ಹಳದಿ ಮಾರ್ಗ ಮೆಟ್ರೋ ಸಂಚಾರಕ್ಕೆ ಹಸಿರು ನಿಶಾನೆ
ಬೆಂಗಳೂರು : ಇಂದು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ‘ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ’ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಭಾಗವಹಿಸಿದರು. ಬಳಿಕ ರಾಗಿಗುಡ್ಡ ಮೆಟ್ರೋದಿಂದ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರಯಾಣಿಸಲಾಯಿತು.
ಹೆಣ್ಣು ಪ್ರಗತಿ ಹೊಂದಿದರೆ ಒಂದು ಕುಟುಂಬ, ರಾಜ್ಯ, ದೇಶ ಪ್ರಗತಿ ಆದಂತೆ. ಇದಕ್ಕೆ ನಿದರ್ಶನವೆಂಬಂತೆ ಮಹಿಳಾ ಪೈಲಟ್ ಮೆಟ್ರೋ ಚಲಾಯಿಸಿದ್ದು ಇದು ನಮ್ಮ ದೇಶವನ್ನು ಮುನ್ನಡೆಸುವ ಶಕ್ತಿಯ ಸಂಕೇತ. ಈ ವೇಳೆ 16 ವಿದ್ಯಾರ್ಥಿಗಳು, 8 ಜನ ಸಾರ್ವಜನಿಕರು, ಹಳದಿ ಮಾರ್ಗ ನಿರ್ಮಾಣ ಮಾಡಿದ ತಂಡದ 8 ಮಂದಿ ಪ್ರಯಾಣದ ಸಂತಸವನ್ನು ಆನಂದಿಸಿದರು.