*ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ-2024*
*ಮಕ್ಕಳ ಪ್ರತಿಭೆಗೆ ಪೆÇ್ರತ್ಸಾಹ ನೀಡಿದ ಪ್ರತಿಭಾ ಕಾರಂಜಿ*
*ಧಾರವಾಡ (ಕರ್ನಾಟಕ ವಾರ್ತೆ)ಫೆ.8:* ಮಕ್ಕಳ ಪ್ರತಿಭೆಗೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಹೆಸರಿನಲ್ಲಿ ಸಾಂಸ್ಕøತಿಕ ಸ್ಪರ್ಧೆಗಳನ್ನು ಸಂಘಟಿಸಲಾಗುತ್ತದೆ. ಮಕ್ಕಳಲ್ಲಿನ ಪ್ರತಿಭೆಗಳಿಗೆ ಪೆÇ್ರೀತ್ಸಾಹ ನೀಡುವುದು ಇದರ ಉದ್ದೇಶವಾಗಿದೆ. ಇದರಲ್ಲಿ ಹಲವಾರು ವಿದದ ಸ್ಪರ್ಧೆಗಳಿರುತ್ತವೆ. ಮಕ್ಕಳು ತಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಭಾಗವಹಿಸುವ ಅವಕಾಶವಿರುತ್ತದೆ.
ಮಕ್ಕಳು ಕಾರ್ಯಕ್ರಮದಲ್ಲಿ ನೀಡಿದಂತಹ ಪ್ರತಿಭೆಯನ್ನು ನೋಡಿ ಪಾಲಕರು ಹಾಗೂ ಶಿಕ್ಷಕರಿಗೆ ಸಂತಸವಾಗುತ್ತದೆ. ಶಿಕ್ಷಕರು ಎರಡ ರಿಂದ ಮೂರು ತಿಂಗಳ ಸಂಪೂರ್ಣ ತಯಾರಿ ನಡೆಸುತ್ತಾ ಮಕ್ಕಳನ್ನು ಸ್ಪರ್ಧೆಗೆ ಸಿದ್ಧಗೊಳಿಸಿರುತ್ತಾರೆ. ಅμÉ್ಟೀ ಅಲ್ಲದೆ ಕಾರ್ಯಕ್ರಮದ ಸಂಪೂರ್ಣ ತಯಾರಿಗಳನ್ನೂ ಸಹ ಶಿಕ್ಷಕರು ನಿರ್ವಹಿಸಬೇಕಾಗುತ್ತದೆ.
ಕ್ಲಸ್ಟರ್ ಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳು ಮುಂದಿನ ಹಂತವಾಗಿ ತಾಲೂಕಾ ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟದ ಹಂತದ ವರೆಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳುತ್ತಾರೆ. ಇದರಲ್ಲಿ ಗುಂಪು ಮತ್ತು ವೈಯಕ್ತಿಕ ಎಂದು ಎರಡು ರೀತಿಯ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಮಕ್ಕಳು ತಮ್ಮ ಅದ್ಭುತವಾದ ಕೌಶಲ್ಯಗಳನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ.
ಇಂದು ಧಾರವಾಡದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ರೀತಿಯಾದಂತಹ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. 8ನೇ ತರಗತಿಯಿಂದ 12 ನೇ ತರಗತಿಯವರೆಗಿನ ವಿಧ್ಯಾರ್ಥಿಗಳಿಗೆ ವೈಯಕ್ತಿಕ ಸ್ಪರ್ಧೆಗಳಾದ ಕಂಠಪಾಠ ಸ್ಪರ್ಧೆ, ಧಾರ್ಮಿಕ ಶ್ಲೋಕ, ಸುಗಮ ಸಂಗೀತ, ಚಿತ್ರಕಲೆ, ಛದ್ಮ ವೇಷ, ಜಾನಪದ ಸ್ಪರ್ಧೆ, ಕವಾಲಿ ಸ್ಪರ್ಧೆ, ಕ್ವಿಜ್ ಸ್ಪರ್ಧೆ, ಮಣ್ಣಿನ ಆಕೃತಿ, ಕ್ಲೆ ಮೊಡ್ಲಿಂಗ್, ರಂಗೋಲಿ ಸ್ಪರ್ಧೆ, ವೀರಗಾಸೆ, ಡೊಳ್ಳು ಕುಣಿತ, ಮಿಮಿಕ್ರಿ ಸ್ಪರ್ಧೆ, ಭಾಷಣ ಸ್ಪರ್ಧೆ ಯೋಗಾಸನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಬೆಳಗಿನ ಉಪಹಾರ ವ್ಯವಸ್ಥೆ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಕಲ್ಪಿಸಲಾಗಿತ್ತು, ಬೇರೆ ಬೇರೆ ಜಿಲ್ಲೆಗಳಿಂದ ಬಂದಂತಹ ಸ್ಪರ್ಧಾಳುಗಳಿಗೆ ತಮ್ಮ ಹೆಸರನ್ನು ನೋಂದಣಿ ಮಾಡಿಸಲು ಸುಮಾರು 12 ನೋಂದಣಿ ಕೇಂದ್ರಗಳನ್ನು ತೆರೆಯಲಾಗಿತ್ತು. ಮಕ್ಕಳ ಸುರಕ್ಷತೆ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಪೆÇಲೀಸ್ ಇಲಾಖೆ, ಮಹಾವಿದ್ಯಾಲಯದ ಸೇವಾದಳದ ತಂಡ ನಿರ್ವಹಿಸಿತು, ಕಾರ್ಯಕ್ರಮಕ್ಕೆ ಬಂದಂತಹ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
*ಸೆಲ್ಪಿ ಪಾಯಿಂಟ್:* ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾಕಾಶಿ, ಸಾಂಸ್ಕøತಿಕ ನಗರಿ ಧಾರವಾಡಕ್ಕೆ ಆಗಮಿಸಿರುವ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಮತ್ತು ಶಿಕ್ಷಕರಿಗೆ ಸೆಲ್ಫಿ ತೆಗೆದುಕೊಳ್ಳಲು ಅನುವಾಗುವಂತೆ ಸೆಲ್ಫಿ ಸ್ಟ್ಯಾಂಡ್ ಇರುವ ಎರಡು ಸೆಲ್ಫಿ ಪಾಯಿಂಟ್ ಮಾಡಲಾಗಿತ್ತು.
*ವಿದ್ಯಾರ್ಥಿಗಳ ಅಭಿಪ್ರಾಯ:*
1) ಈ ಪ್ರತಿಭಾ ಕಾರಂಜಿ ನಮಗೆ ಸಂತಸ ತಂದಿದೆ, ಊಟ, ವಸತಿ ತುಂಬಾ ಚೆನ್ನಾಗಿದೆ, ಕವಾಲಿಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕೂಡಾ ಪ್ರಥಮ ಸ್ಥಾನ ಪಡೆದುಕ್ಕೊಳ್ಳುವ ಇಚ್ಛೆ ಇದೆ. ಮಿಮಿಕ್ರಿಯಲ್ಲಿ 3 ಬಾರಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ ಮತ್ತು ಕವಾಲಿ ಸ್ಪರ್ಧೆಯಲ್ಲಿ ಇದು 2 ನೇ ಬಾರಿ ಭಾಗವಹಿಸುತ್ತಿರುವುದು.
-ಮಂಜುನಾಥ ಕುಲಾವಿ,
10ನೇ ತರಗತಿ ಹೆಬ್ಬಳ್ಳಿ, ಧಾರವಾಡ,
2) ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಧಾರವಾಡ ಜೆಎಸ್‍ಎಸ್ ಕ್ಯಾಪಂಸ್ ತುಂಬಾ ಚನ್ನಾಗಿದೆ, ಈ ಪ್ರತಿಭಾ ಕಾರಂಜಿ ನಮಗೆ ಸಂತಸ ತಂದಿದೆ. ಉಪಹಾರದ ಬಗ್ಗೆ ಸ್ವಲ್ಪ ತೊಂದರೆ ಅನಿಸಿದರೂ ಸಹ ಅಚ್ಚುಕಟ್ಟಾಗಿ ಮಾಡಿದ್ದಾರೆ.
-ಧೀಕ್ಷಿತಾ,
10ನೇ ತರಗತಿ
ಜಿ.ಎಚ್.ಎಸ್.ಮೊರಗಡನಹಳ್ಳಿ, ಮಂಡ್ಯ
3) ವೀರಗಾಸೆ ನೃತ್ಯದಲ್ಲಿ ಭಾಗವಹಿಸಿದ ಕುಶಿ ಇದೆ. ಪ್ರತಿಭಾ ಕಾರಂಜಿ ನಮಗೆ ಸಂತಸ
ತಂದಿದೆ,ಊಟ,ವಸತಿ ತುಂಬಾ ಚೆನ್ನಾಗಿದೆ,ಕಾವಲಿಯಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕೂಡಾ
ಪ್ರಥಮ ಸ್ಥಾನ ಪಡೆದುಕ್ಕೊಳ್ಳುವ ಇಚ್ಛೆ ಇದೆ.
