ವೈವಿದ್ಯಮಯ ವಿಷಯಗಳ ಸಂಪನ್ಮೂಲ ವ್ಯಕ್ತಿಯಾಗಿ ರೂಪುಗೊಂಡ ಅದ್ಭುತ ಪ್ರತಿಭೆ ಸಾಗರ್ ಎ.ಎಚ್.

ಬೆಂಗಳೂರು : ಸಾಗರ್ ಸರ್ ರವರು ಕೇವಲ ಕರ್ನಾಟಕ ಅಲ್ಲದೇ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ವೈವಿದ್ಯಮಯ ವಿಷಯಗಳ ಸಂಪನ್ಮೂಲ ವ್ಯಕ್ತಿಯಾಗಿ ರೂಪುಗೊಂಡ ಅದ್ಭುತ ಪ್ರತಿಭೆ ಎಂದರೆ ಅತಿಶಯೋಕ್ತಿಯಲ್ಲ. ಅವರು ಪಡೆದ ಪದವಿಗಳೂ ಹಲವು. ಅವರಲ್ಲಿರುವ ಜ್ಞಾನದ ಭಂಡಾರ ಅಮೋಘ. ಮಾತನಾಡಲು ನಿಂತರೆ ನಿಜಕ್ಕೂ ತಮ್ಮದೇ ಲೋಕದಲ್ಲಿ ಎಲ್ಲರನ್ನೂ ಸೆಳೆದುಕೊಳ್ಳುವಂಥ ಆಕರ್ಷಕ ವ್ಯಕ್ತಿತ್ವ ಅವರದ್ದಾಗಿದೆ. ಅತ್ಯುತ್ತಮ ವಾಗ್ಮಿ ವರ್ಬಲ್ ನಾನ್ ವರ್ಬಲ್ ಕಮ್ಯುನಿಕೇಶನ್ ನಲ್ಲೂ ಇವರ ನೈಪುಣ್ಯತೆ ಎಂಥಾ ವ್ಯಕ್ತಿಯನ್ನಾದರೂ ಬೆರಗುಗೊಳಿಸುತ್ತದೆ. ಇಂಥ ಅದ್ಭುತ ವ್ಯಕ್ತಿತ್ವ ಇಂದು ನಮ್ಮ ಕಾಲೇಜಿಗೆ ಭೇಟಿ ನೀಡಿದ್ದು ನಮಗೆ ತುಂಬಾ ಸಂತಸದ ವಿಷಯ….

ಸರಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲದಲ್ಲಿ ಉದ್ಯೋಗ ಭರವಸೆ ಕೋಶ ಹಾಗೂ ಐಕ್ಯೂಎಸಿ ವತಿ ಯಿಂದ ವಿದ್ಯಾರ್ಥಿಗಳಿಗಾಗಿ ಒಂದು ದಿನ ಮಟ್ಟಿಗೆ “ ಪ್ರಾಕ್ಟಿಕಲ್ ವಿಸ್ಡಮ್ ಡೆಲಿಗೆನ್ಸ್ ಆ್ಯಂಡ್ ಕಮ್ಯುನಿಕೇಷನ್ ಸ್ಕಿಲ್ಸ್ ಫಾರ್ ದ ಸ್ಟುಡೆಂಡ್ಸ್ ಇನ್ ಆಸ್ಟೇರಿಟಿ” ವಿಷಯದ ಮೇಲೆ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಗಾರಕ್ಕೆ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಸಾಗರ್ ಎ.ಎಚ್ ರವರು ಆಗಮಿಸಿದ್ದರು. ಡಾ.ಸಾಗರ್ ಸರ್‌ರವರು ವಿದ್ಯಾರ್ಥಿಗಳನ್ನು ಕುರಿತು- ಈ ಆಧುನಿಕ ಸ್ಪರ್ಧಾತ್ಮಕ ಹಾಗೂ ಸಂಶೋಧನಾತ್ಮಕ ಯುಗದಲ್ಲಿ ಯಾವುದು ಸತ್ಯ ಯಾವುದು ಅಸತ್ಯ ಎಂದು ಅರಿತು ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯ‌ವನ್ನು ರೂಪಿಸಿಕೊಳ್ಳಬೇಕೆಂಬುದು ತುಂಬಾ ಅಗತ್ಯತೆಯಾಗಿದೆ. ಯೌವ್ವನದ ವಯಸ್ಸಿನಲ್ಲಿ ಹೊರ ಆಕರ್ಷಣೆಗಳ ಸೆಳೆತಕ್ಕೊಳಗಾಗದೇ ತಮ್ಮ ವಿದ್ಯಾಭ್ಯಾಸಕ್ಕೆ ಸಹಕರಿಸುವ ವಿಷಯಗಳನ್ನು ಪ್ರೀತಿಸಿ ಆಯಾ ವಿಷಯಗಳಲ್ಲಿ ಪ್ರೌಢಿಮೆ ಸಾಧಿಸುವ ಅನಿವಾರ್ಯತೆ ಇದೆ. ಯುಜನತೆ ಅನಗತ್ಯ ಆದರ್ಶಗಳ ಬೆನ್ನ ಹತ್ತಿ ಸರಿಯಲ್ಲದ ವ್ಯಕ್ತಿತ್ವಗಳಿಂದ ಆಕರ್ಷಕರಾಗಿ ದೀರ್ಘಾವಧಿಯಲ್ಲಿ ದಾರಿ ತಪ್ಪುತ್ತಾರೆ ಇದರಿಂದ ಅವರ ಇಡೀ ಬದುಕು ನಶ್ವರವಾಗಿ ಬಿಡುತ್ತದೆ. ಮಾಡಲು ಪ್ರಪಂಚದಲ್ಲಿ ತುಂಬಾನೇ ಇದೆ. ಇತ್ತೀಚೆಗೆ ಇಂಟರ್ ಡಿಸಿಪ್ಲೇನರಿ ಮಾತ್ರವಲ್ಲದೇ ಮಲ್ಟಿ ಡಿಸಿಪ್ಲೇನರಿ ಯುಗ ರೂಪುಗೊಂಡಿದೆ ನಾವು ಗಳಿಸಿದ ಪದವಿವೊಂದೇ ಅಲ್ಲದೇ ಇತರ ವಿಷಯ ವಸ್ತುಗಳನ್ನು ಸಹ ಕಲಿತು ಅದರಲ್ಲೇ ಎಕ್ಸ್ಪರ್ಟೈಜ಼್ ಆಗಿಯೂ ಬದುಕು ಕಟ್ಟಿಕೊಳ್ಳಬಹುದು. ನಾವು ಪ್ರಸ್ತುತ ಚೀನಾವನ್ನೂ ಸಹ ಹತ್ತಿಕ್ಕಿ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರುತ್ತಿದ್ದೇವೆ ಆದರೆ ನಮ್ಮ ಈ ಕೋಟ್ಯಾಂತರ ಜನರಲ್ಲಿ ನೋಬೆಲ್ ಪಡೆದವರು ತೀರ ಕಡಿಮೆ. ಅದೇ ಬೇರೆ ದೇಶಗಳಲ್ಲಿ ನಮ್ಮ ಕರ್ನಾಟಕಕ್ಕಿಂತ ಕಡಿಮೆ ಜನಸಂಖ್ಯೆ ಇದ್ದರೂ ಅವರು ಪಡೆದ ನೋಬೆಲ್ ಪ್ರಶಸ್ತಿಗಳು ಹಲವು ಇದ್ದಾವೆ. ಆದ್ದರಿಂದ ವಿದ್ಯಾರ್ಥಿಗಳು ಸಾಧಾರಣವಾಗಿ ಅಲ್ಲ, ಅವರ ಯೋಚನೆ ಅಸಾಧಾರಣವಾಗಿದ್ದರೇನೆ ಏನಾದರೊಂದು ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು. ಅದರ ಜೊತೆಗೆ ಮನುಷ್ಯನ ಆಲೋಚನೆ ಯಿಂದ ಹಿಡಿದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌, ವಿಜ್ಞಾನ ತಂತ್ರಜ್ಞಾನ, ಸಮಾಜ, ಅರ್ಥಶಾಸ್ತ್ರ ಎಲ್ಲಾ ವಿಷಯಗಳ ಮೇಲೆ ಒಂದಲ್ಲಾ ವೊಂದು ರೀತಿಯಲ್ಲಿ ಬೆಳಕು ಚೆಲ್ಲಿ ವೈವಿದ್ಯಮಯ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಎಲ್ಲರ ಗಮನ ಸೆಳೆದು. ಕಾರ್ಯಗಾರದಲ್ಲಿ ನಿರಂತರ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡಿ ಮೊದ ಮೊದಲು ಎದ್ದು ನಿಲ್ಲಲೂ ಇಷ್ಟ ಪಡದೇ ಕೂತಿದ್ದ ವಿದ್ಯಾರ್ಥಿಗಳು ಕೊನೆಯಲ್ಲಿ ವೇದಿಕೆ ಹತ್ತಿ ಚಟುವಟಿಕೆಗಳಲ್ಲಿ ಕುತೂಹಲದಿಂದ ಭಾಗವಹಿಸುವಂತೆ ಮಾಡಿದ ಡಾ. ಸಾಗರ್ ರವರ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯವಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಇಂಥ ಕಾರ್ಯಗಳನ್ನು ಇನ್ನಷ್ಟು ಏರ್ಪಡಿಸಬೇಕೆಂದು ಕೇಳಿಕೊಂಡಿದ್ದೂ ವಿಶೇಷವೇ ಸರಿ…
: ಫರನಾಜ್ ಮಸ್ಕಿ

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!