕೂ ಹೆಚ್ಚು ಖಾಸಗಿ ಆಂಬುಲೆನ್ಸ್ ಗಳಲ್ಲಿ ಮಣಿಪಾಲ ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಗಾಗಿ ವ್ಯವಸ್ಥೆ ಮಾಡಿದ್ದೂ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಹೃದಯ ವೈಶಾಲತೆಗೆ ಗಾಯಾಳುಗಳು ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡು ಬಂದಿತು*