ಜೀ ಕನ್ನಡ ನ್ಯೂಸ್‌ ಮೂರನೇ ವಾರ್ಷಿಕೋತ್ಸವ ಸಂಭ್ರಮ

ಬೆಂಗಳೂರು : ಜೀ ಕನ್ನಡ ನ್ಯೂಸ್‌ ಮೂರನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದಿರುವ 46 ಮಂದಿಯನ್ನ ಗುರ್ತಿಸಿ ಜೀ ಅಚೀವರ್ಸ್‌ ಅವಾರ್ಡ್-20 HB HB25 ಪ್ರದಾನ ಮಾಡಲಾಯಿತು.
ಬೆಂಗಳೂರಿನ ಪ್ರತಿಷ್ಠಿತ ದಿ ರಿಟ್ಜ್‌ ಕಾರ್ಲ್ಟ್ರನ್‌ ಹೋಟೆಲ್‌ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ
ಡಿಸಿಎಂ ಡಿ.ಕೆ.ಶಿವಕುಮಾರ್ ಘನ ಉಪಸ್ಥಿತಿ ವಹಿಸಿದ್ದರು. ರಾಜ್ಯದ ವಿವಿಧ ಸಾಧಕರಿಗೆ ಡಿಕೆ ಶಿವಕುಮಾರ್ ಅವರು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಇದೇ ವೇಳೆ ಮಾತಾಡಿದ ಡಿಕೆಶಿ ಅವರು.
ಜೀ ಕನ್ನಡ ನ್ಯೂಸ್‌ ಗುರ್ತಿಸಿರೋ ಸಾಧಕರು ನಿಜಕ್ಕೂ ಸಮಾಜದ ಆಸ್ತಿ. ನಾಡು ಮತ್ತು ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸನ್ಮಾನ ಮತ್ತು ಪ್ರಶಸ್ತಿಗಳು ಸೇವೆಗೆ ಕೊನೆಯೆಂದು ಭಾವಿಸಬಾರದು. ಮತ್ತಷ್ಟು ಪ್ರೇರಣೆ
ಮತ್ತು ಹುಮ್ಮಸ್ಸು ಎಂದು ತಿಳಿಯಬೇಕು ಅಂತ ಹೇಳಿದ್ರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ವೇಳೆ ಜೀ ಕನ್ನಡ ನ್ಯೂಸ್‌ ಸಂಪಾದಕರಾದ ರವಿ ಅವರು ಸ್ವಾಗತ ಭಾಷಣದಲ್ಲಿ ಅವಾರ್ಡಿಗಳ ಸೇವೆ ಮತ್ತು ಕೈಂಕರ್ಯವನ್ನ ಗುಣಗಾನ ಮಾಡಿದರು. ಅಲ್ದೆ ಜೀ ಕನ್ನಡ ನ್ಯೂಸ್‌ ಮೂರನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸಮಸ್ತ ವೀಕ್ಷಕರ ಸಹಕಾರಕ್ಕೆ ಧನ್ಯವಾದಗಳನ್ನ ತಿಳಿಸಿದರು.

