ಜಾತಿ ನಿಂದನೆ, ಕರ್ತವ್ಯಕ್ಕೆ ಅಡ್ಡಿ ಪ್ರಕರಣ; ನಾಗರಾಜ ಹೊಂಗಲ್, ಮಹಾಂತೇಶ ಸಮಾಳದ, ನಾಗರಾಜ ನಗರಿ ಸೇರಿ ಒಂಬತ್ತು ಜನ ಆರೋಪ ಮುಕ್ತ.
ಬಾಗಲಕೋಟೆ; ಇಳಕಲ್ ನಗರಸಭೆ ಅವೈಜ್ಞಾನಿಕವಾಗಿ ಸಂಗ್ರಹಿಸುತ್ತಿದ್ದ ಇಳಕಲ್ ನಗರಸಭೆ ನೀತಿಯ ವಿರುದ್ಧ ಹೋರಾಟ ನಡೆಸಿದ್ದ ನಾಗರಾಜ ಹೊಂಗಲ್, ಮಹಾಂತೇಶ ಸಮಾಳದ, ನಾಗರಾಜ ನಗರಿ ಸೇರಿದಂತೆ ಒಂಬತ್ತು ಜನ ಹೋರಾಟಗಾರರು
ಜಾತಿ ನಿಂದನೆ ಮತ್ತು ಕರ್ತವ್ಯಚ್ಯುತಿ ಆರೋಪದಿಂದ ಮುಕ್ತಗೊಂಡಿದ್ದಾರೆ.
ಇಳಕಲ್ ನಗರಸಭೆ ವಾಸ್ತವಕ್ಕಿಂತಲೂ ನಾಲ್ಕು ಪಟ್ಟಿಗೂ ಅಧಿಕ ತೆರಿಗೆ ವಸೂಲಿ ಮಾಡುತ್ತಿದ್ದ ಕ್ರಮದ ವಿರುದ್ಧ ಜನ ಜಾಗೃತಿ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಗಳು ಇಳಕಲ್ ನಗರದಲ್ಲಿ ಜಂಟಿಯಾಗಿ ಬೃಹತ್ ಆಂದೋಲನವನ್ನೇ ನಡೆಸಿತ್ತು.
ಜಿಲ್ಲಾಧಿಕಾರಿಗಳು ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ಇಳಕಲ್ ನಗರಸಭೆ ತೆರಿಗೆ ಸಂಗ್ರಹದ ತಪ್ಪು ಧೋರಣೆಯನ್ನು ತಿದ್ದಿಕೊಳ್ಳಬೇಕೆಂದು ನಿರ್ದೇಶನ ನೀಡಿದ್ದರು.
ಇದೇ ಸಂದರ್ಭದಲ್ಲಿ ನಗರಸಭೆಯ ಅಂದಿನ ಪೌರಾಯುಕ್ತ ಅರವಿಂದ ಜಮಖಂಡಿ, ಕಂದಾಯ ಅಧಿಕಾರಿ ನಾಮದೇವ ಲಮಾಣಿ ಅವರು ಹೋರಾಟಗಾರರ ವಿರುದ್ಧ ಪ್ರತ್ಯೇಕವಾಗಿ 2016ರ ನವೆಂಬರನಲ್ಲಿ ಕರ್ತವ್ಯಕ್ಕೆ ಅಡ್ಡಿ ಮತ್ತು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಿದ್ದರು.
ಕಳೆದ 7 ವರ್ಷಗಳಿಂದ ಜಾತಿ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ಬಾಗಲಕೋಟೆ ಜಿಲ್ಲಾ 2ನೇ ಹೆಚ್ಚವರಿ ನ್ಯಾಯಾಲಯ ಶನಿವಾರ ತೀರ್ಪು ನೀಡಿ, ಪ್ರಕರಣದಲ್ಲಿನ ಆರೋಪಿಗಳನ್ನೆಲ್ಲ ಆರೋಪ ಮುಕ್ತಗೊಳಿಸಿದರು.
ನ್ಯಾಯಾಲಯದ ಆದೇಶ ಪ್ರಾಮಾಣಿಕ ಹೋರಾಟ ಮತ್ತು ಸತ್ಯಕ್ಕೆ ಸಿಕ್ಕ ಜಯ ಎಂದು ನಾಗರಾಜ ಹೊಂಗಲ್, ಮಹಾಂತೇಶ ಸಮಾಳದ, ನಾಗರಾಜ ನಗರಿ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ.
ಆರೋಪಿತರ ಪರ ನ್ಯಾಯವಾದಿ ರಮೇಶ್ ಬದ್ನೂರ ವಕಾಲತ್ತು ವಹಿಸಿದ್ದರು.