ದೆಹಲಿ ಕರ್ನಾಟಕ ಸಂಘಕ್ಕೆ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾದ ಸಿಎಂ ನಾಗರಾಜರು…
ದೆಹಲಿ / ಬೆಂಗಳೂರು : ರಾಜಕೀಯ ಚುನಾವಣೆಗಳು ನೋಡಿದ್ದೀರಿ ಆದರೆ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಕರ್ನಾಟಕ ಸಂಘಕ್ಕೆ ವಿಶ್ವದ ಮಟ್ಟದಕ್ಕೆ ಎತ್ತರಕ್ಕೆ ತೆಗೆದುಕೊಂಡ ಹೋದ ಶ್ರೀ ಸಿಎಂ ನಾಗರಾಜರು ಮಾನ್ಯ ಪ್ರಧಾನ ಮಂತ್ರಿಗಳನ್ನ ಕರೆತರಿಸಿ ಅಮೃತ ಮಹೋತ್ಸವ ಸಂದರ್ಭದಲ್ಲಿ ಎರಡು ಗಂಟೆ 10 ನಿಮಿಷ ದೆಹಲಿ ಕರ್ನಾಟಕ ಸಂಘಕ್ಕೆ ಸಮಯ ನೀಡಿ. ಸರಿಸುಮಾರು ಕರ್ನಾಟಕದಿಂದ 3500 ಕಲಾವಿದರನ್ನು ಕರೆತರಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿಸಿದ ಕೀರ್ತಿ ಶ್ರೀ ಸಿ ಎಂ ನಾಗರಾಜರದ್ದು ಸರಿಸುಮಾರು ನಾಲ್ಕೂವರೆ ಕೋಟಿ ಧನ ಸಹಾಯ ಒಂದುವರೆ ಕೋಟಿ ಸಂಘಕ್ಕೆ ಖಾತೆಗೆ ಜಮಾ ಇವರು ಅಧ್ಯಕ್ಷರಾದ ಆಗ ನಿಂದಲೂ ಸಹ ಒಂದು ರೂಪಾಯಿಯೂ ಸಹ ಸಂಘದಿಂದ ತೆಗೆಯದೆ ಕೋಟ್ಯಾಂತರ ರೂಪಾಯಿ ಹೊರಗಡೆ ತಂದು ಧನ ಸಂಗ್ರಹಣ ಮಾಡಿ ರಾಷ್ಟ್ರ ರಾಜಧಾನಿಯಲ್ಲಿ ನಮ್ಮ ಕರ್ನಾಟಕದಿಂದ ಬರುವ ಮಕ್ಕಳಿಗೆ ಯುಪಿಎಸ್ಸಿ ಉನ್ನತ ಶಿಕ್ಷಣ ಮಕ್ಕಳಿಗೆ ವಸತಿ ಶಾಲೆ ಮಾಡಬೇಕೆಂಬುದು ಇವರ ಮನದಾಸೆ ಆದರೆ ಇವರ ಚುನಾವಣೆ ಸಂದರ್ಭದಲ್ಲಿ ಇವರ ಬಗ್ಗೆ ಅತಿ ಹೆಚ್ಚು ಅಪಪ್ರಚಾರ ಮಾಡಿ ಅತಿ ಹೆಚ್ಚು ಜಾತಿ ರಾಜಕೀಯ ಅಸ್ತ್ರ ಬಳಸಿಕೊಂಡು ಇವರನ್ನು ಸೋಲಿಸಲು ಮೊದಲಿದ್ದ ಎಲ್ಲಾ ಅಧ್ಯಕ್ಷರುಗಳು ಪದಾಧಿಕಾರಿಗಳು ಒಂದಾದರೂ ಸಹ ಇವರು ಇವರನ್ನು ಸೋಲಿಸಲು ಸಾಧ್ಯವಾಗಲಿಲ್ಲ ಇವರ ಪಟ್ಟ ಶ್ರಮ ಇವರು ವಿಶ್ವಮಟ್ಟಕ್ಕೆ ಕರ್ನಾಟಕ ಸಂಘವನ್ನು ಪರಿಚಯಿಸಿದ ಕೀರ್ತಿ ಇವರನ್ನ ಮತ್ತೊಮ್ಮೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರನ್ನಾಗಿ ದೆಹಲಿ ಕನ್ನಡಿಗರು ಮಾಡಿದ್ದಾರೆ ಇವರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ಚವರಮಂಗಳದ ಗ್ರಾಮದವರು ಇವರು ದೆಹಲಿ ಕನ್ನಡಿಗರಿಗೆ ತಮ್ಮ ಕುಟುಂಬಗಳಿಗಿಂತ ಚೆನ್ನಾಗಿ ನೋಡಿಕೊಂಡು ಅವರ ಕಷ್ಟ ಸುಖಗಳಲ್ಲಿ ಒಂದಾಗಿ ಮಾರಕ ರೋಗ ಕರೋನಾ ಸಂದರ್ಭದಲ್ಲಿ ಎಲ್ಲರೂ ಭಯದಿಂದ ಒಳಗಡೆ ಇದ್ದರೆ ಅವರ ಅಂತ್ಯ ಸಂಸ್ಕಾರಗಳನ್ನು ಕೂಡ ಸ್ವತಹ ಇವರೇ ಮಾಡಿರುವ ಒಂದು ದೊಡ್ಡತನ… ಇವರು ಯಾವುದೇ ಜಾತಿ ಮತ ಪ್ರಾಂತ್ಯ ಬಿಟ್ಟು ದೆಹಲಿಯಲ್ಲಿ ಎಲ್ಲಾ ಒಂದೇ ಜಾತಿ ಅದು ಕನ್ನಡ ಜಾತಿ ಎಂಬ ಒಂದು ಸ್ಲೋಗನ್ ದಿಂದ ಕೆಲಸ ಮಾಡುತ್ತಿರುವ ಇವರನ್ನ ಮತ್ತೊಮ್ಮೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿ ಇನ್ನು ಹೆಚ್ಚಿನ ಜವಾಬ್ದಾರಿಗಳು ನೀಡಿದ್ದಾರೆ… ಕರ್ನಾಟಕ ಸಂಘದ ಚುನಾವಣೆ ಯಾವುದೇ ರಾಜಕೀಯ ಪಕ್ಷಗಳ ಚುನಾವಣೆಗಿಂತ ಹೆಚ್ಚು ಮೊಟ್ಟಮೊದಲಿಗೆ ದೆಹಲಿ ಕರ್ನಾಟಕ ಸಂಘದಲ್ಲಿ ನಡೆದಿದೆ…. ಸೋಲಿಲ್ಲದ ಸರದಾರ ಸಿ.ಎಂ. ನಾಗರಾಜ್ ಸತತವಾಗಿ ಎಂಟನೇ ಬಾರಿ ಚುನಾವಣೆಯಲ್ಲಿ ಗೆ ಜಯಶೀಲರಾಗಿದ್ದಾರೆ…

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!