ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ
ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಸೂಚನೆ
==
*ವಿಜಯನಗರವು ರಸ್ತೆ ಅಪಘಾತ ಮುಕ್ತ ಜಿಲ್ಲೆಯಾಗಲಿ*
==
ಹೊಸಪೇಟೆ (ವಿಜಯನಗರ) ಸೆಪ್ಟೆಂಬರ್ 09 (ಕ.ವಾ): ಮಾನವ ಸಮಾಜಕ್ಕೆ ಕಳಂಕಪ್ರಾಯವಾದ ರಸ್ತೆ ಅಪಘಾತಗಳು ಸಂಭವಿಸಿದAತೆ ವಿಜಯನಗರ ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೆಪ್ಟೆಂಬರ್ 09 ರಂದು ನಡೆದ ಜಿಲ್ಲಾಮಟ್ಟದ ರಸ್ತೆ ಸುರಕ್ಷತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತಾ ಸಮಿತಿ ಸಭೆಗಳು ಇನ್ಮುಂದೆ ಸಹ ನಿಯಮಿತವಾಗಿ ನಡೆಯಬೇಕು. ಸಭೆಯಲ್ಲಿ ಚರ್ಚಿಸಿದಂತೆ ಬೇಗನೇ ಕಾರ್ಯಪ್ರವೃತ್ತರಾದಲ್ಲಿ ಅಪಘಾತಗಳ ಪ್ರಮಾಣವನ್ನು ತಗ್ಗಿಸಬಹುದಾಗಿದೆ ಎಂದು ತಿಳಿಸಿದರು.
ವಿಜಯನಗರ ಜಿಲ್ಲೆಯು ಐತಿಹಾಸಿಕವಾಗಿ ಜಾಗತಿಕ ಮಾನ್ಯತೆ ಹೊಂದಿದೆ. ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಈ ವಿಷಯವನ್ನು ಮನಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ರಾಷ್ಟಿçÃಯ ಹೆದ್ದಾರಿ-50 ವಿಜಯನಗರ ಜಿಲ್ಲೆಯಲ್ಲಿ ಹಾದುಹೋಗುತ್ತದೆ. ಎನ್‌ಹೆಚ್-63 ಹೊಸಪೇಟೆ-ಬಳ್ಳಾರಿ ರಾಷ್ಟಿçÃಯ ಹೆದ್ದಾರಿ ಸಹ ವಿಜಯನಗರ ಜಿಲ್ಲೆಯ ಪ್ರಮುಖ ರಸ್ತೆಯಾಗಿದೆ. ಈ ರಾಷ್ಟಿçÃಯ ಹೆದ್ದಾರಿಗಳು, ರಾಜ್ಯ ಹೆದ್ದಾರಿ ಮತ್ತು ಇನ್ನೀತರ ಜಿಲ್ಲೆಯಲ್ಲಿನ ಎಲ್ಲಾ ರಸ್ತೆಗಳ ಸುರಕ್ಷತೆ ದೃಷ್ಟಿಯಿಂದ ಕೂಡಲೇ ಅಪಘಾತ ವಲಯಗಳನ್ನು ಗುರುತಿಸಿ, ವೇಗ ನಿಯಂತ್ರಣ ಮಾಡಲು ರಸ್ತೆಗೆ ರಂಬಲ್ ಸ್ಟಿçÃಪ್ ಹಾಗೂ ಸೂಕ್ತ ಸೈನ್ ಬೋರ್ಡ್ ಅಳವಡಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವಿಷಯದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ರಸ್ತೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಬಾರದು. ಸೂಕ್ತವಾದ ಕಡೆಗಳಲ್ಲಿ ಮಾತ್ರ ಬ್ಯಾರಿಕೇಡಗಳನ್ನು ಅಳವಡಿಸಿ ಅಪಘಾತಗಳ್ನು ತಪ್ಪಿಸಬೇಕು. ರಾಷ್ಟಿçÃಯ ಹೆದ್ದಾರಿ-50ರಲ್ಲಿನ ಸರ್ವಿಸ್ ರೋಡ್‌ಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನ ಹರಿಸಬೇಕು. ಆದಾಗ್ಯೂ ನಿರ್ಲಕ್ಷö್ಯ ವಹಿಸಿದಲ್ಲಿ ನಿರ್ಧಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಜಯನಗರ ಜಿಲ್ಲಾ ವ್ಯಾಪ್ತಿಯ ಬಡೆಸಲಡಕು ಹಾಗೂ ಹ್ಯಾಸಿಂಕೆರೆ ಸೇರಿದಂತೆ ಇನ್ನೀತರ ಕಡೆಗಳಲ್ಲಿ ಅಫಘಾತಗಳು ಮರುಕಳಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚನೆ ನೀಡಿದರು.
