ಉಸ್ಮಾನಗಣಿ ವಿರುದ್ಧ ಎಫ್.ಐ.ಆರ್ ದಾಖಲಿಸಲು ವಕ್ಫ್ ಮಂಡಳಿ ಆದೇಶ, ನ್ಯಾಯಕ್ಕೆ ದೊರೆತ ಜಯ :ದೂರುದಾರ ಶ್ಯಾಮೀದ ರೇಷ್ಮಿ
ಇಳಕಲ್ಲ: ಪಟ್ಟಣದ ಹಜರತ್ ಸೈಯ್ಯದ ಮುರ್ತುಜಾ ಷಾ ಖಾದ್ರಿ ದರ್ಗಾದಲ್ಲಿ ನಡೆದಿರುವ ಭೃಷ್ಠಾಚಾರದ ಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಉಸ್ಮಾನಗನಣಿ ಹುಮನಾಬಾದ ಮೇಲೆ ಕ್ರೀಮಿನಲ್ ಮತ್ತು ಸಿವ್ಹಿಲ್ ಪ್ರಕರಣ ದಾಖಲಿಸುವಂತೆ ಮಂಡಳಿಯ ಕಾರ್ಯ ನಿರ್ವಹಣಾಧಿಕಾರಿ ಆದೇಶ ಮಾಡಿದ್ದಾರೆ.
ಸುಮಾರು ಕೋಟಿ ರೂಗಳ ಅವ್ಯವಹಾರ ನಡೆದ ಬಗ್ಗೆ ಶ್ಯಾಮಿದ್ ರೇಶ್ಮಿ ಎಂಬುವರು ಮಂಡಳಿಗೆ ದೂರು ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಡಳಿಯು ಹಿರಿಯ ಕಾನೂನು ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆದೇಶ ಮಾಡಿತ್ತು.
ತನಿಖಾಧಿಕಾರಿಗಳು ಕಾನೂನಾತ್ಮಕ ಮತ್ತು ನಿಯಮಾನುಸಾರವಾಗಿ ತನಿಖೆ ನಡೆಸಿದಾಗ ಅಪಾದಿತ ವ್ಯಕ್ತಿ ತನ್ನ ಮೇಲಿನ ಆರೋಪಗಳು ಸುಳ್ಳು ಎಂದು ಸಾಬಿತು ಪಡೆಸುವಲ್ಲಿ ವಿಫಲವಾದ ಪ್ರಯುಕ್ತ ತನಿಖಾ ತಂಡವು ಪ್ರಕರಣದಲ್ಲಿ ದರ್ಗಾ ಆಡಳಿತ ಮಂಡಳಿಯ ಹಣ ದುರುಪಯೋಗ ಮತ್ತು ಭೃಷ್ಠಾಚಾರ ನಡೆದಿರುವುದು ಸತ್ಯವೆಂದು ಪರಿಗಣಿಸಿ ಕ್ರೀಮಿನಲ್ ಮತ್ತು ಸಿವ್ಹಿಲ್ದಾವೆ ಮಾಡಿ ಹಣ ವಸೂಲಿಗೆ ಕ್ರಮಕೈಗೊಳ್ಳುವಂತೆ ಮಂಡಳಿಗೆ ವರದಿ ನೀಡಿತ್ತು.
ದಿನಾಂಕ: ೦೩-೧೦-೨೪ ರಂದು ನಡೆದ ರಾಜ್ಯ ವಕ್ಫ್ ಮಂಡಳಿಯ ೩೬೦ನೇ ಬೋರ್ಡ ಮಿಟಿಂಗ್ನಲ್ಲಿ ವಿಷಯ ನಂ: ೫ ಮತ್ತು ೬ ರಲ್ಲಿ ಚರ್ಚೆ ಮಾಡಿ ತನಿಖಾಧಿಕಾರಿಗಳು ನೀಡಿದ ವರದಿಯಂತೆ ಅನುಮೊದನೆ ನೀಡಿ ಕ್ರಮಕ್ಕೆ ನಿರ್ಣಯಕೈಗೊಂಡಿತ್ತು.
ಇದನ್ನು ಆಧರಿಸಿ ದಿನಾಂಕ: ೦೬-೧೨-೨೦೨೪ ರಂದು ಕಾರ್ಯ ನಿರ್ವಹಣಾಧಿಕಾರಿ ಕೊನೆಗೂ ಮಾಜಿ ಅಧ್ಯಕ್ಷ ಉಸ್ಮಾನಗನಿ ಹುಮನಾಬಾದ ಮೇಲೆ ಎಫ್ಐಆರ್ ದಾಖಲಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಸೂಚಿಸಿ ಆದೇಶಿಸಿದ್ದಾರೆ.
ಪ್ರಸುತ್ತ ಮಂಡಳಿ ನೀಡಿರುವ ಆದೇಶದಂತೆ ಜಿಲ್ಲಾ ವಕ್ಫ್ ಅಧಿಕಾರಿಗಳು ಅಪಾದಿತ ವ್ಯಕ್ತಿಯ ವಿರುದ್ಧ ಐಪಿಸಿಯ ಯಾವ-ಯಾವ ಸೇಕ್ಷನ್ಗಳ ಅಡಿ ತಕ್ಷಣಕ್ಕೆ ದೂರು ದಾಖಲಿಸಲು ದೂರುದಾರ ಶ್ಯಾಮೀದ ರೇಷ್ಮಿ ಸುದ್ಧಿ ಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸವೀ೯ಸ್ ರಸ್ತೆ ದಗಾ೯ ಮಳಿಗೆಗಳ ಬಾಡಿಗೆ ಹಣ, ಪಪೆ೯ಕ್ಟ ಬ್ಯಾಂಕಿನಲ್ಲಿ ಇಟ್ಟ ದಗಾ೯ದ ಹಣ ಸೇರಿದಂತೆ ಇತರೆ ಅವ್ಯವಹಾರಗಳ ಕುರಿತು ಸಮಗ್ರ ತನಿಕೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೆಕೇಂದು ಆಗ್ರಹಿಸಿದ್ದಾರೆ. ಸುದ್ಧಿ ಗೋಷ್ಠಿಯಲ್ಲಿ ಜಾಫರ್ ಸಿದ್ದಿಕಿ, ಅಬ್ದುಲ್ ಖಾದರ್ ಮೆದಿಕಿನಾಳ, ಗಡಾದ ಸೇರಿದಂತೆ ಇತರರು ಇದ್ದರು.
ಕಳೆದ ೨೦ ವರ್ಷಗಳಿಂದ ದರ್ಗಾ ಆಡಳಿತ ಮಂಡಳಿಯಲ್ಲಿ ಭಾರಿ ಪ್ರಮಾಣದ ಭೃಷ್ಠಾಚಾರ ಮತ್ತು ಅವ್ಯವಹಾರ ನಡೆದ ಬಗ್ಗೆ ಆರೋಪ ವಿತ್ತು ಇದು ಜನಸಾಮಾನ್ಯರನ್ನು ಮತ್ತು ಇಡಿ ಮುಸ್ಲಿಂ ಸಮಾಜವನ್ನು ವಂಚಿಸಿದ ಪ್ರಕರಣವಾಗಿತ್ತು ಇದಕ್ಕೆ ಸಂಬಂಧಿಸಿದಂತೆ ಮಂಡಳಿಯ ಕ್ರಮ ಸ್ವಾಗತಾರ್ಹವಾಗಿದೆ.
ರಿಯಾಜ ಭನ್ನು ಶ್ಯಾಮಿದ ರೇಶ್ಮಿ
ಸಾಮಾಜಿಕ ಹೋರಾಟಗಾರ ದೂರುದಾರ
ಸಂಸ್ಥೆಯ ಸೇವೆಗಾಗಿ ಇದ್ದ ಅಧಿಕಾರವನ್ನು ಹಣದ ಆಮಿಷಕ್ಕೆ ಒಳಗಾಗಿ ದುರ್ಬಳಕೆ ಮಾಡಿಕೊಂಡ ವ್ಯಕ್ತಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು. ಮಂಡಳಿಯ ಕ್ರಮ ಸ್ವಾಗತಿಸುತ್ತೇನೆ ಎಂದರು.