ಮಾಜಿ ಸಿಎಂ ಡಿವಿ ಸದಾನಂದಗೌಡ, ಸಚಿವರಾದ ರಾಮಲಿಂಗಾರೆಡ್ಡಿ ಚಿತ್ರತಾರೆಯರಾದ ಧೃವ ಸರ್ಜಾ ಮತ್ತು ಪ್ರಿಯಾಂಕ ಉಪೇಂದ್ರ ಕೂಡ ವೇದಿಕೆಯಲ್ಲಿ ಆಸೀನರಾಗಿದ್ದರು. ಜೊತೆಗೆ ಡಾ.ರಾಜಕುಮಾರ್ ಪುತ್ರಿಯರಾದ ಶ್ರೀಮತಿ ಪೂರ್ಣಿಮಾ ರಾಮ್‌ಕುಮಾರ್‌ ಹಾಗೂ ಶ್ರೀಮತಿ ಲಕ್ಷ್ಮಿ ಗೋವಿಂದರಾಜು ಹಾಜರಿದ್ದು ಸಾಧಕರನ್ನು ಸನ್ಮಾನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ 46 ಸಾಧಕರನ್ನು ಅಭಿನಂದಿಸಿರೋ ವಿಡಿಯೋ ಪ್ಲೇ ಮಾಡಲಾಯಿತು. ಜೀ ಕನ್ನಡ ನ್ಯೂಸ್‌ ಗುರ್ತಿಸಿರೋ ಅಚೀವರ್ಸ್‌ ನಾಡು-ನುಡಿ, ನೆಲ-ಜಲ, ಸಮಾಜ ಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಎಲೆಮರೆಯ ಕಾಯಿಯಂತಿರೋ ವ್ಯಕ್ತಿಗಳಿಗೆ ಮುಖ್ಯವಾಹಿನಿ ಕಲ್ಪಿಸಿಕೊಟ್ಟು ಗೌರವಿಸಿರೋದು ಉತ್ತಮ ಕಾರ್ಯ ಅಂತ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ರಾಮಲಿಂಗಾರೆಡ್ಡಿ : ಸದ್ದಿಲ್ಲದೆ ಸ್ವಂತಕ್ಕೆ ಏನನ್ನೂ ಗಳಿಸಿಕೊಳ್ಳದ ನಿಸ್ವಾರ್ಥ ಜನರು ನಾಡಿನ ಉದ್ದಗಲಕ್ಕೂ ಜೀವಿಸುತ್ತಿದ್ದಾರೆ. ಸದಾ ಸಮಾಜ, ರಾಜ್ಯಕ್ಕೆ ಮಿಡಿಯುವ ಸ್ಪಂದಿಸುವ ಮಂದಿಗೆ ಪ್ರೋತ್ಸಾಹ ಸಿಕ್ಕಾಗ ಮತ್ತಷ್ಟು ರಾಜ್ಯವು ಅಭಿವೃದ್ಧಿಯಾಗಲಿದೆ. ಸಮೂಹ ಮಾಧ್ಯಮಗಳು ಎಲೆಮರೆ ಕಾಯಿಯಂತಿರೋ ಮಂದಿಗೆ ಕೈ ಕೊಟ್ಟು ಮುಖ್ಯವಾಹಿನಿಗೆ ತಂದು ಬಿಟ್ಟರೆ ಉಪಯೋಗ ಹೆಚ್ಚಾಗಲಿದೆ.

ಡಿ.ವಿ. ಸದಾನಂದಗೌಡ :- ರಾಜ್ಯದ ಉದ್ದಗಲದ ಸಾಧಕರನ್ನು ಗುರ್ತಿಸಿ ವೇದಿಕೆ ಕಲ್ಪಿಸಿಕೊಟ್ಟದ್ದೀರಿ. ಬದಲಾದ ಮಾಧ್ಯಮಗಳ ಸಂರಚನೆಯಾದ ಸೋಷಿಯಲ್‌ ಮೀಡಿಯಾ, AI ರೀತಿಯ ಸಮೂಹ ಮಾಧ್ಯಮ ಜನರನ್ನ ಕ್ಷಣಾರ್ಧದಲ್ಲಿ ಆಕರ್ಷಿಸುತ್ತಿದೆ. ಮುಂದಿನ ದಾರಿದೀಪ ಹೆಜ್ಜೆಗುರುತು ಸೃಷ್ಟಿಸುವ ಜೀ ಕನ್ನಡ ನ್ಯೂಸ್‌ ಕಾರ್ಯ ಮರೆಯೋ ಹಾಗಿಲ್ಲ. ನಿಜವಾದ ಸಾಧಕರಿಗೆ ಸನ್ಮಾನ ದೊರೆತಿರುವುದು ಅಭಿನಂದನೀಯ.

