ಭವ ಬಂಧನದ ಸಂಸಾರ ಸಾಗರದಲ್ಲಿ ಜೀವನ ನಡೆಸಬೇಕೆಂದರೆ ಶಿವಾನುಭವ ಸಂಪದ ಹಾಗೂ ಸತ್ಸಂಗಗಳತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾತ್ರ ಸಾಧ್ಯ:-ಶ್ರೀಮನ್ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮೀಜಿಗಳು
ಹೊಸಪೇಟೆ ವಿಜಯನಗರ ಜಿಲ್ಲೆ ಇಂದು ವಿಜಯ ನಗರ ಜಿಲ್ಲೆಯ ಹೊಸಪೇಟೆ ನಗರದ ಶ್ರೀ ಜಗದ್ಗುರು ಕೊಟ್ಟೂರು ಸಂಸ್ಥಾನ ಮಠ ಹೊಸಪೇಟೆಯಲ್ಲಿ ಕಾಯಕ ಯೋಗಿ ತ್ರಿವಿಧ ದಾಸೋಹಿ ಪೂಜ್ಯ ಶ್ರೀಮನ್ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ ದಿವ್ಯ ಪ್ರಕಾಶದಲ್ಲಿ, ಹಂಪಿ ಹೇಮಕೂಟ ಶೂನ್ಯಸಿಂಹಾಸನಾದೀಶ್ವರ ಪೂಜ್ಯ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ರವರ ಪಾವನಸನ್ನಿಧಾನದಲ್ಲಿ 1159 ನೇ ಮಾಸಿಕ ಶಿವಾನುಭವ ಸಂಪದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪೂಜ್ಯ ಶ್ರೀಗಳು ಆಶೀರ್ವಚನ ನೀಡುತ್ತಾ, ಈ ಒಂದು ಭವ ಬಂಧನದ ಸಂಸಾರ ಸಾಗರದಲ್ಲಿ ಜೀವನ ನಡೆಸಬೇಕೆಂದರೆ ಶಿವಾನುಭವ ಸಂಪದ ಹಾಗೂ ಸತ್ಸಂಗಗಳತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾತ್ರ ಸಾಧ್ಯ, ಹಾಗೂ ಸರ್ವಧರ್ಮ ಸಮನ್ವಯದಂತಹ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರುವುದರಿಂದ ಮನಃಶಾಂತಿ ನೆಮ್ಮದಿ, ಪ್ರೀತಿ, ಪ್ರೇಮ, ವಾತ್ಸಲ್ಯದಿಂದ ಸಮಾಜದಲ್ಲಿ ಬಾಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಕಾಂಗ್ರೆಸ್ ಮುಖಂಡರು ಹಾಗೂ ಅಂಜಮನ್ ಖಿದ್ಮತೆ ಇಸ್ಲಾಂ ಸಮಿತಿಯ ಅಧ್ಯಕ್ಷರಾದ ಹೆಚ್, ಎನ್ ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ಅತ್ಯಾಧುನಿಕ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿಸಂಬಂದ ಬೆಲೆಗಳು ಕಡಿಮೆಯಾಗುತ್ತಿವೆ. ಹಣ ಅಧಿಕಾರಗಳು ಶಾಶ್ವತವಲ್ಲ, ರೂಪ ಯೌವ್ವನ ಶಾಶ್ವತವಲ್ಲ, ಜೀವನ ನಿರ್ವಹಣೆ ಮಾಡಲು ತಂದೆ, ತಾಯಿ, ಗುರು, ಹಿರಿಯರು, ಕುಟುಂಬದ ಪ್ರೀತಿ ಪ್ರೇಮ ವಾತ್ಸಲ್ಯಗಳಿಂದ ಸಾಧ್ಯ, ಇಂಥ ಕೌಟುಂಬಿಕ ಮೌಲ್ಯಗಳು ಈ ಒಂದು ಗುರುಗಳ ಸನ್ನಿಧಿಯಲ್ಲಿ ಮಾತ್ರ ದೊರಕಲು ಸಾಧ್ಯ ಅಂತಹ ಗುರುಗಳ ಸನ್ನಿಧಿ ನಮ್ಮ ತಾಲೂಕಿನಲ್ಲಿರುವುದು ನಮ್ಮ ನಿಮ್ಮೆಲ್ಲರ ಸೌಭಾಗ್ಯ, ಸತ್ಸಂಗ ಗಳಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನ ಭಾಗವಹಿಸಿ ಹಾಗೂ ತಮ್ಮ ಮಕ್ಕಳನ್ನು ಕರೆತರಬೇಕೆಂದು ಮನವಿ ಮಾಡಿದರು.
ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಇತ್ತೀಚಿನ ದಿನಗಳಲ್ಲಿ ಗುರುಗಳ ಮಾರ್ಗದರ್ಶನವಿಲ್ಲದೇ ಹಲವಾರು ರೀತಿಯ ದುರ್ಗುಣಗಳಿಗೆ, ದುಶ್ಚಟಗಳಿಗೆ ಬಲಿಯಾಗಿ ತನು, ಮನ, ಧನ, ಸಮಯ, ವಯಸ್ಸು, ಆರೋಗ್ಯ, ಆತ್ಮ ಸಂಯಮ, ಆತ್ಮ ಗೌರವ, ಜೀವನದ ಗುರಿ ಉದ್ದೇಶಗಳನ್ನು, ಒಟ್ಟಾರೆಯಾಗಿ ಸರ್ವಸ್ವವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗೂ ಜವಾಬ್ದಾರಿ ರಹಿತವಾಗಿ ವರ್ತಿಸಿ ಕುಟುಂಬದಲ್ಲಿನ ತಂದೆ ತಾಯಿ ಹೆಂಡತಿ ಮಕ್ಕಳ ಸಾವಿರಾರು ಕನಸುಗಳನ್ನು ಹಾಳು ಮಾಡುತ್ತಿದ್ದಾರೆ ಎಂದರು
. ಈ ಸಮಾರಂಭದಲ್ಲಿ ಆರ್‌ಪಿ ಪ್ರಕಾಶ್, ಜಿ ಭರಮನಗೌಡ, ಗುಜ್ಜಲ್ ಚಂದ್ರಶೇಖರ, ಕಟಗಿ ಜಂಬಯ್ಯ ನಾಯಕ, ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು