*ಶಿಕ್ಷಕ ಡಾ.ವಿ.ಬಿ. ಚೌಗಲೆಯವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ*
ರಾಯಬಾಗ: ತಾಲೂಕಿನ ಸುಕ್ಷೇತ್ರ ದಿಗ್ಗೆವಾಡಿಯ ಪ್ರತಿಷ್ಠಿತ ಮಹಾಕಾಳಿ ಶಿಕ್ಷಣ ಸಂಸ್ಥೆಯ ದಿಗ್ಗೆವಾಡಿ ಅನುದಾನಿತ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಡಾ. ವಿ. ಬಿ. ಚೌಗಲೆ ಅವರು ಪ್ರಸಕ್ತ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದರು.
ಶಾಲಾ ಶಿಕ್ಷಣ ಇಲಾಖೆ, ಚಿಕ್ಕೋಡಿ ಉಪನಿರ್ದೇಶಕರು, ಚಿಕ್ಕೋಡಿ ಇವರು ಶೈಕ್ಷಣಿಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರೌಢ ವಿಭಾಗದಲ್ಲಿ ಒಟ್ಟು 8 ಜನ ಶಿಕ್ಷಕರನ್ನು ಆಯ್ಕೆ ಮಾಡಿದ್ದರು. ಇದರಲ್ಲಿ ರಾಯಬಾಗ ತಾಲೂಕಿನ ದಿಗ್ಗೆವಾಡಿಯ ಡಾ. ವಿ. ಬಿ. ಚೌಗಲೆ ಅವರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು ಸಂತೋಷದ ವಿಷಯ.
ಇದೇ ಸೆಪ್ಟೆಂಬರ್ 6 ರಂದು ರಾಯಬಾಗದ ಮಹಾವೀರ ಭವನದಲ್ಲಿ ನಡೆದ ಶಿಕ್ಷಕರ ದಿನೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ಪ ಪೂ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು, ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಡಿ ಎಮ್ ಐಹೊಳೆ ಜನಪ್ರಿಯ ಶಾಸಕರು ರಾಯಬಾಗ, ಉದ್ಘಾಟಕರಾಗಿ ಶ್ರೀ ಮಹೇಂದ್ರ ತಮ್ಮಣ್ಣವರ್ ಶಾಸಕರು ಕುಡಚಿ., ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಸೀತಾರಾಮು ಆರ್ ಎಸ್. ಉಪನಿರ್ದೇಶಕರು ಚಿಕ್ಕೋಡಿ, ಶ್ರೀ ಸಂಜು ಹುಲ್ಲೋಳಿ ಪ್ರಾಂಶುಪಾಲರು ಡಯಟ್ ಚಿಕ್ಕೋಡಿ.
ಶ್ರೀ ಸುರೇಶ್ ಮುಂಜೆ ತಹಶೀಲ್ದಾರ್ ರಾಯಬಾಗ.
ಡಾ|| ಸುರೇಶ್ ಕದ್ದು ಇಓ ರಾಯಬಾಗ ಪಾಲ್ಗೊಂಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜಪ್ಪ ಆರ್ ಮತ್ತು ಡಯಟ್ ಪ್ರಾಂಶುಪಾಲರಾದ ಸಂಜು ಹುಲ್ಲೋಳಿ ಅವರು ಪ್ರಶಸ್ತಿ ಪುರಸ್ಕೃತ ಡಾ|| ವಿ ಬಿ ಚೌಗುಲೆ ರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಡಾ||ವಿ.ಬಿ.ಚೌಗಲೆ ರವರು “ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದು ಖುಷಿಯಾಗಿದೆ. ಸಾಧನೆಗೆ ಮಹಾಕಾಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿವೇಕ ಅಣ್ಣಾ ಪಾಟೀಲ, ಪ್ರಣಯ ಅಣ್ಣಾ ಪಾಟೀಲ್, ಆರ್ ಬಿ ಹೊಸಳ್ಳಿ, ಗದಗದ ಉಪನಿರ್ದೇಶಕರಾದ ಮಹೇಶ್ ಪೋತದಾರ, ಡಾಕ್ಟರ ಕಾಡಯ್ಯ ಹಿರೇಮಠ್ ಸ್ವಾಮಿಗಳು, ಗಂಗಣ್ಣವರ ಸರ್ ,ಬೂದಿಹಾಳ ಸರ್, ಲಕ್ಷ್ಮೇಶ್ವರ ಸರ್, ಶ್ರೀ ವಿಷ್ಣು ಅರಗೆ ಸರ್,ಹೊನಮಾನೆ ಸರ್, ಐನಾಪುರ ಸರ್, ಡಾಕ್ಟರ್ ಜಯವೀರ, ಜೋಶಿ ಮೇಡಂ, ಇನಾಮದಾರ್ ಮೇಡಂ , ಚುಟುಕು ಕವಿ, ಜೆಡಿ ಕವಿ ಜ್ಯೋತಿ ರೂಪಾಳೆ, ಮಹಾಕಾಳಿ ಶಿಕ್ಷಣ ಸಂಸ್ಥೆಯ ಎಲ್ಲಾ ಶಿಕ್ಷಕ ಬಂಧುಗಳು ಅವರಿಗೆ ಅಭಿನಂದಿಸುತ್ತೇನೆ” ಎಂದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಚಿಕ್ಕೋಡಿ ಉಪ ನಿರ್ದೇಶಕರು,ಕ್ಷೇತ್ರ ಶಿಕ್ಷಣಾಧಿಕಾರಿಗಳು ರಾಯಬಾಗ ಹಾಗೂ ಕುಡಚಿ ಶಾಸಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಹಾಕಾಳಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
*ವರದಿ. ಅಮರ ಎನ್. ಕಾಂಬಳೆ*