ಶ್ರೀ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ :- ವಸ್ತುನಿಷ್ಠ ಸುದ್ದಿ ಪ್ರಸಾರದಿಂದ ಜೀ ಕನ್ನಡ ನ್ಯೂಸ್‌ ರಾಜ್ಯದ ಜನರ ಮನಸಿಗೆ ಮುಟ್ಟಿದೆ. ಮೂರನೆ ವರ್ಷದ ವಾರ್ಷಿಕೋತ್ಸವ ಸಂಭ್ರದಲ್ಲಿ ವಿವಿಧ ಕ್ಷೇತ್ರಗಳ ಸಾಧನೆ ಮಾಡಿರೋ ಗಣ್ಯರನ್ನ ಗುರ್ತಿಸಿ ಗೌರವ ಸಲ್ಲಿಸಿರುವುದು ಅಭಿನಂದನೆಗೆ ಅರ್ಹವಾದುದು. ಕಾಲ ಕಾಲಕ್ಕೆ ಬದಲಾವಣೆ ಅಗತ್ಯವಿರೋ ಹಾಗೆ ಗಣ್ಯರ ಸಾಧನೆ ವಿಭಿನ್ನವಾಗಿದ್ದು ಗುರ್ತಿಸುವಿಕೆ ಕೂಡ ಅಗಾಧ ಪ್ರಕ್ರಿಯೆ. ವಿವಿಧ ಕ್ಷೇತ್ರಗಳ ಅಪೂರ್ವ ಸಾಧಕರ ಸನ್ಮಾನ ಮತ್ತೊಂದು ಸಾಧನೆಗೆ ಮೆಟ್ಟಿಲಾಗಲಿ, ಸ್ಪೂರ್ತಿಯಾಗಲಿ.

ಜೀ ಕನ್ನಡ ನ್ಯೂಸ್ ಅಚೀವರ್ಸ್ ಅವಾರ್ಡ್‌ 2024
ಪ್ರಶಸ್ತಿ ಪುರಸ್ಕೃತರು
1. ಸತ್ಯನಾರಾಯಣ, ರಾಷ್ಟ್ರೀಯ ಪ್ಯಾರಾಲಿಂಪಿಕ್ ಕೋಚ್‌
2. ಸಂಜಯ್ ಬೈದ್‌, ಉದ್ಯಮಿ
3. ಬಿಸಿ ಜಯಪ್ರಸಾದ್‌, ಸಾವಯವ ಕೃಷಿಕ
4. ಗೋಪಿಕೃಷ್ಣ, ಸಮಾಜ ಸೇವಕ
5. ಶಶಿಕುಮಾರ್ ತಿಮ್ಮಯ್ಯ, ಉದ್ಯಮಿ
6. ಕೆ.ಎಂ.ಸಂದೇಶ್‌, ಸಮಾಜ ಸೇವಕ
7. ಸುಂದರ್‌ ರಾಜ್‌ಪತ್ತಿ, ಉದ್ಯಮಿ
8. ಡಾ.ಎಎಸ್‌ ಬಾಲಸುಬ್ರಮಣ್ಯ, ಶಿಕ್ಷಣ ತಜ್ಞರು
9. ನವೀನ್ ಕೆ, ಉದ್ಯಮಿ
10. ನಿರ್ಮಲಾ ಹೆಚ್‌ ಸುರಪುರ, ಸಮಾಜ ಸೇವಕರು
11. ನರಸಿಂಹಮೂರ್ತಿ ಮದ್ಯಸ್ತ, ಹೋಟೆಲ್‌ ಉದ್ಯಮಿ
12. ಜೆ.ವೆಂಕಟೇಶ್‌, ಸಮಾಜ ಸೇವಕ
13. ಡಾ.ಶರದ್ ಕುಲಕರ್ಣಿ, ಆಯುರ್ವೇದ ವೈದ್ಯರು
14. ಡಾ. ಎನ್‌. ಕೀರ್ತಿರಾಜ್‌, ಜ್ಯೋತಿಷಿ
15. ಎಂ.ಶಿವರಾಜ್‌, ಬಿಬಿಎಂಪಿ ಮಾಜಿ ಕಾರ್ಪೊರೇಟರ್‌
16. ರಾಘವೇಂದ್ರ ಕುಲಕರ್ಣಿ, ಜ್ಯೋತಿಷಿ
17. ಡಾ.ಶ್ರೀ ಸುಪ್ರೀತ್‌, ಆಧ್ಯಾತ್ಮಿಕ ಚಿಂತಕರು
18. ಮಲ್ಲಿಕಾರ್ಜುನ ಗಂಗಾಂಬಿಕೆ, ಸಮಾಜ ಸೇವೆ
19. ಡಾ.ದ್ಯಾನೇಶ್ವರ್‌, ವೈದ್ಯರು
20. ಗಂಗಾಧರ ರಾಜು, ಸಮಾಜ ಸೇವೆ
21. ಡಾ.ಜಿ.ಎಸ್.ರವಿ, ಶಿಕ್ಷಣ ತಜ್ಞರು
22. ಎ.ಅಮೃತರಾಜ್‌, ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ
23. ಬಸವರಾಜ ಆರ್‌.ಕಬಾಡೆ, BSWML BBMP ಮುಖ್ಯ ಎಂಜಿನಿಯರ್‌
24. ಡಾ.ಕೆ. ಮುನಿಯಪ್ಪ ಓದೇನಹಳ್ಳಿ, ಸಮಾಜ ಸೇವಕ-ಬಿಜೆಪಿ ನಾಯಕ
25. ವೇಲು ನಾಯ್ಕರ್‌, ಬಿಬಿಎಂಪಿ ಮಾಜಿ ಕಾರ್ಪೊರೇಟರ್‌
26. ಎನ್.‌ರೀನಾ ಸುವರ್ಣ, ACP-ವೈಟ್‌ಫೀಲ್ಡ್‌
27. ಡಾ.ಜಿಎಸ್‌ ಶ್ರೀಧರ್‌, ಸಮಾಜ ಸೇವಕರು
28. ಪ್ರೊ.ಎಂ.ವಿ.ಪ್ರಕಾಶ್‌, ಶಿಕ್ಷಣ ತಜ್ಞರು
29. ಅಲಗಣಿ ಕಿರಣ್‌ಕುಮಾರ್‌, ಸಮಾಜ ಸೇವಕರು
30. ಜಿಎಸ್‌. ಶಶಿಕುಮಾರ್‌, ಸಮಾಜ ಸೇವಕರು
31. ಡಿಎಸ್‌ ರಾಮಲಿಂಗೇಗೌಡ, ಸಮಾಜ ಸೇವಕರು
32. ಟಿಜಿ ವಿಶ್ವಾಸ್‌, ಉದ್ಯಮಿ
33. ಡಾ.ಜಿಎಸ್‌ ಲತಾ ಜೈಪ್ರಕಾಶ್‌, ಸಮಾಜ ಸೇವಕ-ಉದ್ಯಮಿ
34. ಎಸ್‌.ಕುಮಾರ್‌, ಸಮಾಜ ಸೇವಕರು
35. ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ-ರಕ್ಷಣಾ ತಜ್ಞರು
36. ಡಾ.ಶ್ರೀಮಂತ್‌ ಕುಂಬಾರ್‌, ವೈದ್ಯರು
37. ಡಾ.ಫಾರೂಕ್‌ ಅಹ್ಮದ್‌ ಮಣೂರ್‌, ವೈದ್ಯರು
38. ಅರುಣಕುಮಾರ್‌ ಎಸ್‌.ಪಾಟೀಲ್‌, ಸಮಾಜ ಸೇವಕರು
39. ಯು.ಜೆ. ಮಲ್ಲಿಕಾರ್ಜುನ್‌, ಕನ್ನಡ ಹೋರಾಟಗಾರ-ಸಮಾಜ ಸೇವಕರು
40. ಕೃಷ್ಣಮೂರ್ತಿ ಸಿಎನ್‌, ಸಮಾಜ ಸೇವಕರು
41. ಡಾ.ಪಂಡಿತ ಶ್ರೀ ಸಿದ್ದಾಂತ ಅರಣ್ ಶರ್ಮ, ಜ್ಯೋತಿಷಿ-ವಾಸ್ತು ಸಲಹೆಗಾರರು
42. ಸಿಎಂ ಶಾಬಾಜ್‌ ಖಾನ್‌, ಸಮಾಜ ಸೇವಕರು
43. ಅನಿಲ್ ಕುಮಾರ್‌ ಜಿ.ಆರ‌, ಶಿಕ್ಷಣ ತಜ್ಞರು
44. ಡಾ.ಆಶಿಕ್‌, ಬಿಜಿ, ವೈದ್ಯರು
45. ಸುರೇಶ್‌ ಶಂಕರ್ ಜತ್ತಿ, ಶಿಕ್ಷಣ ತಜ್ಞರು
46. ಎಂಬಿ. ಜೋಷಿ, ಜ್ಯೋತಿಷಿ

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!