ಬೆಂಗಳೂರು : ರಾಜ್ಯದ ವಿವಿಧ ಭಾಗದ ಜಿಲ್ಲಾ ಮತ್ತು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಸರಕಾರ ಮೇಲೆ ಒತ್ತಡ ತಂದು ಕಾನಿಪ ಸಂಘದ ಸಹಕಾರದೊಂದಿಗೆ ಪತ್ರಕರ್ತರಿಗೆ ನ್ಯಾಯ ಒದಗಿಸಿಕೊಟ್ಟ ಸಿ.ಎಂ.ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಅವರಿಗೆ ಕಾನಿಪ ಕೇಂದ್ರ ಕಚೇರಿ ಕಂದಾಯ ಭವನದಲ್ಲಿ ಸಂಘದಿಂದ ಸತ್ಕರಿಸಿ ಗೌರವಿಸಲಾಯಿತು.
ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿದ ಜಿಲ್ಲಾ ಕಾನಿಪ ಘಟಕದಿಂದ ಸತ್ಕರಿಸಿದರೆ,ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರ ಅಧ್ಯಕ್ಷತೆಯಲ್ಲಿ ಬಾಗಲಕೋಟೆ ಜಿಲ್ಲಾ ಕಾನಿಪ ಘಟಕದಿಂದ ರಾಜ್ಯ ಸಮೀತಿ ಸದಸ್ಯ ಮಹೇಶ ಅಂಗಡಿ,ಜಿಲ್ಲಾಧ್ಯಕ್ಷ ಆನಂದ ದಲಬಂಜನ್, ಪ್ರಧಾನ ಕಾರ್ಯದರ್ಶಿ ಶಂಕರ ಕಲ್ಯಾಣಿ ಅವರ ಪರವಾಗಿ ಹಾಯ್ ಮಿಂಚು ಪತ್ರಿಕೆ ಸಂಪಾದಕ ಅಮನ್ ಕೊಡಗಲಿ ಕೆ.ವಿ.ಪ್ರಭಾಕರ ಅವರನ್ನು ಗೌರವಿಸಿ ಸತ್ಕರಿಸಿದರು. ರಾಜ್ಯ ಕಾರ್ಯದರ್ಶಿ ಲೋಕೇಶ, ಮತ್ತಿಕೆರೆ ಜಯರಾಮ, ಇತರೆ ಸದಸ್ಯರು ಉಪಸ್ಥಿತರಿದ್ದರು.