-ಧೀಮಹಿ
ವಿದ್ಯಾರ್ಥಿ
ಅನ್ನಫೂರ್ಣ ವಿಧ್ಯಾಮಂದಿರ ಆಗುಂಬೆ
4) ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ ಧಾರವಾಡ ಕ್ಯಾಪಂಸ್ ತುಂಬಾ ಚನ್ನಾಗಿದೆ, ಈ ಪ್ರತಿಭಾ ಕಾರಂಜಿ ನಮಗೆ ಸಂತಸ ತಂದಿದೆ ಎಂದು ವ್ಯಕ್ತಪಡಿಸಿದರು. ಉಪಹಾರದ ಬಗ್ಗೆ ಸ್ವಲ್ಪ ತೊಂದರೆ ಅನಿಸಿದರೂ ಸಹ ಅಚ್ಚುಕಟ್ಟಾಗಿ ಮಾಡಿದ್ದಾರೆ.
-ದೃತಿ
ವಿದ್ಯಾರ್ಥಿ
ಶ್ರೀ ವಿದ್ಯಾಸಾಗರ ಬೋರ್ಡ್ ಸ್ಕೂಲ್ ಕಂಪ್ಲಿ
*ಶಿಕ್ಷಕರ ಅಭಿಪ್ರಾಯ:*
1) ಪ್ರತಿವರ್ಷವೂ ಪ್ರತಿಭಾ ಕಾರಂಜಿಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟಕ್ಕೇ ಆಯ್ಕೆಯಾಗಿ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ತುಂಬಾ ಚೆನ್ನಾಗಿ ಇತ್ತು.
-ವಾಣಿಶ್ರೀ ಅಂಗಡಿ
ಶಿಕ್ಷಕರು,
ಮುರಾರ್ಜಿ ಎಂ. ಡಿ .ಎಂ.ಆರ್.ಸಿ.ಕಲ್ಲೇಶ್ವರ ಶಾಲೆ, ಗದಗ.
2) ಸುಮಾರು 12 ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಇಲ್ಲಿನ ಸಾರಿಗೆ ವ್ಯವಸ್ಥೆ, ವಸತಿ, ಊಟದ ವ್ಯವಸ್ಥೆಯಲ್ಲಿ ಯಾವುದೇ ಕೊರತೆ ಇಲ್ಲ, ದೂರದ ಜಿಲ್ಲೆಗಳಿಂದ ಬಂದಂತಹ ವಿದ್ಯಾರ್ಥಿಗಳ ಪೆÇೀಷಕರಿಗೆ ನೀರಿನ ಮತ್ತು ಶೌಚಾಲಯದ ವ್ಯವಸ್ಥೆಯಲ್ಲಿ ಇಂದು ಬೆಳಿಗ್ಗೆ ಸ್ವಲ್ಪ ತೊಂದರೆ ಉಂಟಾಯಿತು, ಮಹಾವಿದ್ಯಾಲಯದ ಕ್ಯಾಂಪಸ್ ಚನ್ನಾಗಿದೆ. ಅತಿ ಸುವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಿತು ಎಂದು ಹೇಳಿದರು.
-ರಾಮಚಂದ್ರ ಹೆಚ್ .ಕೆ
ಶಿಕ್ಷಕರು,
ಬೆಂಗಳೂರು ಉತ್ತರ ವಲಯ 4 ರ,
ತಿಂಡ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.
3) ಪ್ರತಿವರ್ಷವೂ ನಾವು ಪ್ರತಿಭಾ ಕಾರಂಜಿಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ತಾಲೂಕು,ಜಿಲ್ಲೆ ಮತ್ತು ರಾಜ್ಯ ಮಟ್ಟಕ್ಕೇ ಆಯ್ಕೆಯಾಗಿ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ತುಂಬಾ ಚೆನ್ನಾಗಿ ಇತ್ತು.
-ವೀಣಾ
ಶಿಕ್ಷಕಿ
ರಾಯಚೂರು ಕೆ.ಪೀ.ಎಸ್. ಇ . ಮಠಮಾರಿ.
***********