ರಾಷ್ಟಿçÃಯ ಹೆದ್ದಾರಿ-63 ಬಳ್ಳಾರಿ-ಹೊಸಪೇಟೆ ರಸ್ತೆ ಮಧ್ಯೆದಲ್ಲಿ ವಿವಿಧೆಡೆಯಲ್ಲಿ ಆಮೆವೇಗದಲ್ಲಿ ನಡೆಯುತ್ತಿರುವ ರಸ್ತೆ ದುರಸ್ತಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಹೊಸಪೇಟೆ ಮತ್ತು ಬಳ್ಳಾರಿಯಂತಹ ಪ್ರಮುಖ ನಗರಗಳ ಅಸಂಖ್ಯೆ ಜನರು ನರಕಯಾತನೆ ಅನುಭವಿಸಿ ನಿತ್ಯ ಸಂಚರಿಸುವAತಹ ದುಸ್ಥಿತಿಯಿದೆ. ಈ ರಸ್ತೆಯ ನಿರ್ಮಾಣದ ಹೊಣೆಹೊತ್ತ ಗುತ್ತಿಗೆದಾರರು ಇದನ್ನು ಅರಿಯಬೇಕು. ಪೊಲೀಸ್ ಭದ್ರತೆ ಅಷ್ಟೇ ಅಲ್ಲ ಏನೇ ಇದ್ದರೂ ಜಿಲ್ಲಾಡಳಿತ ಸಹಕಾರ ನೀಡಲಿದ್ದು ಈ ರಸ್ತೆ ದುರಸ್ತಿ ಕಾರ್ಯವು ಬೇಗನೆ ಪೂರ್ಣವಾಗಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ರಾಷ್ಟಿçÃಯ ಹೆದ್ದಾರಿ, ರಾಜ್ಯ ಹೆದ್ದಾರಿ ಅಥವಾ ಯಾವುದೇ ರಸ್ತೆ ಇರಲಿ ಲಾರಿಗಳು ಎಲ್ಲೆಂದರಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು. ಯಾವ ಯಾವ ಕಡೆಗಳಲ್ಲಿ ಅವೈಜ್ಞಾನಿಕವಾಗಿ ರೋಡ್ ಬ್ರೇಕರ್‌ಗಳನ್ನು ಹಾಕಲಾಗಿದೆಯೋ ಆ ಬಗ್ಗೆ ಕೂಡಲೇ ಸರ್ವೇ ನಡೆಸಿ ಅವುಗಳನ್ನು ತೆರವುಗೊಳಿಸುವ ಕಾರ್ಯ ಜಿಲ್ಲಾದ್ಯಂತ ಎಲ್ಲಾ ಕಡೆಗಳಲ್ಲಿ ಕ್ಷಿಪ್ರಗತಿಯಲ್ಲಿ ಆಗಬೇಕು. ಅವಶ್ಯಕತೆ ಇರುವಲ್ಲಿ ಮಾತ್ರ ವೈಜ್ಞಾನಿಕ ರೀತಿಯಲ್ಲಿ ರೋಡ್ ಬ್ರೇಕರಗಳನ್ನು ಹಾಕಬೇಕು ಎಂದು ಸೂಚನೆ ನೀಡಿದರು.
ಪ್ರಮುಖ ಚರ್ಚೆ: ಹೊಸಪೇಟೆ ನಗರದಲ್ಲಿ ಈ ಹಿಂದೆ ಇದ್ದ ಕೆಲವು ಏಕಮುಖ ರಸ್ತೆಗಳನ್ನು ರದ್ದುಗೊಳಿಸಿ, ಹೊಸದಾಗಿ ಏಕಮುಖ ರಸ್ತೆಗಳ ಕುರಿತು ಅಧಿಸೂಚನೆ ಹೊರಡಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಹೊಸಪೇಟೆಯಿಂದ ಬಳ್ಳಾರಿ ಕಡೆಗೆ ಕಾರಿಗನೂರ ಮೂಲಕ ಹಾದು ಹೋಗುವ ರಾಷ್ಟಿçÃಯ ಹೆದ್ದಾರಿಯಲ್ಲಿ ಸ್ಪೀಡ್ ಬ್ರೇಕರಗಳನ್ನು ಅಳವಡಿಸಲು ಮತ್ತು ಕಾರಿಗನೂರ ರಸ್ತೆಯ ಬದಿಯಲ್ಲಿ ಫುಟಪಾತ್ ಮೇಲೆ ಲಾರಿಗಳನ್ನು ನಿಲ್ಲಿಸುವುದನ್ನು ತಡೆಯುವಂತೆ ನೀಡಿದ ಮನವಿಯ ಬಗ್ಗೆ ಅಧಿಕಾರಿಗಳು ಸಭೆಗೆ ತಿಳಿಸಿದರು. ಈ ಬಗ್ಗೆ ಪರಿಶೀಲಿಸಿ ನೀರ್ಣಯಿಸಲು ತಿಳಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್. ಅವರು ಮಾತನಾಡಿ, ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಲ್ಲಿ ಸಂಚಾರಿ ಪೊಲೀಸರನ್ನು ನಿಯುಕ್ತಿಗೊಳಿಸಿ ಸ್ಪಂದನೆ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಆರ್‌ಟಿಓ ವಸಂತ್ ಚವ್ಹಾಣ್, ಜಿಲ್ಲಾ ರಸ್ತೆ ಸುರಕ್ಷಿತಾ ಸಮಿತಿಯ ಸದಸ್ಯ ಕಾರ್ಯದರ್ಶಿ ದೇವದಾಸ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
