ಮುಸ್ಲಿಮರ ವಿರುದ್ಧ ದ್ವೇಷ ಹರಡಿಸಿಸುವ “ಉದಯಪುರ ಫೈಲ್” ಚಿತ್ರ ಪ್ರದರ್ಶನ ತಡೆ ಹಿಡಿಯಲು ಆಗ್ರಹ
ಕೊಪ್ಪಳ ಜೂಲೈ 9, ಸಮಾಜದಲ್ಲಿ ಮತ್ತು ಸಾಮಾನ್ಯ ಜನರಲ್ಲಿ ಮುಸ್ಲಿಮ ರ ವಿರುದ್ಧ ದ್ವೇಷ ಹರಡಿಸುವ ಚಲನ ಚಿತ್ರ “ಉದಯಪುರ ಫೈಲ್” ಆಗಿದೆ ಎಂದು ಆರೋಪಿಸಿ ಪ್ರದರ್ಶನವನ್ನು ಸರಕಾರ ಕೂಡಲೇ ತಡೆ ಹಿಡಿಯಬೇಕು ಎಂದು ಆಲ್ ಇಂಡಿಯಾ ಉರ್ದು ವೆಲ್ಫೇರ್ ಡೆವಲಪ್ಮೆಂಟ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರಿನ ಅಧ್ಯಕ್ಷರಾದ ಕಲಬುರಗಿಯ ಜೈಬಾ ತಬಸುಮ್ ಆಗ್ರಹ ಪಡಿಸಿದಾರೆ.
ಸದರಿ ಚಲನ ಚಿತ್ರದಲ್ಲಿ ಇಸ್ಲಾಂ ಧರ್ಮ ಮತ್ತು ಮುಸ್ಲಿಂರ ವಿರುದ್ಧ ದ್ವೇಷ ಮತ್ತು ವಿಷ ಬೀಜ ಬಿತ್ತುವ ಸನ್ನಿವೇಶಗಳು ಉದ್ದೇಶಪೂರಕವಾಗಿ ತೋರಿಸಲಾಗಿದೆ ಎಂದು ಆರೋಪಿಸಿದ ಅವರು ಅಲ್ಲದೆ ನಮ್ಮ ಭಾರತದ ಸಂವಿಧಾನ ಮತ್ತು ಕಾನೂನಿನ ಬಗ್ಗೆ ಅದರ ವಿರುದ್ಧವಾಗಿ ಕೆಲವು ಸನ್ನಿವೇಶಗಳು ಕೂಡ ಇದರಲ್ಲಿ ಕಂಡು ಬರುತ್ತಿವೆ ಎಂದು ಆರೋಪ ಮಾಡಿದ್ದಾರೆ,ಅಲ್ಲದೆ ಗ್ಯಾನ ವ್ಯಾಪಿ ಮಸೀದಿಯ ಪ್ರಕರಣದ ಬಗ್ಗೆ ತಪ್ಪು ಸಂದೇಶ ತೋರಿಸಲಾಗುತಿದೆ, ಮುಸ್ಲಿಂ ಸಮಾಜದ ಮೌಲ್ವಿ ಗಳನ್ನು ಭಯೋತ್ಪಾದಕರಂತೆ ಚಲನಚಿತ್ರದಲ್ಲಿ ಬಿಂಬಿಸಲಾಗುತಿದೆ ಇಸ್ಲಾಂ ಧರ್ಮದ ದಾರುಲ್ ಉಲುಮ್ ಮತ್ತು ದೇವಬಂಧ್ ಸಂಸ್ಥೆಗಳಿಗೆ ಭಯೋತ್ಪಾದಕರ ಕೇಂದ್ರ ಎಂದು ಉದ್ದೇಶಪೂರಕ ಆಗಿ ಸಮಾಜದಲ್ಲಿ ಅಶಾಂತಿ ಉದ್ಭವಿಸುವಂತೆ ತೋರಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿವೆ, ಹಜರತ ಆಯಿಷಾ ಸಿದ್ದಿಕಾ (ರ ) ರವರ ಕುರಿತು ಅವಹೇಳನ ಮಾಡಲಾಗಿದೆ ಎಂದು ಸಹ ಅವರು ಆರೋಪ ಮಾಡಿದ್ದಾರೆ,ಇಂತಹ ಚಲನಚಿತ್ರ ಪ್ರದರ್ಶನಗೊಂಡು ಸಮಾಜದಲ್ಲಿ ಜನಸಾಮಾನ್ಯರಲ್ಲಿ ಅಶಾಂತಿ ಉಂಟು ಮಾಡಿದಂತಾಗುತ್ತದೆ ಸದರಿ ಚಲನಚಿತ್ರ ಜೂಲೈ 11 ರಿಂದ ಪ್ರದರ್ಶನ ಗೊಳ್ಳಲು ಸಿದ್ದ ವಾಗಿದ್ದು ಕೂಡಲೇ ಚಿತ್ರ ಬಿಡುಗಡೆ ಪ್ರಕ್ರಿಯೆವನ್ನು ತಡೆ ಹಿಡಿಯಬೇಕು ಎಂದು ಕರ್ನಾಟಕ,ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮತ್ತು ಕೇಂದ್ರ ಸರಕಾರಕ್ಕೆ ಆಲ್ ಇಂಡಿಯಾ ಉರ್ದು ವೆಲ್ಫೇರ್ ಡೆವಲಪ್ಮೆಂಟ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ನ ಅಧ್ಯಕ್ಷರಾದ ಕಲಬುರ್ಗಿಯ ಜೇಬಾ ತಬಸುಮ್ ಆಗ್ರಹ ಪಡಿಸುತ್ತಾರೆ.